Asianet Suvarna News Asianet Suvarna News

ಕೊರೋನಾ ಅಟ್ಟಹಾಸಕ್ಕೆ ತತ್ತರಿಸಿದ ನೇಕಾರರು: ನೇಯ್ದ ಸೀರೆ ಮಾರಾ​ಟ​ವಾ​ಗದೆ ಸಂಕ​ಷ್ಟ

ದೊರೆ​ಯದ ಕಚ್ಚಾ ವಸ್ತು| ನೂರಾರು ಕೈ ಮಗ್ಗಗಳು ಬಂದ್‌ ಆಗುವ ಆತಂಕ| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳ, ಕೇಸೂರ ಗ್ರಾಮ​ಗ​ಳ​ಲ್ಲಿ ಬಹುತೇಕ ಜನರು ನೇಕಾರಿಕೆ ನಂಬಿ ಜೀವನ ಸಾಗಿ​ಸು​ತ್ತಿ​ದ್ದಾರೆ| ಕೊರೋನಾ ಏಟಿಗೆ ನೇಯ್ಗೆ ಉದ್ಯಮ ತತ್ತರಿಸಿ​ದೆ| ಲಾಕ್‌​ಡೌ​ನ್‌​ನಿಂದ ಮದುವೆ, ಮುಂಜಿ​ಯಂತ ಕಾರ್ಯ​ಕ್ರ​ಮ​ಗಳು ನಡೆಯ​ದಿ​ರು​ವು​ದ​ರಿಂದ ಸೀರೆಗಳ ವ್ಯಾಪಾರ ಬಂದ್‌|

Weavers Faces Problems due to LockDown in Koppal District
Author
Bengaluru, First Published Apr 27, 2020, 9:08 AM IST | Last Updated Apr 27, 2020, 9:08 AM IST

ದೋಟಿಹಾಳ(ಏ.27): ಇಡೀ ನಾಡಿನಾದ್ಯಂತ ಕಾಡುತ್ತಿರುವ ಕೊರೋನಾ ವೈರಸ್‌ ರೋಗದ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಲಾಕ್‌ಡೌನ್‌ ಆದೇಶದ ಪ್ರಯುಕ್ತ ನೇಕಾರರಿಗೆ ಕಚ್ಚಾವಸ್ತು ಪೂರೈಕೆಯಾಗದ ಕಾರಣ ಅವಳಿ ಗ್ರಾಮದಲ್ಲಿನ ನೂರಾರು ಕೈ ಮಗ್ಗಗಳು ಬಂದ್‌ ಆಗುವ ಆತಂಕ ಎದುರಿಸುತ್ತಿವೆ. ಅವರ ನೇಕಾರಿಕೆ ಉದ್ಯೋಗ ನೆಲ ಕಚ್ಚುವ ಸಂಭವ ಇದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳ, ಕೇಸೂರ ಗ್ರಾಮ​ಗ​ಳ​ಲ್ಲಿ ಬಹುತೇಕ ಜನರು ನೇಕಾರಿಕೆ ನಂಬಿ ಜೀವನ ಸಾಗಿ​ಸು​ತ್ತಿ​ದ್ದಾರೆ. ಆದರೆ, ಕೊರೋನಾ ಏಟಿಗೆ ನೇಯ್ಗೆ ಉದ್ಯಮ ತತ್ತರಿಸಿ​ದೆ. ನೇಯ್ದ ಸೀರೆಗಳಿಗೆ ಬೆಲೆ ಇಲ್ಲ​ದಾ​ಗಿ​ದೆ. ಲಾಕ್‌​ಡೌ​ನ್‌​ನಿಂದ ಮದುವೆ, ಮುಂಜಿ​ಯಂತ ಕಾರ್ಯ​ಕ್ರ​ಮ​ಗಳು ನಡೆಯ​ದಿ​ರು​ವು​ದ​ರಿಂದ ಸೀರೆಗಳ ವ್ಯಾಪಾರ ಬಂದ್‌ ಆಗಿದೆ. ಮಾರು​ಕಟ್ಟೆಬಂದ್‌ ಆಗಿ​ದ್ದ​ರಿಂದ ಕುಟುಂಬ ನಿರ್ವ​ಹಣೆ ಕಷ್ಟ​ವಾ​ಗಿದೆ. ಹೀಗಾಗಿ, ಸರ್ಕಾರ ನೇಕಾ​ರ ನೆರ​ವಿಗೆ ಬರ​ಬೇ​ಕಿ​ದೆ.

ಹಸಿರು ವಲಯದ ಯುವಕನಿಂದ ರೆಡ್‌ ಝೋನ್‌ ಯುವತಿಯೊಂದಿಗೆ ಮದುವೆ: ಹೆಚ್ಚಿದ ಆತಂಕ

ರಾಜ್ಯ ಸರಕಾರ ಮತ್ತು ಜವಳಿ ಇಲಾಖೆ ನೇಕಾರರನ್ನು ಕಾರ್ಮಿಕರನ್ನಾಗಿ ಘೋಷಣೆ ಮಾಡಿ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಅರಳಿಕಟ್ಟಿ ಗ್ರಾಮದ ನೇಕಾರ ವಿಜಯಕುಮಾರ ಅವರು ಹೇಳಿದ್ದಾರೆ. 

ಗ್ರಾಮಗಳಲ್ಲಿನ ನೇಕಾರಿಕೆ ಉದ್ಯೋಗಕ್ಕೆ ಮೂಲ ಕಚ್ಚಾ ವಸ್ತು ಅತ್ಯವಶ್ಯ. ಅದಿ​ಲ್ಲ​ದೆ ತೊಂದರೆಯಾಗಿದೆ. ಬೇರೆ ಜಿಲ್ಲೆಗೆ ಹೋಗಿ ತರಬೇಕಾಗುತ್ತದೆ. ನಿಷೇಧವಿ​ರು​ವುದರಿಂದ ಸಾರಿಗೆ ವ್ಯವಸ್ಥೆ ಇಲ್ಲ. ವೈಯಕ್ತಿಕ ವಾಹನ ಸೌಕರ್ಯ ಮಾಡಿಕಂಡು ಹೋದ​ರೂ ಚೆಕ್‌ಪೋಸ್ಟ್‌​ನ​ಲ್ಲಿ ಬಿಡುತ್ತಿಲ್ಲ. ಬೇರೆ ಕಡೆಯಿಂದ ಕಚ್ಚಾವಸ್ತು ಬರುತ್ತಿ​ಲ್ಲ ಎಂದು   ದೊಟಿಹಾಳದ ಕೈ.ನೇ.ಉ.ಮಾ.ಸ.ಸಂ ಕಾರ್ಯದರ್ಶಿ ರುದ್ರಮುನಿ ಬಿಜ್ಜಲ ತಿಳಿಸಿದ್ದಾರೆ.  

ರಾಜ್ಯ ಸರ್ಕಾರ ನೇಕಾರರ ಕುರಿ​ತು ಮಾಹಿತಿ ನೀಡಲು ಆದೇಶ ಮಾಡಿದೆ. ಮೂರ್ನಾಲ್ಕು ದಿನಗಳಲ್ಲಿ ನೇಕಾರರ ಕುರಿತು ಮಾಹಿತಿ ನೀಡುತ್ತೇವೆ ಎಂದು ಜವಳಿ ಇಲಾಖೆಯ ಸಿಬ್ಬಂದಿ ವಸಂತ ಅವರು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios