Asianet Suvarna News Asianet Suvarna News

ಬೆಂಗಳೂರಿಗರಿಗೆ ಹವಾಮಾನ ಇಲಾಖೆ ಎಚ್ಚರಿಕೆ : ಭಾರಿ ಮಳೆ -ಆರೆಂಜ್ ಅಲರ್ಟ್

  • ನಗರದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಗುರುವಾರ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ 
  •  ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಮೇಲ್ಮೈ ಸುಳಿಗಾಳಿ ಮತ್ತು ಕಡಿಮೆ ಒತ್ತಡಗಳ ಪ್ರಭಾವದಿಂದ ಬೆಂಗಳೂರಿನಲ್ಲಿ ಭಾರಿ ಮಳೆ
Weather Department issues orange alert for  bengaluru snr
Author
Bengaluru, First Published Oct 14, 2021, 9:25 AM IST

ಬೆಂಗಳೂರು (ಅ.14): ನಗರದಲ್ಲಿ ಮಳೆಯ (Rain) ಆರ್ಭಟ ಮುಂದುವರಿದಿದ್ದು ಗುರುವಾರ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ (Weather Department) ಎಚ್ಚರಿಕೆ ನೀಡಿದೆ. 

ಬೆಂಗಳೂರು (Bengaluru) ನಗರಕ್ಕೆ ಆರೆಂಜ್ ಅಲರ್ಟ್ (Orange Alert) ನೀಡಲಾಗಿದೆ.  ಬಂಗಾಳಕೊಲ್ಲಿ (Bay Of Bengal) ಅರಬ್ಬಿ ಸಮುದ್ರದಲ್ಲಿನ (Arabian Sea) ವಾಯುಭಾರ ಕುಸಿತ ಮೇಲ್ಮೈ ಸುಳಿಗಾಳಿ ಮತ್ತು ಕಡಿಮೆ ಒತ್ತಡಗಳ ಪ್ರಭಾವದಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ (Widespread rain) ಎಂದು ಹವಾಮಾನ ಇಲಾಖೆ  ತಿಳಿಸಿದೆ. 

ಮೈಸೂರು : 5 ದಿನ ಮಳೆಯ ಮುನ್ಸೂಚನೆ

ಬುಧವಾರವು ನಗರದಲ್ಲಿ ಭರ್ಜರಿ ಮಳೆಯಾಗಿದೆ. ಹಗಲಲ್ಲಿ ಒಂದೆರಡು ಬಾರಿ ಸಾಧಾರಣ ಮಳೆಯಾಗಿದ್ದರೆ, ರಾತ್ರಿ ಮಳೆ ಬಿರುಸು ಪಡೆದುಕೊಂಡಿತು. ರಾಜರಾಜೇಶ್ವರಿ ನಗರ (Rajarajeshwari Nagar), ಬೆಂಗಳೂರು, ಪಶ್ಚಿಮ  ಮತ್ತು ದಕ್ಷಿಣ ಭಾಗದ ಕೆಲವೆಡೆ ಭರ್ಜರಿ ಮಳೆಯಾಗಿದೆ. 

ಗಾರ್ವೆಬಾವಿಪಾಳ್ಯ, ಎನ್‌ಜಿಆರ್‌ ಲೇ ಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದೆ, ಯಲಹಂಕ ನ್ಯೂಟೌನ್‌ನಲ್ಲಿ (Yalahanka New Town)  ಮರದ ಕೊಂಬೆ ಬಿದ್ದಿರುವ ದೂರು ಬಂದಿದೆ ಎಂದು ಬಿಬಿಎಂಪಿ (BBMP) ಅಧಿಕಾರಿಗಳು ಹೇಳಿದ್ದಾರೆ.

ಧಾರಾಕಾರ ಮಳೆಗೆ 4 ಕೆರೆ ಕಟ್ಟೆಒಡೆದ ಅಪಾರ ನಷ್ಟ

ವಾಯುಭಾರ ಕುಸಿತದಿಂದ ಬೀಳುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ (Shidlaghatta) ತಾಲೂಕಿನಲ್ಲಿ 4 ಕೆರೆ ಕಟ್ಟೆಒಡೆದು ಚಿಕ್ಕಬಳ್ಳಾಫುರ (chikkaballapura) ತಾಲೂಕಿನಲ್ಲಿ 2 ಕೆರೆಗಳು ಬಿರುಕು ಬಿಟ್ಟು ಅಪಾರ ಪ್ರಮಾಣದ ಅಮೂಲ್ಯವಾದ ಮಳೆ ನೀರು ಪೋಲಾಗುತ್ತಿದೆ.

ಎಲ್ಲಲ್ಲಿ ಕೆರೆ, ಕಟ್ಟೆಒಡೆದಿದೆ:

ಶಿಡ್ಲಘಟ್ಟ ತಾಲೂಕಿನಲ್ಲಿ ಆನೆ ಮಡಗು ಆಗ್ರಹಾರ ಕೆರೆ ಕಟ್ಟೆಮಧ್ಯದಲ್ಲಿ ಒಡೆದು ಅಪಾರ ಪ್ರಮಾಣದ ನೀರು ಹೊರ ಬಂದರೆ, ದಿಬ್ಬೂರಹಳ್ಳಿ ಸಮೀಪದ ಚೊಕ್ಕನಹಳ್ಳಿ ಕೆರೆ ಕೂಡ ಮಳೆ ಅರ್ಭಟಕ್ಕೆ ಕಟ್ಟೆಒಡೆದಿದೆ. ಅದೇ ರೀತಿ ಚಿಕ್ಕಬಂದರ್ಲಾಹಳ್ಳಿ, ಚಿಲಕಲನೇರ್ಪು ಸಮೀಪ ಇರುವ ಪಾಪತಿಮ್ಮನಹಳ್ಳಿ ಕೆರೆ ಸೇರಿ ಒಟ್ಟು 4 ಕೆರೆ ಕಟ್ಟೆಗಳು ಬುಧವಾರ ಬೆಳಗ್ಗೆ ಒಡೆದರೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಚಿಕ್ಕ ಬೋಯಿನಹಳ್ಳಿ ಕೆರೆ ಹಾಗೂ ಲಕ್ಷ್ಮೇಸಾಗರ ಕೆರೆಗಳು ಮಳೆಗೆ ಬಿರುಕು ಬಿಟ್ಟಿವೆ.

ರೈತರ ಬೆಳೆಗಳು ಜಲಾವೃತ:

4 ಕೆರೆ ಕಟ್ಟೆಒಡೆದಿರುವ ಪರಿಣಾಮ ಅಪಾರ ಪ್ರಮಾಣದ ರೈತರ ಬೆಳೆ ಹಾನಿ ಜೊತೆಗೆ ಸಾರ್ವಜನಿಕ ಆಸ್ತಿ, ಪಾಸ್ತಿಯನ್ನು ನಷ್ಠಗೊಳಿಸಿದೆ. ಕೆಲವು ಕಡೆ ಮನೆಗಳು ಬಿರುಕು ಬಿಟ್ಟರೆ ಇನ್ನೂ ಕೆಲವು ಕಡೆ ಭತ್ತ, ರಾಗಿ, ಜೋಳ. ನೆಲಗಡಲೆ ಬೆಳೆಗಳು ಕೆರೆಗಳ ಕಟ್ಟೆಒಡೆದಿವೆ. ಕೆರೆ ಕಟ್ಟೆಒಡೆದಿರುವ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಜೀವ ಭಯ ಆವರಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಡೌಡಾಯಿಸಿದ್ದು ನೀರು ತಡೆಯಲು ಹರಸಾಹಸ ಮಾಡುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಕಾರಣ

ಜಿಲ್ಲೆಯಲ್ಲಿ ಕಳೆದ ಶನಿವಾರ, ಭಾನುವಾರ ಬಿದ್ದ ಮಳೆಯಿಂದಾಗಿ ಸಾಕಷ್ಟುಕೆರೆ, ಕುಂಟೆಮ ಜಲಾಶಯಗಳು ತುಂಬಿ ಕೋಡಿ ಹರಿದಿದ್ದವು. ಆದರೆ ಜಿಲ್ಲಾದಂತ ವಾರ್ಷಧಾರೆ ಮುಂದುವರೆದಿರುವ ಪರಿಣಾಮ ಶಿಡ್ಲಘಟ್ಟತಾಲೂಕಿನಲ್ಲಿ 4 ಕೆರೆಗಳು ಮುನ್ನೆಚ್ಚರಿಕೆ ಕ್ರಮ ವಹಿಸದ ಕಾರಣಕ್ಕೆ ಒಡೆದು ಹೋಗಿ ಕೆರೆಗಳಲ್ಲಿ ವರ್ಷಾನುಗಟ್ಟಲೇ ಸುತ್ತಮುತ್ತಲಿನ ಜನತೆಗೆ ಜೀವ ತುಂಬಬೇಕಿದ್ದ ಕೆರೆಗಳ ನೀರು ಖಾಲಿಯಾಗಿದೆ. ಸಂಬಂದಪಟ್ಟಇಲಾಖೆ ಅಧಿಕಾರಿಗಳು ಎಚ್ಚೆತ್ತಿಕೊಂಡಿದ್ದರೆ ಕೆರೆ ಕಟ್ಟೆಒಡೆಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಕೆರೆಗಳ ದುರಸ್ತಿಯಲ್ಲಿ ನಡೆದಿರುವ ಕಳಪೆ ಕಾಮಗಾರಿ ಪರಿಣಾಮ ಜಿಲ್ಲೆಯ ಕೆರೆ ಕುಂಟೆಗಳಿಗೆ ರಕ್ಷಣೆ ಇಲ್ಲದಂತಾಗಿದ್ದು ಇದೀಗ ಬೀಳುತ್ತಿರುವ ಕೋಭಂ ಕೋಣ ಮಳೆಗೆ ಜಿಲ್ಲೆಯ ಜನತೆ ಅಕ್ಷರಶಃ ನಡುಗುವಂತಾಗಿದ್ದು ಕೆರೆಗಳ ಅಕ್ಕಪಕ್ಕದ ವಸತಿ ಪ್ರದೇಶಗಳ ಜನರ ನಿದ್ದೆಗೆಡಿಸಿದೆ.

Follow Us:
Download App:
  • android
  • ios