Asianet Suvarna News Asianet Suvarna News

ರೈತರಿಗೆ ಗುಡ್ ನ್ಯೂಸ್ : ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು

ರೈತರಿಗೆ ಇಲ್ಲಿದೆ ಗುಡ್ ನ್ಯೂಸ್. ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಉಂಟಾಗಿದೆ. 

Water Level increases in Chikkaballapura borewell snr
Author
Bengaluru, First Published Nov 12, 2020, 11:13 AM IST
  • Facebook
  • Twitter
  • Whatsapp

ವರದಿ : ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ನ.12):  ಜಿಲ್ಲೆಯಲ್ಲಿ ಈ ವರ್ಷ ಮಳೆರಾಯನ ಕೃಪೆ ತೋರಿರುವ ಪರಿಣಾಮ ರೈತರು ಬಿತ್ತಿದ ಬೆಳೆಗಳು ಸಮೃದ್ಧಿಯಾಗಿ ಬೆಳೆದು ಅನ್ನದಾತರು ಸಂತಸಗೊಂಡಿದ್ದರೆ ಮತ್ತೊಂದಡೆ ಭಾರಿ ವರ್ಷಧಾರೆಗೆ ಜಿಲ್ಲೆಯ ಅಂರ್ತಜಲ ಮಟ್ಟಏರಿಕೆಯಾಗಿರುವುದು ಕಂಡು ಬಂದಿದೆ. ಸರಾಸರಿ 16 ಅಡಿಗಳಷ್ಟುಅಂರ್ತಜಲ ಏರಿಕೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯ ಸ್ಥಿರ ಅಂರ್ತಜಲ ಮಟ್ಟಸರಾಸರಿ 5.49 ಮೀಟರ್‌ನಷ್ಟುಏರಿಕೆ ಕಂಡಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಜಿಲ್ಲೆಯ ಕೆರೆ, ಕುಂಟೆಗಳು, ಜಲಾಶಯಗಳು ತುಂಬಿ ಕೋಡಿ ಹರಿದ ಪರಿಣಾಮ ಜಿಲ್ಲೆಯ ಅಂರ್ತಜಲ ಮಟ್ಟದಲ್ಲಿ ಏರಿಕೆಗೆ ಕಾರಣ ಎನ್ನಲಾಗಿದೆ.

46 ಕೊಳವೆ ಬಾವಿಗಳಲ್ಲಿ ಅಧ್ಯಯನ:

ಜಿಲ್ಲೆಯಲ್ಲಿನ ಅಂರ್ತಜಲ ಏರಿಳಿತವನ್ನು ತಪಾಸಣೆ ನಡೆಸಲು 51 ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇದ್ದು ಆ ಪೈಕಿ 46 ಕೊಳವೆ ಬಾವಿಗಳು ಮಾತ್ರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಆರು ತಾಲೂಕು ಕೇಂದ್ರಗಳ ಜೊತೆಗೆ ಕೆಲವು ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಇವುಗಳನ್ನು ಸ್ಥಾಪಿಸಲಾಗಿದೆ. ಪ್ರತಿ ತಿಂಗಳಗೊಮ್ಮೆ ಹಾಗೂ ವರ್ಷಕ್ಕೊಮ್ಮೆ ಜಿಲ್ಲೆಯ ಭೂ ವಿಜ್ಞಾನ ಅಂರ್ತಜಲ ಇಲಾಖೆ ಇದರ ಅಧ್ಯಯನ ಮಾಡುತ್ತಾರೆ. ಇದರಲ್ಲಿ 2019ರ ಅಕ್ಟೋಬರ್‌ ತಿಂಗಳಿಂದ 2020ರ ಅಕ್ಟೋಬರ್‌ ತಿಂಗಳ ವರೆಗೂ ಜಿಲ್ಲೆಯ ಸ್ಥಿರ ಅಂತರ್ಜಲ ಮಟ್ಟಸರಾಸರಿ ಜಿಲ್ಲಾದ್ಯಂತ 5.49 ಮೀಟರ್‌ನಷ್ಟುಏರಿಕೆ ಕಂಡಿದೆಯೆಂದು ಅಂರ್ತಜಲ ಇಲಾಖೆ ಹಿರಿಯ ಭೂ ವಿಜ್ಞಾನಿ ಎಸ್‌.ಭೋರಪ್ಪ ಕನ್ನಡಪ್ರಭಗೆ ಮಾಹಿತಿ ನೀಡಿದರು.

ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು

ಜಿಲ್ಲಾದ್ಯಂತ ಉತ್ತಮ ಮಳೆ ಆಗಿರುವ ಪರಿಣಾಮ ವರ್ಷ, ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ರೈತರ ಕೊಳವೆ ಬಾವಿಗಳು ಮತ್ತೆ ಪುನಃ ಕಾರ್ಯಾರಂಭ ಮಾಡುತ್ತಿದ್ದು ರೈತರು ಸಂತಸದಿಂದ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. 1,200, 1500 ಅಡಿಗೆ ನೀರು ಸಿಗುತ್ತಿದ್ದ ಜಿಲ್ಲೆಯಲ್ಲೀಗ ಅಂರ್ತಜಲ ಮಟ್ಟತುಸು ಏರಿಕೆ ಆಗಿರುವ ಪರಿಣಾಮ 800, 900 ಸೇರಿದಂತೆ 1,000 ಅಡಿ ಒಳಗೆ ಬಹುತೇಕ ತಾಲೂಕುಗಳಲ್ಲಿ ನೀರು ಸಿಗುತ್ತಿದೆ.

ಚಿಕ್ಕಮಗಳೂರಿನ ಬರದ ನಾಡಲ್ಲಿ ಉಕ್ಕಿದೆ ನೀರು ...

ಕಳೆದ 2019ರ ಅಕ್ಟೋಬರ್‌ ತಿಂಗಳಿಂದ 2020ರ ಅಕ್ಟೋಬರ್‌ ತಿಂಗಳವರೆಗೂ ಜಿಲ್ಲೆಯಲ್ಲಿ ಒಟ್ಟು ಸರಾಸರಿ ಸ್ಥಿರ ಅಂತರ್ಜಲ ಮಟ್ಟ5.49 ಮೀಟರ್‌ನಷ್ಟುಏರಿಕೆ ಕಂಡಿದೆ. ಜಿಲ್ಲೆಯ ಆರು ತಾಲೂಕುಗಳಲ್ಲಿಯು ಅಂರ್ತಜಲ ಮಟ್ಟಏರಿಕೆ ಕಂಡಿದೆ. ಬತ್ತಿ ಹೋಗಿದ್ದ ಕೊಳವೆ ಬಾವಿಗಳು ಮತ್ತೆ ಕಾರ್ಯನಿರ್ವಹಿಸುತ್ತಿವೆ.

ಬೋರಪ್ಪ, ಹಿರಿಯ ಭೂ ವಿಜ್ಞಾನಿ, ಚಿಕ್ಕಬಳ್ಳಾಪುರ.

 ಜಿಲ್ಲೆಯ ಸರಾಸರಿ ಸ್ಥಿರ ಅಂತರ್ಜಲ ಮಟ್ಟ

ತಾಲೂಕು 2019 2020

ಬಾಗೇಪಲ್ಲಿ 68.80 62.56

ಚಿಂತಾಮಣಿ 56.308 42.36

ಚಿಕ್ಕಬಳ್ಳಾಪುರ 63.148 58.65

ಗುಡಿಬಂಡೆ 18.541 10.06

ಗೌರಿಬಿದನೂರು 69.787 58.54

ಶಿಡ್ಲಘಟ್ಟ 60.134 55.73

Follow Us:
Download App:
  • android
  • ios