ಮಂಗಳೂರು(ಜ.29): ಪೌರತ್ವ ಕಾಯ್ದೆ ಬೆಂಬಲಿಸಿ ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಶಾಸಕ ಯು. ಟಿ. ಖಾದರ್‌ಗೆ ಜೀವ ಬೆದರಿಕೆ ಹಾಕಿರುವುದಕ್ಕೆ ದೂರು ದಾಖಲಿಸುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ತಿಳಿಸಿದೆ.

ಬಿಜೆಪಿಯ ಸಿಎಎ ಸಮಾವೇಶದಲ್ಲಿ ಮಾಜಿ ಸಚಿವ ಖಾದರ್‌ಗೆ ಜೀವ ಬೆದರಿಕೆ ವಿಚಾರವಾಗಿ ಆರೋಪಿಗಳ ವಿರುದ್ದ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಗಡುವು ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ‌ಕಾಂಗ್ರೆಸ್ ಅಧ್ಯಕ್ಷ, ಎಂಎಲ್‌ಸಿ ಹರೀಶ್ ‌ಕುಮಾರ್ ಪೊಲೀಸ್ ಇಲಾಖೆಗೆ ಗಡುವು ಕೊಟ್ಟಿದ್ದಾರೆ.

'ಎನ್‌ಆರ್‌ಸಿ ಪರ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಏಕಿಲ್ಲ..'?

ಮಂಗಳೂರಿನಲ್ಲಿ ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಹರೀಶ್ ‌ಕುಮಾರ್ ಹೇಳಿಕೆ ನೀಡಿದ್ದು, ಬಿಜೆಪಿಯ ಸಿಎಎ ಸಮಾವೇಶದಲ್ಲಿ ಮಾಜಿ ಸಚಿವ ಖಾದರ್‌ಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈ ಕುರಿತು ‌ಪೊಲೀಸ್ ಇಲಾಖೆ ತಕ್ಷಣ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿ. ತಕ್ಷಣ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎರಡು ವಾರಗಳ ಕಾಲ ಗಡುವು ನೀಡುತ್ತದೆ ಎಂದಿದ್ದಾರೆ.

ಕ್ಗರಮ ಕೈಗೊಳ್ಳದಿದ್ದಲ್ಲಿ ಕಮಿಷನರ್ ಕಚೇರಿ ‌ಮುಂದೆ ಧರಣಿ ನಡೆಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಯಾವುದೇ ದೂರು ನೀಡುವುದಿಲ್ಲ. ಈಗಾಗಲೇ ಈ ಕೊಲೆ ಬೆದರಿಕೆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ ಪೊಲೀಸರೇ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಿ. ಈ ಹಿಂದೆಯೂ ಕಾಂಗ್ರೆಸ್ ನಾಯಕರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ರಮಾನಾಥ್ ರೈ, ಮಿಥುನ್ ರೈ ಸೇರಿ ಅನೇಕರಿಗೆ ಕೊಲೆ ಬೆದರಿಕೆ ಬಂದಿದೆ ಎಂದಿದ್ದಾರೆ.

'ಆರೋಪಿಗೆ ತಲೆ ಸರಿ ಇಲ್ಲಾಂತಾರೆ, ಬಾಂಬ್ ಫಿಕ್ಸ್‌ ಮಾಡೋಕಾಗುತ್ತಾ'..?