ರಾಯಚೂರು(ಡಿ.12): ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿ ಯುವಕ‌ನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಳ್ಳಿ ಲಿಂಗಸುಗೂರಿನಲ್ಲಿ ಇಂದು(ಗುರುವಾರ) ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಕರಡಕಲ್ ಗ್ರಾಮದ ಅಮರೇಶ್‌ಗೌಡ ನೆಲಹಾಳ(27) ಎಂದು ಗುರುತಿಸಲಾಗಿದೆ. 

ನನ್ಮ ಸಾವಿಗೆ ಈಶ್ವರ್ ಆಗ್ರೋ ಟ್ರೇಡರ್ಸ್ ಮಾಲೀಕ ಅಮರೇಗೌಡ ಕಾರಣ ಎಂದು ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮರೇಶಗೌಡ ತಮ್ಮ ಪಪ್ಪಾಯ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
ಅಮರೇಶಗೌಡ ಈಶ್ವರ್ ಟ್ರೇಡರ್ಸ್‌ನಲ್ಲಿ ಕೆಲಸ ಮಾಡ್ತಿದ್ದನು, ಆದರೆ, ಅಮರೇಶಗೌಡ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹುಡುಗಿ ವಿಚಾರವಾಗಿ ಮಾಲೀಕ ಅಮರೇಗೌಡ ಮತ್ತು ಅಮರೇಶ್ ಮಧ್ಯೆ ಈ ಹಿಂದೆ ಜಗಳವಾಗಿತ್ತು ಎನ್ನಲಾಗುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟನಾ ಸ್ಥಳಕ್ಕೆ ಲಿಂಗಸೂಗೂರು ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.