ಯಾರೂ ಬೆಟ್ಟು ಮಾಡಿ ತೋರಿಸದಂತೆ ನಾವು ಆಡಳಿತ ಮಾಡ್ತೀವಿ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ.

ತುಮಕೂರು(ಡಿ.12): ಯಾರೂ ಬೆಟ್ಟು ಮಾಡಿ ತೋರಿಸದಂತೆ ನಾವು ಆಡಳಿತ ಮಾಡ್ತೀವಿ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ.

15 ಕ್ಷೇತ್ರದಲ್ಲಿ 12 ಗೆಲ್ಲದಿದ್ದರೆ ನಾನು ಇಲ್ಲಿಗೆ ಇಷ್ಟೊಂದು ಸಮಧಾನವಾಗಿ ಬರಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಮೂರು ವರ್ಷ ಉತ್ತಮ‌ ಕೆಲಸ ಮಾಡಲು ಜನರು ಆಶೀರ್ವಾದ ಮಾಡಿದ್ದಾರೆ.‌ ರೈತರ ಸಮಸ್ಯೆ ಬಗೆ ಹರಿಸಬೇಕು, ನೀರಾವರಿಗೆ ಒತ್ತು ಕೊಡಬೇಕು ಅನೇಕ ಯೋಜನೆಗಳು ಚಿಂತನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

'ಮುಸ್ಲಿಮರಿಗೆ ಮುಸ್ಲಿಂ ರಾಷ್ಟ್ರಗಳಿವೆ, ಹಿಂದೂಗಳೆಲ್ಲಿ ಹೋಗಬೇಕು'..?

ಮುಂದಿನ ಬಜೆಟ್‌ನಲ್ಲಿ ಅನೇಕ‌ ಕಾರ್ಯಕ್ರಮಗಳನ್ನು ಘೋಷಿಸುತ್ತೇವೆ. ಆಶೀರ್ವಾದ ಮಾಡಿದ ಎಲ್ಲರಿಗೂ ಧನ್ಯವಾದಗಳು. ಇನ್ನು ಮೂರು ವರ್ಷ ಯಾವುದೇ ಅಡ್ಡಿ ಆತಂಕವಿಲ್ಲದೆ ಅಭಿವೃದ್ದಿ ಕೆಲಸ ಮಾಡುತ್ತೇವೆ. ಯಾರು ಬೆಟ್ಟು ತೋರಿಸದ್ದಂತೆ ಆಡಳಿತ ಮಾಡುತ್ತೇವೆ ಎಂದಿದ್ದಾರೆ.

ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಸಿಎಂ ಯಡಿಯೂರಪ್ಪ ಅವರು ಮೊದಲಬಾರಿಗೆ ತುಮಕೂರಿಗೆ ಭೇಟಿ ನೀಡಿದ್ದಾರೆ. ಇದಕ್ಕೂ ಮುನ್ನ ಆದಿಚುಂಚನಗಿರಿಗೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದಿದ್ದಾರೆ.

ಹುಡುಗಿ ವಿಚಾರ: ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ.