ಆಲಮಟ್ಟಿ(ಆ.07): ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದ್ದರಿಂದ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದ 26ರ ಪೈಕಿ 22 ಗೇಟ್‌ಗಳ ಮೂಲಕ ಗುರುವಾರ ಸಂಜೆಯಿಂದ ನೀರನ್ನು ಹೊರಬಿಡಲಾಗುತ್ತಿದೆ. 

22 ಗೇಟ್‌ಗಳನ್ನು 4.5 ಮೀಟರ್‌ವರೆಗೆ ಎತ್ತರಿಸಿ 1.50 ಲಕ್ಷ ಕ್ಯುಸೆಕ್‌ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗಿದೆ. ಆದರೆ ನೀರಿನ ಒಳಹರಿವು 1,47,718 ಕ್ಯುಸೆಕ್‌ಗೆ ಹೆಚ್ಚಿದ್ದರಿಂದ 1.50 ಲಕ್ಷ ನೀರನ್ನು ಹೊರಬಿಡಲಾಗುತ್ತಿದೆ. 

ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಅಪಾಯ ಮಟ್ಟದಲ್ಲಿ ಆಲಮಟ್ಟಿ ಡ್ಯಾಂ!

ಇದರಿಂದ 215 ಮೆಗಾವ್ಯಾಟ್‌ ಜಲ ವಿದ್ಯುತ್‌ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್‌ ಮೂಲಗಳು ತಿಳಿಸಿವೆ.