ಮಂಗಳೂರು(ಜ.22):  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿರುವ ಆದಿತ್ಯ ರಾವ್‌ಗೆ ತಲೆ ಸರಿ ಇಲ್ಲಾ ಅಂತಾರೆ, ಹಾಗಾದ್ರೆ ಬಾಂಬ್ ಫಿಕ್ಸ್‌ ಮಾಡೋಕೆ ತಲೆ ಸರಿ ಇದ್ಯಾ ಎಂದು ಮಾಜಿ ಸಚಿವ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.

ಬಾಂಬರ್ ಬಂಧನ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿದ ಅವರು, ಬಾಂಬ್ ಇಟ್ಟಿದ್ದು ಗಂಭೀರ ವಿಚಾರ. ಅದು ಯಾರೇ ಇಟ್ಟಿರಲಿ ಅದು ತಪ್ಪು. ಹೋಮ್ ಮಿನಿಸ್ಟರ್ ಏನ್ ಮಾತಾಡಿದ್ರು ಇನ್ಯಾರು ಏನ್ ಹೇಳಿದ್ದಾರೆ ಎನ್ನುವುದು ವಿಚಾರವಲ್ಲ. ಈಗಿನ ಪ್ರಶ್ನೆ ಅದಲ್ಲ, ಅವನಿಂದ ಬಾಂಬ್ ಇಡಿಸಿದ್ದು ಯಾರು ಎಂಬುದು ಗೊತ್ತಾಗಬೇಕು ಎಂದಿದ್ದಾರೆ.

ಮಂಗಳೂರು ಬಾಂಬರ್ ಶರಣು: 8ನೇ ಎಸಿಎಂಎಂ ಕೋರ್ಟ್‌ಗೆ ಆರೋಪಿ ಹಾಜರ್

ಈಗ ಪಟಾಕಿ ಎಂದು ಹೇಳುತ್ತಿದ್ದಾರೆ. ಬಾಂಬ್ ಜೋಡಿಸಲು ತಲೆ ಸರಿ ಇದ್ಯಾ..? ಇದರ ಹಿಂದೆ ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು. ಘಟನೆಗೂ ಕೇರಳಕ್ಕೂ ಲಿಂಕ್ ಮಾಡಲಾಗಿತ್ತು. ಗೃಹ ಸಚಿವ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.

ಪುಣ್ಯಾತ್ಮ ಹೋಗಿ ಶರಣಾದನಲ್ಲ, ಇಲ್ಲಾಂದ್ರೆ ಯಾರ ಯಾರ ಹೆಸರು ಬರುತ್ತಿತ್ತೋ.. ರೀಜನ್ ಈಸ್ ಇಂಪಾರ್ಟಂಟ್ ನಾಟ್ ರಿಲೀಜನ್‌. ನನಗೆ ಇದು ಪ್ರಹಸನ ಅನ್ನಿಸೋದಿಲ್ಲ. ಅದನ್ನು ಸರ್ಕಾರ ದೂರ ಮಾಡಬೇಕಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಬಾಂಬ್‌ ಇಟ್ಟ ಆದಿತ್ಯರಾವ್ ಬಗ್ಗೆ ತಮ್ಮನ ಪ್ರತಿಕ್ರಿಯೆ.!

ಆರೋಪಿ ಹಿಂದೆ ನಾಯಿ ಓಡಬೇಕಿತ್ತಲ್ಲ..? ಸ್ಮೆಲ್ ಆದ್ರು ಮಾಡ್ಬೇಕಿತ್ತಲ್ವಾ ಎಂದು ಪ್ರಶ್ನಿಸಿರುವ ಅವರು, ಸಮಾಜದ್ರೋಹಿ ಶಕ್ತಿಗಳು ಎಲ್ಲಾ ವರ್ಗದಲ್ಲಿ ಇದ್ದಾರೆ. ಒಂದೇ ವರ್ಗವನ್ನು ಗುರಿಯಾಗಿಸಬಾರದು. ಆರೋಪಿಯನ್ನು ಪತ್ತೆ ಹಚ್ಚುವ ಮೊದಲೇ ಸಮುದಾಯವನ್ನು ಗುರಿಯಾಗಿಸಿದ್ದಾರೆ. ಒಬ್ಬನೇ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಬೇರೆಯವರ ಸಹಾಯದಿಂದ ಬಾಂಬ್‌ ಮಾಡಿದ್ದಾನೆ. ಆರೋಪಿಗೆ ತಲೆ ಸರಿಯಿಲ್ಲ ಅಂತಾ ಹೇಳ್ತಾರೆ. ಆರೋಪಿಗೆ ಬಾಂಬ್ ಫಿಕ್ಸ್ ಮಾಡೋಕೆ ತಲೆ ಸರಿಯಿದ್ಯಾ? ಆರೋಪಿಗಳು ಬೆಂಗಳೂರು ಮುಟ್ಟುವ ತನಕ ಪೊಲೀಸರು ಎಲ್ಲಿದ್ದರು? ಎಲ್ಲಾ ಸ್ಕ್ವಾಡ್‌ಗಳು ಎಲ್ಲಿ ಹೋಗಿತ್ತು..? ಪೊಲೀಸರಲ್ಲಿ ಸಿಸಿಟಿವಿ ವಿಶುವಲ್ ಇತ್ತು. ಎಲ್ಲಾ ಮಾಹಿತಿಗಳೂ ಪೊಲೀಸರ ಬಳಿ ಇತ್ತು. ಆದರೂ ಆರಾಮಾವಾಗಿ ಬೆಂಗಳೂರಿಗೆ ಹೋಗಿದ್ದಾನೆ, ಪೊಲೀಸರ ಮುಂದೆ ಶರಣಾಗಿದ್ದಾನೆ. ಇದರ ಹಿಂದೆ ದೊಡ್ಡ ಸಂಚು ಇದೆ, ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.