ಮೈಸೂರು (ಏ.24):  ಜಿಲ್ಲೆಯಲ್ಲಿ ಏ. 28 ರವರೆಗೆ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ.  ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ರಾಗಿ, ಅಲಸಂದೆ, ಉದ್ದನ್ನು ಬಿತ್ತನೆ ಮಾಡಬಹುದು. ಈ ಬಾರಿ ಮುಂಗಾರು ಮುನ್ಸೂನೆ ಇರುವುದರಿಂದ ರೈತರು ಆತಂಕಪಡಬೇಕಿಲ್ಲ. ಮುಂಗಾರು ಮಾರುತಗಳು ಸಾಮಾನ್ಯ, ಉತ್ತಮ ಮಳೆ ಸುರಿಸಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಜೂನ್‌ನಿಂದ ಸೆಪ್ಟೆಂಬರ್‌ ಅವದಿಯಲ್ಲಿ ಶೇ. 98ರಷ್ಟುಮಳೆಯು ಮುಂಗಾರು ಹಂಗಾಮಿನಲ್ಲಿ ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ. ಮುನ್ಸೂಚನೆಯಂತೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಸಾಮಾನ್ಯವಾಗಿರುತ್ತದೆ.

ವೀಕೆಂಡ್ ಲಾಕ್‌ಡೌನ್‌ಗೆ ಮಳೆರಾಯನ ಸ್ವಾಗತ.. ಮನೆಯಲ್ಲೇ ಕುಳಿತು ಬಜ್ಜಿ-ಪಕೋಡ!

ರೈತರು ದಾಮನಿ ಎಂಬ ತಂತ್ರಾಂಶವನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡರೆ ಮಿಂಚಿನ ಮ್ಸೂಚನೆ ನಿಖರವಾಗಿ ತಿಳಿಯುತ್ತದೆ. ಮೌಸಮ್‌ ಮತ್ತು ಮೇಘದೂತ ತಂತ್ರಾಂಶದಿಂದ ಮಳೆಯ ಮನ್ಸೂಚನೆ ಮತ್ತು ಕೃಷಿ ಸಲಹೆ ಪಡೆಯಬಹುದು. ಮಳೆ ಬಂದಿರುವ ಕಡೆ ರೈತರು ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡಬೇಕು. ಇದರಿಂದ ನೀರು ಇಂಗುವಿಕೆ ಹೆಚ್ಚಾಗುತ್ತದೆ ಮತ್ತು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ರೈತರು ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಿ ಜಮೀನನ್ನು ಪೂರ್ವ ಮುಂಗಾರು ಬಿತ್ತನೆಗೆ ಸೂಕ್ತರೀತಿಯಲ್ಲಿ ತಯಾರಿಸಿಕೊಳ್ಳುವುದು, ಪೂರ್ವ ಮುಂಗಾರಿಗೆ ಬಿತ್ತನೆ ಬೀಜ ಸಿದ್ಧತೆ ಮಾಡಿಕೊಳ್ಳಬಹುದು. ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವಾಗ ಸೆಣಬು ಅಥವಾ ಡಯಾಂಚ, ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಅವರೆ, ಹುರುಳಿ, ಉದ್ದು ಮುಂತಾದ ಬೆಳೆಯನ್ನು ಸೂಕ್ತ ಪ್ರದೇಶದಲ್ಲಿ ಬಿತ್ತನೆ ಮಾಡಬೇಕು.

ನೆಲಕ್ಕೆ ಬಿದ್ದ ಕೆಜಿಗಟ್ಟಲೇ ತೂಕದ ಆಲಿಕಲ್ಲು! ...

ನೀರು ಬರಿದಾದ ಕೆರೆಯ ಗೋಡು ಮಣ್ಣನ್ನು ತೆಗೆದು ಭೂಮಿಗೆ ಸೇರಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಬಹುದು ಎಂದು ನಾಗನಹಳ್ಳಿ ಕೃಷಿ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌, ಸಹ ಸಂಶೋಧಕ ಎನ್‌. ನರೇಂದ್ರಬಾಬು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 94498 69914, 0821- 2591267 ಸಂಪರ್ಕಿಸಬಹುದು.