ಕುಷ್ಟಗಿ: ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಸುಮಾರು ಒಂದು ಗಂಟೆಗಳ ಕಾಲ ಬಿದ್ದ ಅಕಾಲಿಕ ಮಳೆಯಿಂದ ಚರಂಡಿಗಳು ಭರ್ತಿಯಾಗಿ ಅಂಗಡಿಗಳಿಗೆ ನೀರು ನುಗ್ಗಿದ ಘಟನೆ ನಡೆದಿದೆ. 

ಇಲ್ಲಿಯ ಮಾರುತಿ ವೃತ್ತದ ಬಳಿ ಇರುವ ದೇಸಾಯಿ ಕಾಂಪ್ಲೆಕ್ಸ್ ಕೆಳ ಮಹಡಿಯ ಕೆಲವು ಅಂಗಡಿಗಳಿಗೆ ಚರಂಡಿ ನೀರು ನುಗ್ಗಿದ್ದರಿಂದ ಅಂಗಡಿಗಳಲ್ಲಿನ ಸಾಮಗ್ರಿಗಳು ಹಾಳಾಗಿವೆ. 

ಅಂಗಡಿಗಳಿಗೆ ನುಗ್ಗಿದ್ದ ಮಳೆ ನೀರಿನ ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಯಂತ್ರದ ಸಹಾಯದಿಂದ ನೀರು ಮೇಲೆತ್ತಿದ ಬಳಿಕ ಬೆಲೆ ಬಾಳುವ ವಸ್ತುಗಳನ್ನು ರಕ್ಷಿಸಿದ್ದಾರೆ.