ಮುಂಡಾಜೆ: ಬೃಹತ್ ಗಾತ್ರದ ಮರ ಉರುಳಿ ಒಂದೂವರೆ ತಾಸು ಸಂಚಾರ ವ್ಯತ್ಯಯ
ರಾಷ್ಟ್ರೀಯ ಹೆದ್ದಾರಿಯಲ್ಲಿನ ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಎಂಬಲ್ಲಿ ಬೃಹತ್ ಗಾತ್ರದ ಮರ ಒಂದು ರಸ್ತೆಗೆ ಉರುಳಿ ಬಿದ್ದು ಸುಮಾರು ಒಂದೂವರೆ ತಾಸು ಮೂಡಿಗೆರೆ ತೆರಳುವ ಹಾಗೂ ಉಜಿರೆಗೆ ಬರುವ ವಾಹನಗಳಿಗೆ ಸಂಚಾರ ವ್ಯತ್ಯಯ ಉಂಟಾಯಿತು.
ಬೆಳ್ತಂಗಡಿ (ಜು.24) : ರಾಷ್ಟ್ರೀಯ ಹೆದ್ದಾರಿಯಲ್ಲಿನ ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಎಂಬಲ್ಲಿ ಬೃಹತ್ ಗಾತ್ರದ ಮರ ಒಂದು ರಸ್ತೆಗೆ ಉರುಳಿ ಬಿದ್ದು ಸುಮಾರು ಒಂದೂವರೆ ತಾಸು ಮೂಡಿಗೆರೆ ತೆರಳುವ ಹಾಗೂ ಉಜಿರೆಗೆ ಬರುವ ವಾಹನಗಳಿಗೆ ಸಂಚಾರ ವ್ಯತ್ಯಯ ಉಂಟಾಯಿತು.
ಮರ ಬೀಳುವ ಸಮಯ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೋಹನ್ ಕುಮಾರ್ ಎಂಬವರ ಪಿಕಪ್ ವಾಹನ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದೆ. ಮರವು ವಿದ್ಯುತ್ ಲೈನ್ ಮೇಲೆ ಉರುಳಿದ್ದು 6 ಎಚ್‌ಟಿ ಕಂಬಗಳು ಹಾಗೂ ಒಂದು ವಿದ್ಯುತ್ ಪರಿವರ್ತಕ ಧರಾಶಾಯಿಯಾಗಿ ಮುಂಡಾಜೆಯ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆದ ಕಾರಣ ಎರಡೂ ಬದಿಯಲ್ಲಿ ಲಾರಿ, ಬಸ್ ಹಾಗೂ ಇತರ ವಾಹನಗಳು ಮೈಲುದ್ದಕ್ಕೆ ಸಾಲುಗಟ್ಟಿನಿಂತಿದ್ದವು.
ಉಪ್ಪಿನಂಗಡಿ: ಭಾರಿ ಮಳೆಗೆ ಹೆದ್ದಾರಿ ತಡೆಗೋಡೆ ಕುಸಿತ
ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರು, ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಸ್ಥಳೀಯರು ಸೇರಿ ಹರಸಾಹಸ ನಡೆಸಿ ಮರ ತೆರವುಗೊಳಿಸಿದರು.
ಗುಂಡಿ -ಬಲ್ಯಾರು ಕಾಪು ಮೂಲಕ ಬದಲಿ ರಸ್ತೆ ಇದ್ದು ಇದು ರಾಷ್ಟ್ರೀಯ ಹೆದ್ದಾರಿಯನ್ನು ಸೇರುತ್ತದೆ. ತೀರಾ ಅಗಲ ಕಿರಿದಾದ ಈ ರಸ್ತೆಯಲ್ಲಿ ಕೆಲವೊಂದು ಲಘು ವಾಹನಗಳು ಹಾಗೂ ದ್ವಿಚಕ್ರ ವಾಹನಗಳು ಯದ್ವಾ ತದ್ವಾ ಸಂಚಾರ ನಡೆಸಿ ಈ ರಸ್ತೆಯೂ ಹಲವು ಸಮಯ ಬ್ಲಾಕ್ ಆಗಿ ವಾಹನ ಸವಾರರು ಪರದಾಡಿದರು. ಸ್ಥಳೀಯರ ಸಹಕಾರದಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.
ಕೆಲವೊಂದು ವಾಹನಗಳು ಮುಂಡಾಜೆಯ ಭಿಡೆ ರಸ್ತೆಯ ಮೂಲಕ ಧರ್ಮಸ್ಥಳದ ಕಡೆ ಪ್ರಯಾಣ ನಡೆಸಿದವು. ಉಜಿರೆ ಕಡೆಯಿಂದ ಬಂದ ವಾಹನಗಳು ಮತ್ತೆ ಧರ್ಮಸ್ಥಳಕ್ಕೆ ತೆರಳಿ ಈ ರಸ್ತೆಯ ಮೂಲಕ ಸಂಚಾರ ನಡೆಸಿದವು. ಘನವಾಹನಗಳ ಸಂಚಾರಕ್ಕೆ ಈ ರಸ್ತೆ ಯೋಗ್ಯವಿಲ್ಲದ ಕಾರಣ, ಅವು ಈ ರಸ್ತೆಯಲ್ಲಿ ಸಂಚಾರ ನಡೆಸದಂತೆ ಸ್ಥಳೀಯರು ಎಚ್ಚರಿಕೆ ವಹಿಸಿದರು.
ಭಾರೀ ಮಳೆ: ಅಪಾಯಮಟ್ಟದಲ್ಲಿ ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು!
ಆ್ಯಂಬುಲೆನ್ಸ್ ಪರದಾಟ: ಮರ ಬಿದ್ದ ವೇಳೆ ಚಿಕ್ಕಮಗಳೂರು ಕಡೆಯಿಂದ ಮಂಗಳೂರಿಗೆ ರೋಗಿಯನ್ನು ಹೊತ್ತ ಆಂಬುಲೆ®್ಸ… ಮರ ಬಿದ್ದಲ್ಲಿವರೆಗೆ ಬಂದಿದ್ದು ಸ್ಥಳೀಯರು ಅದನ್ನು ವಾಪಾಸು ಕಳುಹಿಸಿ ಧರ್ಮಸ್ಥಳ ರಸ್ತೆಯ ಮೂಲಕ ಸಾಗಲು ವ್ಯವಸ್ಥೆ ಮಾಡಿಕೊಟ್ಟರು.