Asianet Suvarna News Asianet Suvarna News

ಹಸಿರು ವಲಯದ ಯುವಕನಿಂದ ರೆಡ್‌ ಝೋನ್‌ ಯುವತಿಯೊಂದಿಗೆ ಮದುವೆ: ಹೆಚ್ಚಿದ ಆತಂಕ

ಕೆಂಪು ವಲಯ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಯುವತಿಯೋರ್ವಳನ್ನು ವಿವಾಹವಾದ ಹಸಿರು ವಲಯ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ಯುವಕ| ಹಸಿರು ವಲಯದ ಜನರಲ್ಲಿ ಮನೆ ಮಾಡಿದ ಆತಂಕ| ನವ ದಂಪತಿಗಳನ್ನು, ಅವರ ಪಾಲಕರನ್ನು ಹಾಗೂ ಮದುವೆಯಲ್ಲಿ ಭಾಗವಹಿಸಿದವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕೆಂದು ಆಗ್ರಹ|

Green Zone Young Man Married Red Zone Girl during LockDown in Ballari
Author
Bengaluru, First Published Apr 27, 2020, 8:02 AM IST

ಮುನಿರಾಬಾದ್‌(ಏ.27):  ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ಸಮೀಪದ ಮಟ್ಟಿಮುದ್ಲಾಪುರ ಗ್ರಾಮದ ಯುವಕ ಕೆಂಪು ವಲಯ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಯುವತಿಯೋರ್ವಳನ್ನು ಭಾನು​ವಾರ ಬೆಳಗಿನ ಜಾವ 5ಗಂಟೆಗೆ ವಧುವಿನ ಊರಿನಲ್ಲಿ ವಿವಾಹವಾಗಿದ್ದಾನೆ.

ಈ ವಿವಾಹಕ್ಕೆ ಹಾಟ್‌ಸ್ಪಾಟ್‌ ಹೊಸಪೇಟೆಯಿಂದ 20 ಜನರು ಹಾಗೂ ಹಗರಿಬೊಮ್ಮನಹಳ್ಳಿಯ 25 ಜನರು ಆಗಮಿಸಿ ವಧು-ವರರನ್ನು ಹರಿ​ಸಿ​ದ್ದಾ​ರೆ. ವಿಪರ್ಯಾಸವೆಂದರೆ ಕೊಪ್ಪಳ ಜಿಲ್ಲೆಯು ಹಸಿರು ವಲಯವಾಗಿದ್ದು, ಒಂದೂ ಕೊರೋನಾ ಕೇಸು ಇದುವರೆಗೂ ಪತ್ತೆ​ಯಾ​ಗಿ​ಲ್ಲ. ​ಆದರೆ, ಬಳ್ಳಾರಿ ಜಿಲ್ಲೆಯಲ್ಲಿ 13 ಕೊರೋ​ನಾ ಪ್ರಕರಣಗಳು ದಾಖಲಾಗಿದ್ದು, ಅದನ್ನು ಕೆಂಪು ವಲಯ ಎಂದು ಸರ್ಕಾರ ಘೋಷಣೆ ಮಾಡಿದೆ. ಇದಲ್ಲದೆ ಹೊಸಪೇಟೆ ನಗರವನ್ನು ಹಾಟ್‌ಸ್ಪಾಟ್‌ ವಲಯ ಎಂದು ಘೋಷಿಸಲಾಗಿದ್ದು, ಈ ಭಾಗದ ಜನರು ಹೊಸಪೇಟೆ ಬಿಟ್ಟು ಬೇರೆ ತಾಲೂಕಿಗೆ ಹೋಗುವಂತಿಲ್ಲ. ಇಂತಹದರಲ್ಲಿ ಹೊಸಪೇಟೆಯಿಂದ 20 ಜನರು ಹಗರಿಬೊಮ್ಮನಹಳ್ಳಿಗೆ ಬಂದು ಮದುವೆಯಲ್ಲಿ ಭಾಗವಹಿಸಲು ತೆರಳಿದ್ದಾದರೂ ಹೇಗೆ? ಇವರಿಗೆ ಅಲ್ಲಿಗೆ ಹೋಗಲು ಪರವಾನಗಿ ನೀಡಿದವರಾರು ಎನ್ನುವ ಪ್ರಶ್ನೆ ಎದು​ರಾ​ಗಿ​ದೆ.

ಮನೆಯಿಂದ ಆಚೆ ಬಂದವರಿಗೆ ಸ್ಪೆಷಲ್ ಪಿಪಿಇ ಕಿಟ್ ಹಾಕಿದ ಕೊಪ್ಪಳ ಪೊಲೀಸರು..!

ಪರ​ವಾ​ನಗಿ ಇಲ್ಲದೆ ವಿವಾ​ಹ​:

ಈ ಸಂದರ್ಭದಲ್ಲಿ ವಿವಾಹವಾಗಬೇಕಾದರೆ ಜಿಲ್ಲಾಧಿಕಾರಿಗಳ ಪರವಾನ​ಗಿ ಕಡ್ಡಾಯವಾಗಿರುತ್ತದೆ. ವರನ ಕಡೆಯವರು ಕೊಪ್ಪಳ ಜಿಲ್ಲಾಧಿಕಾರಿಯಿಂದ ಹಾಗೂ ವಧುವಿನ ಕಡೆಯವರು ಬಳ್ಳಾರಿ ಜಿಲ್ಲಾಧಿಕಾರಿಯಿಂದ ವಿವಾಹದ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು. ಆದರೆ, ಎರಡೂ ಜಿಲ್ಲೆ​ಗ​ಳ ಜಿಲ್ಲಾಧಿಕಾರಿಗಳ ಪರವಾ​ನ​ಗಿ ಇಲ್ಲದೇ ಈ ವಿವಾಹ ನಡೆದಿದೆ. ಮಟ್ಟಿಮುದ್ಲಾಪುರ ಗ್ರಾಮಸ್ಥರು ನವ ದಂಪತಿಗಳನ್ನು, ಅವರ ಪಾಲಕರನ್ನು ಹಾಗೂ ಮದುವೆಯಲ್ಲಿ ಭಾಗವಹಿಸಿದವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಕೊರೋನಾ ಟಾಸ್ಕ್‌ ಪೋರ್ಸ್‌ಗೆ ಮಾಹಿತಿ ನೀಡಲಾಗಿದ್ದು, ಅವರು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ಹಗರಿಬೊಮ್ಮನಹಳ್ಳಿ ಠಾಣಾ ಪಿ.ಎಸ್‌.ಐ ಲಕ್ಷ್ಮಣ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios