ಹಲವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಇನ್ನೂ ಈ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸಬೇಕು ಎಂದು ಬಿಜೆಪಿ ಮುಖಂಡ ಎಂಟಿಬಿ ನಾಗರಾಜ್ ಕರೆ ನೀಡಿದ್ದಾರೆ.

ಸೂಲಿಬೆಲೆ(ಆ.26): ಪಕ್ಷದ ಸಿದ್ಧಾಂತ ಹಾಗೂ ಸ್ಥಳೀಯ ನಾಯಕರ ಅಭಿವೃದ್ಧಿ ಕಾರ‍್ಯಗಳನ್ನು ಮೆಚ್ಚಿ ಈಗಾಗಲೇ ಹಲವರು ಬೇರೆ ಪಕ್ಷದಿಂದ ಬಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇನ್ನೇನು ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದ ನಂತರ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಆದ್ದರಿಂದ ಎಲ್ಲರೂ ಈಗಿನಿಂದಲೇ ಪಕ್ಷದ ಸಂಘಟನೆಗೆ ಮುಂದಾಗಬೇಕು. ಪಕ್ಷವನ್ನು ಹೋಬಳಿ ಮಟ್ಟದಿಂದಲೇ ಕಟ್ಟಿಬೆಳೆಸಬೇಕು ಎಂದು ವಿಧಾನ ಪರಿಸತ್‌ ಸದಸ್ಯ ಎಂ.ಟಿ.ಬಿ. ನಾಗರಾಜ್‌ ಹೇಳಿದರು.

ಟಿಪ್ಪು ಸುಲ್ತಾನ್‌ ಈ ನೆಲದ ಮಗ, ವೀರ ಹೋರಾಟಗಾರ: ಬಿಜೆಪಿ ನಾಯಕ...

ಹೊಸಕೋಟೆ ತಾಲೂಕಿನ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ‍್ಯಕರ್ತರಿಗೆ ಆದೇಶ ಪತ್ರಗಳನ್ನು ವಿತರಿಸಿ ನಂತರ ಮಾತನಾಡಿದ ಅವರು, ಈ ಹೊಣೆಗಾರಿಕೆಯನ್ನು ಹೊತ್ತ ಪದಾ​ಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಾ. ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಮುಂಬರುವ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸುತ್ತಾ ಪಕ್ಷವನ್ನು ಬೂತ್‌ ಮಟ್ಟದಿಂದಲೇ ಸದೃಢಗೊಳಿಸಬೇಕು ಎಂದು ತಿಳಿಸಿದರು.

ಕರ್ನಾಟಕದ ಸಿಂಘಂ ಅಣ್ಣಾಮಲೈ ಐಪಿಎಸ್; ಖಾಕಿಯಿಂದ ಕೇಸರಿತನಕ.

ತಾಲೂಕು ಅಧ್ಯಕ್ಷ ಕೆ. ಸತೀಶ್‌ ಮಾತನಾಡಿ, ಬಿಜೆಪಿ ಪಕ್ಷ ತನ್ನದೇ ಆದಂತಹ ತತ್ವ ಸಿದ್ಧಾಂತವನ್ನು ಹೊಂದಿದ್ದು, ದೇಶವನ್ನು ಮೋದಿಯವರು ಕೊರೋನಾ ಸಮಯದಲ್ಲಿ ರಕ್ಷಿಸಿ ಸಾರ್ವಜನಿಕರಿಗೆ ಆಸರೆ ಆಗುತ್ತಿದ್ದರೆ ಹೊಸಕೋಟೆ ತಾಲೂಕಿನಲ್ಲಿ ಎಂ.ಟಿ.ಬಿ. ನಾಗರಾಜ್‌ ಅವರು ಆಸರೆಯಾಗಿದ್ದಾರೆ. ಇವರ ಈ ಸೇವೆಯನ್ನು ಕಂಡು ತಾಲೂಕಿನ ಅನೇಕ ಜನ ಇವರಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ತಾಲೂಕಿನ ಎಲ್ಲ ಗ್ರಾಮಗಳ ಕಾರ‍್ಯಕರ್ತರು ಬೂತ್‌ಮಟ್ಟದಿಂದಲೇ ಪಕ್ಷವನ್ನು ಬಲವರ್ಧನೆ ಮಾಡಿ ಗ್ರಾ.ಪಂ. ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳಬೇಕು. ಈಗಿರುವ ಕೊರೊನಾ ವಿರುದ್ಧ ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲನೆ ಮಾಡಿ ಕೊರೋನಾ ವಿರುದ್ಧ ಹೋರಾಟ ನಡೆಸಿ ಎಂದು ತಿಳಿಸಿದರು.

ಇದನ್ನೂ ನೋಡಿ | ಶಿರಾ ಬೈಎಲೆಕ್ಷನ್: ಪ್ರಭಾವಿ 'ಕೈ' ನಾಯಕ ಬಿಜೆಪಿಯಿಂದ ಕಣಕ್ಕೆ?