ಮಂಗಳೂರು(ಡಿ. 02)  ಶ್ರೀಲಂಕಾ ದಕ್ಷಿಣ ಭಾಗದಲ್ಲಿ ಚಂಡಮಾರುತದ ಸಾಧ್ಯತೆ ಕಂಡುಬಂದಿದೆ. ಡಿ.6ರವರೆಗೆ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದ್ದು ಇನ್ನು ಎರಡು ದಿನ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.

ಕಡಲಿಗೆ ತೆರಳಿದ ದೋಣಿಗಳು ವಾಪಾಸ್ ಆಗಲು ಸಂದೇಶ ರವಾನಿಸಲಾಗಿದೆ. ಸಮುದ್ರ ತೀರದ ಜನರಿಗೂ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.  ದ.ಕ ಜಿಲ್ಲಾಡಳಿತ ಮತ್ತು ಮೀನುಗಾರಿಕಾ ಇಲಾಖೆಯಿಂದ ಎಚ್ಚರಿಕೆ ನೀಡಿದೆ.

ಮಳೆಯಿಂದ ಈ ಸಾರಿ ಹಾನಿಯಾದ ಬೆಳೆ ಲೆಕ್ಕ.. ಅಬ್ಬಬ್ಬಾ!

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಮತ್ತು ಕೊಡಗು ಜಿಲ್ಲೆಗಳ ಹೆಚ್ಚಿನ ಕಡೆಗಳಲ್ಲಿ ಮತ್ತೆ ಮಳೆಯಾಗಿತ್ತು.

ಕಾಫಿಗೆ ಆಪತ್ತು: ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಕೊಯ್ಲು ನಡೆಯುತ್ತಿದ್ದು ಬೆಳೆಗಾರರು ಕೊಯ್ದು ಕಾಫಿಯನ್ನು ಒಣಗಿಸಲು ಪರದಾಡುವಂತಾಗಿದೆ. ಬಿಸಿಲಿನ ಅಭಾವದಿಂದ ಒಣಗಿಸುವುದು ಹೇಗೆಂಬ ಬೆಳೆಗಾರರ ಚಿಂತೆ ಈ ಮಳೆಯಿಂದ ಇಮ್ಮಡಿಯಾಗಿದೆ.

ಕಾಫಿ, ಕರಿಮೆಣಸು ಸೇರಿದಂತೆ ವಾಣಿಜ್ಯ ಬೆಳೆಗಳು ಆಗಲೇ ಮಳೆ ಅವಾಂತರಕ್ಕೆ ಸಿಲುಕಿದ್ದವು. ಈಗ ಅಳಿದುಳಿದ ಬೆಳೆ ಸಹ ನಷ್ಟವಾಗುವ ಭೀತಿ ಎದುರಾಗಿದೆ.