ಪ್ರಕ​ರ​ಣ​ಗ​ಳಿಗೆ ಹೆದ​ರದೆ ಹೋರಾಟ ಮುಂದು​ವ​ರೆ​ಸಿ​ದ್ದೇವೆ: ಡಿ.ಕೆ.​ಶಿ​ವ​ಕು​ಮಾರ್‌

ಕೊರೋನಾ ಸಂದರ್ಭದಲ್ಲಿ ನಮ್ಮ ಮೇಲೆ ಹಲವಾರು ಪ್ರಕರಣ ದಾಖಲು ಮಾಡಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದರು. ಆದರೂ ನಾವು ಹೆದ​ರದೆ ಹೋರಾಟ ಮುಂದುವರಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹೇಳಿ​ದರು.

We have continued the struggle regardless of the situation says dk shivakumar gvd

ಕನಕಪುರ (ಜ.14): ಕೊರೋನಾ ಸಂದರ್ಭದಲ್ಲಿ ನಮ್ಮ ಮೇಲೆ ಹಲವಾರು ಪ್ರಕರಣ ದಾಖಲು ಮಾಡಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದರು. ಆದರೂ ನಾವು ಹೆದ​ರದೆ ಹೋರಾಟ ಮುಂದುವರಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹೇಳಿ​ದರು. ಡಿಕೆಎಸ್‌ ಚಾರಿಟಬಲ್ ಇನ್ಸ್ಟಿಟ್ಯೂಟ್‌ ಟ್ರಸ್ವ್‌ ಆಯೋಜಿಸಿರುವ ಕನಕೋತ್ಸವದ ಮೂರನೇ ದಿನವಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದೆರಡು ವರ್ಷಗಳ ಹಿಂದೆ ಕೊರೋನಾ ಸಂದರ್ಭದಲ್ಲಿ ನಾವು ಮೇಕೆದಾಟು ಪಾದಯಾತ್ರೆ ಮಾಡಿದೆವು. ಆಗ ಕೊರೋನಾ ಹಿನ್ನೆಲೆಯಲ್ಲಿ ಪಾದಯಾತ್ರೆ ಸ್ಥಗಿತಗೊಳಿಸುವಂತೆ ಸರ್ಕಾರದವರು ನಮ್ಮ ಮೇಲೆ ಕೇಸ್‌ ಹಾಕಿದರು. 

ಪಾದಯಾತ್ರವೇ ಕೃಷ್ಣಯ್ಯನದೊಡ್ಡಿ ಶಾಲೆಯ ಮಕ್ಕಳನ್ನು ಭೇಟಿ ಮಾಡಿದಾಗ ಮಕ್ಕಳು ಸೇರಿದಂತೆ ವೇದಿಕೆ ಮೇಲಿರುವ ಹಲವಾರು ಮುಖಂಡರು ಮತ್ತು ಸಂಸದ ಡಿ.ಕೆ.ಸುರೇಶ್‌ ಹಾಗೂ ನನ್ನ ಮೇಲೆ ಕೇಸ್‌ ಹಾಕಿದ್ದಾರೆ. ಇಂದಿಗೂ ನಾವೆಲ್ಲರೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದೇವೆ. ಆದರೂ ಚಿಂತೆ ಇಲ್ಲ ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಹೋರಾಟ ಮುಂದುವರಿಸುತ್ತೇವೆ. ಉಳಿದಿದ್ದನ್ನು ನ್ಯಾಯಾಲಯಕ್ಕೆ ಬಿಡುತ್ತೇವೆ ಎಂದರು. ಕನ​ಕೋ​ತ್ಸ​ವ​ದಲ್ಲಿ 18,600 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಐತಿ​ಹಾ​ಸಿಕ ಕಾರ್ಯ​ಕ್ರಮ. 

Kanakapura: ಉತ್ತಮ ಆರೋ​ಗ್ಯಕ್ಕೆ ಯೋಗಾ​ಸ​ನ ಮದ್ದು: ಡಿ.ಕೆ.ಶಿವಕುಮಾರ್‌

ನಿಮ್ಮ ಪ್ರತಿಭೆಗೆ ಉತ್ತೇಜನ ಮತ್ತು ಪ್ರೋ​ತ್ಸಾಹ ಕೊಡಬೇಕು ಎಂಬ ದೃಷ್ಟಿಯಿಂದ ಸೇರಿದ್ದೇವೆ. ಪ್ರತಿಭೆ ಯಾರೊಬ್ಬರ ಆಸ್ತಿಯಲ್ಲ ಸತತ ಪರಿಶ್ರಮ ನಿರಂತರ ಅಭ್ಯಾಸ ಮಾಡಿ ನಿಮ್ಮ ಬದುಕನ್ನು ರೂಪಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿ​ದೆ. ಮುಂದೆ ನೀವೆಲ್ಲರೂ ಈ ದೇಶದ ಆಸ್ತಿಯಾಗಿ​ದ್ದೀರಿ. ನಿಮ್ಮ ಪ್ರತಿಭೆ ವಿಶ್ವಮಟ್ಟದಲ್ಲಿ ಬೆಳೆಯಬೇಕು. ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಬೇಕು. ನಾಯಕತ್ವದ ಗುಣ ಬೆಳೆಯಬೇಕು. ಅಮ್ಮನ ನೆನಪು, ಗುರುವಿನ ನೆನಪು ಜ್ಞಾನದ ಮೂಲ ದೇವರು. ನೆನಪು ಭಕ್ತಿಯ ಮೂಲ. ಈ ಮೂರರ ನೆನಪು ಮನುಷ್ಯತ್ವದ ಮೂಲ. 

ಹಾಗಾಗಿ ನೀವೆಲ್ಲರೂ ನಿಮ್ಮ ಬೆಳವಣಿಗೆಗೆ ಕಾರಣರಾದ ಎಲ್ಲರನ್ನೂ ಸ್ಮರಿಸಿಕೊಳ್ಳಬೇಕು ಎಂದು ಸಲಹೆ ನೀಡಿ​ದ​ರು. ಮಾಜಿ ಸಚಿವ ಕೃಷ್ಣಭೈರೇಗೌಡ, ಸಂಸದ ಡಿ.ಕೆ.ಸುರೇಶ್‌, ನಗರಸಭೆ ಅಧ್ಯಕ್ಷ ಕೆ.ಟಿ.ಕಿರಣ್‌, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಮಾಜಿ ಶಾಸಕ ಬಾಲಕೃಷ್ಣ, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಪತ್ರಕರ್ತ ರಮಾಕಾಂತ್‌, ಮುಖಂಡ ವಿಶ್ವನಾಥ್‌, ಜಿಪಂ ಮಾಜಿ ಸದಸ್ಯ ಬಸಪ್ಪ, ವಕೀಲ ಚಿನ್ನಸ್ವಾಮಿ ಉಪಸ್ಥಿತರಿದ್ದರು.

18 ಸಾವಿ​ರ ವಿದ್ಯಾ​ರ್ಥಿ​ಗ​ಳಿಗೆ ಪ್ರತಿಭಾ ಪುರ​ಸ್ಕಾರ: ಕನಕೋತ್ಸವದ ಮೂರನೇ ದಿನವಾದ ಶುಕ್ರ​ವಾರ ಎಸ್ಸೆ​ಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ 18 ಸಾವಿ​ರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಧ್ಯಾಹ್ನ 2 ಗಂಟೆಗೆ ದೇಹದಾಢ್ರ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. 50 ಕೆ.ಜಿ ಇಂದ 60 ಕೆಜಿ 70 ಕೆಜಿ ಇಂದ 80 ಕೆಜಿ 60 ಕೆಜಿಯಿಂದ 70 ಕೆಜಿ ಮತ್ತು 80 ಕೆಜಿ ಮೇಲ್ಪಟ್ಟದೇಹದಾಢ್ರ್ಯ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಸ್ಪರ್ಧಿಗಳು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಬಹುಮಾನ ವಿತರಿಸಲಾಯಿತು. 

Ramanagara: ಬಿಜೆಪಿಯ ನಿಜ​ವಾದ ಬಿ ಟೀಮ್‌ ಕಾಂಗ್ರೆಸ್‌: ನಿಖಿಲ್‌ ಕುಮಾ​ರ​ಸ್ವಾಮಿ

ಸಂಜೆ 4 ಗಂಟೆ ನಂತರ ಚಲನಚಿತ್ರ ಗೀತೆ ಮತ್ತು ಸಮೂಹ ನೃತ್ಯ ಸ್ಪರ್ಧೆ ನಡೆ​ಯಿತು. 16 ವರ್ಷದ ಒಳಪಟ್ಟವರು ಮತ್ತು 16 ವರ್ಷ ಮೇಲ್ಪಟ್ಟವರು ಎರಡು ವಿಭಾಗಗಳಾಗಿ ನೃತ್ಯ ಸ್ಪರ್ಧೆ ನಡೆಯಿತು ಹಲವಾರು ತಂಡಗಳು ಭಾಗವಹಿಸಿ ಬಹುಮಾನ ಪಡೆದುಕೊಂಡರು. ಉಳಿದಂತೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳ ಮುಂದುವರೆದಿತ್ತು. 19 ವರ್ಷ ಮೇಲ್ಪಟ್ಟಪುರುಷರ ಡಬಲ್ ಶಟಲ್ ಬ್ಯಾಡ್ಮಿಂಟನ್‌ ಪಂದ್ಯಾವಳಿ ವಿಜೇತ ತಂಡಕ್ಕೆ ಬಹುಮಾನ ವಿತರಣೆ ಮಾಡಲಾಯಿತು.

Latest Videos
Follow Us:
Download App:
  • android
  • ios