ಬೆತ್ತಲೆಯಾಗಿ ಬೈಕ್ ಓಡಿಸಿದ ಯುವತಿ ವಿಡಿಯೋ ವೈರಲ್| ಯುವತಿ ಬೆತ್ತಲೆಯಾಗಿ ಸ್ಕೂಟರ್ ಚಲಾಯಿಸಿದ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ
ಬೆಳಗಾವಿ[ಆ.18]: ಯುವತಿಯೊಬ್ಬಳು ಬೆತ್ತಲೆಯಾಗಿ ಬೈಕ್ ಚಲಾಯಿಸಿರುವ ವಿಡಿಯೋ ವೈರಲ್ ಆಗಿದ್ದು, ಅದು ಬೆಳಗಾವಿ ನಗರದಲ್ಲಿ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯುವತಿ ಬೆತ್ತಲೆಯಾಗಿ ಸ್ಕೂಟರ್ ಚಲಾಯಿಸಿದ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಗರದ ವಿವಿಧ ಪ್ರದೇಶಗಳಲ್ಲಿ ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ.
ಆದರೆ, ಈ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆಯೋ ಅಥವಾ ಬೇರೆ ಕಡೆ ನಡೆದ ವಿಡಿಯೋ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
