ಕಾನೂನು ಮೂಲಕವೇ ಪಂಚಮಸಾಲಿಗೆ ಸ್ಥಾನಮಾನ ಪಡೆಯುತ್ತೇವೆ: ವಚನಾನಂದ ಸ್ವಾಮೀಜಿ
ಪಂಚಮಸಾಲಿ ಸಮಾಜ ಹೋರಾಟ ಮಾಡುತ್ತಿದ್ದರೂ ಸರ್ಕಾರ ಮೀಸಲಾತಿ ಕೊಡುವಾಗ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ನೀಡುತ್ತದೆ. ಕೇಂದ್ರದಲ್ಲಿ ಓಬಿಸಿ ಯಲ್ಲಿ ಸೇರುವುದು ಮತ್ತು ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಯಾವುದನ್ನು ನೀಡಬೇಕು ಎನ್ನುವ ಕುರಿತು ಚಿಂತನೆಯಾಗಬೇಕು ಎಂದ ಹರಿಹರ ಪೀಠದ ವಚನಾನಂದ ಸ್ವಾಮೀಜಿ
ಕೊಪ್ಪಳ(ಡಿ.21): ಪಂಚಮಸಾಲಿ ಸಮಾಜಕ್ಕೆ ಸಿಗಬೇಕಾದ ಮೀಸಲಾತಿಯನ್ನು ಕಾನೂನು ಹೋರಾಟದ ಮೂಲಕವೇ ಪಡೆಯುತ್ತೇವೆ. ಆ ದಿಸೆಯಲ್ಲಿ ಈಗಾಗಲೇ 199480 ನಡೆದಿದೆ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿ ಸಮಾಜ ಹೋರಾಟ ಮಾಡುತ್ತಿದ್ದರೂ ಸರ್ಕಾರ ಮೀಸಲಾತಿ ಕೊಡುವಾಗ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ನೀಡುತ್ತದೆ. ಕೇಂದ್ರದಲ್ಲಿ ಓಬಿಸಿ ಯಲ್ಲಿ ಸೇರುವುದು ಮತ್ತು ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಯಾವುದನ್ನು ನೀಡಬೇಕು ಎನ್ನುವ ಕುರಿತು ಚಿಂತನೆಯಾಗಬೇಕು ಎಂದರು.
ನಾವು ಮೊದಲು ಹಿಂದೂ ಅನಂತರ ಲಿಂಗಾಯತ, ವೀರಶೈವ..; ತಮ್ಮ ಹೇಳಿಕೆ ಸಮರ್ಥಿಸಿಕೊಂಡ ವಚನಾನಂದ ಸ್ವಾಮೀಜಿ
ಪ್ರಮಾಣ ಹೆಚ್ಚಿಸಲಿ:
ಈಗಿರುವ ಮೀಸಲಾತಿ ಪ್ರಮಾಣದಲ್ಲಿಯೇ ಮೀಸಲಾತಿಯನ್ನು ಪಡೆಯಲು ಸಾಧ್ಯವಿಲ್ಲ. ಹೀಗಾಗಿ, ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. ಈಗ ರಾಜ್ಯದಲ್ಲಿ ಶೇಕಡಾ 56ರಷ್ಟು ಮೀಸಲಾತಿ ಇದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣ ಶೇಕಡಾ 50ಕ್ಕೆ ಮಿತಿಗೊಳಿಸಿದೆ. ಈಗಾಗಲೇ 10 ರಾಜ್ಯಗಳಲ್ಲಿ ವಿಶೇಷ ಪ್ರಕರಣದಡಿ ಹೆಚ್ಚು ಮೀಸಲಾತಿ ನೀಡುತ್ತಿದ್ದು, ಅದರಂತೆಯೇ ರಾಜ್ಯದಲ್ಲಿಯೂ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಾಗಿದೆ ಎಂದರು.
ಹಿಂದಿನ ಸರ್ಕಾರ ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತು ನೀಡಿದ್ದರಿಂದ ಅವರು ಕೋರ್ಟಿಗೆ ಹೋದರು. ಹೀಗಾಗಿ, ಅದು ನಮಗೆ ಸಿಗದಂತಾಯಿತು. ಸರ್ಕಾರದ ತಪ್ಪು ನಿರ್ಧಾರದಿಂದ ನಮಗೆ ಅನ್ಯಾಯವಾಯಿತು. ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತು ಕೊಡುವ ಬದಲು, ಮೀಸಲಾತಿ ಪ್ರಮಾಣ ಹೆಚ್ಚಿಸಿ, ನಮಗೆ ನೀಡಬೇಕು ಎನ್ನುವ ಕಾನೂನಾತ್ಮಕ ಹೋರಾಟ ನಮ್ಮದಾಗಿದೆಯೇ ಹೊರತು ಕಾನೂನು ಮುರಿದು ಹೋರಾಟ ಮಾಡುವುದಿಲ್ಲ ಎಂದು ಬೆಳಗಾವಿಯಲ್ಲಿ ನಡೆದ ಹೋರಾಟದ ಕುರಿತು ಪರೋಕ್ಷವಾಗಿ ಟಾಂಗ್ ನೀಡಿದರು.
ನಾನು ಮಾತನಾಡಲ್ಲ:
ಬೆಳಗಾವಿಯಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ಆ ಬಗ್ಗೆ ಮಾಹಿತಿಯೂ ಇಲ್ಲ. ಹೀಗಾಗಿ, ಲಕ್ಷ್ಮೀ ಹೆಬ್ಬಾಳರ್ ನಿಂದನೆ ವಿಚಾರ ಕಾನೂನು ವ್ಯಾಪ್ತಿಗೆ ಬರುತ್ತದೆ ಎಂದು ಹರಿಹರ ಪೀಠದ ಶ್ರೀ ವಚಾನಂದ ಸ್ವಾಮೀಜಿ ಹೇಳಿದ್ದಾರೆ. ಘಟನೆಯ ಕುರಿತು ಮಾಹಿತಿ ತಿಳಿದುಕೊಂಡು ನಂತರ ಮಾತನಾಡುತ್ತೇನೆ ಎಂದರು.
ಪಂಚಮಸಾಲಿ ಮೀಸಲಾತಿ: ಹೋರಾಟ ಅತಿರೇಕವಾಗಬಾರದು, ಪರೋಕ್ಷವಾಗಿ ಕೂಡಲ ಶ್ರೀಗೆ ತಿವಿದ ವಚನಾನಂದ ಶ್ರೀ
ದಾವಣಗೆರೆ: ಬೆಳಗಾವಿಯಲ್ಲಿ ಲಾಠಿಚಾರ್ಜ್ ಆಗಬಾರದಿತ್ರು, ಅದನ್ನು ನಾವು ಖಂಡಿಸುತ್ತೇವೆ. ಪಂಚಮಸಾಲಿ ಸಮಾಜ ಮುಗ್ಧ ಸಮಾಜ ಅವರು ಹೊಡೆದಾಟಕ್ಕೆ ಹೋಗಿರಲಿಲ್ಲ. ಘಟನೆಯಲ್ಲಿ ಅಮಾಯಕ ಪಂಚಮಸಾಲಿಗಳು ಗಾಯಗೊಂಡಿದ್ದಾರೆ. ಪಂಚಮಸಾಲಿಗಳ ಜೊತೆ ಕೆಲ ಪೋಲೀಸರಿಗೂ ಗಾಯಗಳಾಗಿವೆ. ಯಾರೋ ಕಿಡಿಗೇಡಿಗಳು ಕಲ್ಲು ತೂರಿ ಗಲಾಟೆ ಮಾಡುವಂತೆ ಮಾಡಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜಕ್ಕೆ ಕಪ್ಪು ಚುಕ್ಕೆ ತರಲು ಈ ರೀತಿ ಮಾಡಿದ್ದಾರೆ. ಘಟನೆಯಲ್ಲಿ ಕಿಡಿಗೇಡಿಗಳ ಕೃತ್ಯದ ಬಗ್ಗೆ ಸೂಕ್ತ ತನಿಖೆ ಮಾಡಿ ಅವರಿಗೆ ಶಿಕ್ಷೆ ನೀಡಬೇಕಿದೆ ಎಂದು ವಚನಾನಂದ ಸ್ವಾಮೀಜಿ ಆಗ್ರಹಿಸಿದ್ದರು.
ಭಾರತದಲ್ಲಿರುವ ಮುಸ್ಲಿಂರೂ ಹಿಂದೂಗಳೇ: ವಚನಾನಂದ ಶ್ರೀ
ಡಿ.11 ರಂದು ದಾವಣಗೆರೆಯಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ ಅವರು, ಹೋರಾಟ ಅತಿರೇಕವಾಗಬಾರದು. ಸರ್ಕಾರ ಪಂಚಮಸಾಲಿಗಳ ಮೇಲೆ ಆಗಿರುವ ಮೇಲೆ ಕೇಸ್ ಆಗಿದ್ರು ಅದನ್ನು ವಾಪಸ್ ಪಡೆಯಬೇಕು. ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋರಾಟಕ್ಕೆ ಬಂದಿದ್ದರು. ರಾಜಕೀಯ ವ್ಯಕ್ತಿಗಳ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದ್ದರು.
ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇದನ್ನು ವೇದಿಕೆ ಮಾಡಿಕೊಂಡಿದ್ದಾರೆ. ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂಬುದು ನಮ್ಮ ಆಶಯ ಹೋರಾಟ ಕೂಡ ಆಗಿದೆ. ನಾವು ಈಗಲು ಕಾನೂನು ಬದ್ದ ಹೋರಾಟಕ್ಕೆ ಬದ್ದರಾಗಿದ್ದು ಈಗ ವಕೀಲರು ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಹಿಂದೆ ಸರ್ಕಾರ 2ಡಿಯನ್ನು ನೀಡಿದ್ದು ನಾವು ಒಪ್ಪಿರಲ್ಲಿಲ್ಲ. ಅದನ್ನು ಕೆಲವರು ಸಂಭ್ರಮಿಸಿದವರು ಯಾರು ಎಂದು ಹೇಳಿ ಎಂದು ಕೂಡಲಸಂಗಮ ಶ್ರೀಗೆ ವಚನಾನಂದ ಸ್ವಾಮೀಜಿ ಪರೋಕ್ಷವಾಗಿ ತಿವಿದಿದ್ದರು.