Asianet Suvarna News Asianet Suvarna News

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಮೊದಲು ರಾಷ್ಟ್ರಧ್ವಜ ಹಾರಿಸಿದ್ದೆವು, ಈಗ ಭಗವಾ ದ್ವಜ ಹಾರಿಸಿದ್ದೇವೆ, ಸಿ.ಟಿ. ರವಿ

ರಾಣಿ ಚೆನ್ನಮ್ಮ ಮೈದಾನದಲ್ಲಿ ಇವತ್ತು ಗಣೇಶ ಪ್ರತಿಷ್ಠಾಪನೆ ಆಗಿದೆ. ಭಾರತ ಅಂದ್ರೆ ಚೈತನ್ಯ ಭೂಮಿ, ಕರ್ಮ ಭೂಮಿಯಾಗಿದೆ. ಹಿಂದೂಗಳ ಹಿತ ಕಾಪಾಡದಿದ್ದಲ್ಲಿ ಅಫ್ಘಾನಿಸ್ತಾನ ಪಾಕಿಸ್ತಾನದಂತೆ ಭಾರತ ಆಗುತ್ತದೆ ಎಂದ ಮಾಜಿ ಸಚಿವ ಸಿ.ಟಿ. ರವಿ 

We have hoisted the Bhagwa Dwaja at Idgah Maidan in Hubballi Says CT Ravi grg
Author
First Published Sep 9, 2024, 1:28 PM IST | Last Updated Sep 9, 2024, 1:28 PM IST

ಹುಬ್ಬಳ್ಳಿ(ಸೆ.09):  ಈದ್ಗಾ ಮೈದಾನದಲ್ಲಿ ಮೊದಲು ನಾವು ರಾಷ್ಟ್ರಧ್ವಜ ಹಾರಿಸಿದ್ದೆವು. ಈಗ ಈದ್ಗಾ ಮೈದಾನದಲ್ಲಿ ಭಗವಾ ದ್ವಜ ಹಾರಿಸಿದ್ದೇವೆ. ಮೂವತ್ತು ವರ್ಷಗಳ ಹಿಂದೆ ನಾನು ಇಲ್ಲಿ ಹೋರಾಟ ಮಾಡೋಕೆ ಬಂದಿದ್ದೆ ಎಂದು ಮಾಜಿ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.  

ಇಂದು(ಸೋಮವಾರ) ನಗರದ ಈದ್ಗಾ ಮೈದಾನದಲ್ಲಿ ಗಣೇಶನ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ಇವತ್ತು ಇಲ್ಲಿ ಭಗವಾ ದ್ವಜಾ ಹಾರಿಸಿದ್ದೇವೆ. ಇದು ನಮ್ಮ ಭೂಮಿ. ಹಿಂದುತ್ವ ಬಿಟ್ಟು ಭಾರತ ಇಲ್ಲ, ಭಾರತವನ್ನು ಬಿಟ್ಟು ಹಿಂದೂತ್ವ ಇಲ್ಲ ಎಂದು ಹೇಳಿದ್ದಾರೆ. 

ಎತ್ತಿನಹೊಳೆ ಯೋಜನೆ ಬೆಟ್ಟ ಅಗೆದು ಇಲಿ ಹಿಡಿದಂತೆ: ಸಿ.ಟಿ.ರವಿ

ರಾಣಿ ಚೆನ್ನಮ್ಮ ಮೈದಾನದಲ್ಲಿ ಇವತ್ತು ಗಣೇಶ ಪ್ರತಿಷ್ಠಾಪನೆ ಆಗಿದೆ. ಭಾರತ ಅಂದ್ರೆ ಚೈತನ್ಯ ಭೂಮಿ, ಕರ್ಮ ಭೂಮಿಯಾಗಿದೆ. ಹಿಂದೂಗಳ ಹಿತ ಕಾಪಾಡದಿದ್ದಲ್ಲಿ ಅಫ್ಘಾನಿಸ್ತಾನ ಪಾಕಿಸ್ತಾನದಂತೆ ಭಾರತ ಆಗುತ್ತದೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios