25 ಡಿಗ್ರಿ ತಾಪದಲ್ಲಿ ಕೊರೋನಾ ವೈರಸ್ ಮರಣ
ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ 25 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಾಪಮಾನದಲ್ಲಿ ಬದುಕಲು ಸಾಧ್ಯವಿಲ್ಲ ಎನ್ನಲಾಗಿದೆ.
ಮಂಡ್ಯ [ಮಾ.17]: 25 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದ ವೇಳೆ ಕೊರೋನಾ ವೈರಸ್ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿ, ಕೊರೋನಾ ವೈರಸ್ ಪರಿಸರದಲ್ಲಿ ಹೆಚ್ಚಿನ ಉಷ್ಣಾಂಶವಿದ್ದರೆ ಅದರ ಪ್ರಸರಣ ಕಡಿಮೆ ಇರುತ್ತದೆ. ಈಗಾಗಲೇ ತಾಪಮಾನ 30 ಡಿಗ್ರಿಗೂ ಹೆಚ್ಚು ಇದೆ. ಆದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಆದರೆ ಎಚ್ಚರಿಕೆಯನ್ನು ವಹಿಸಬೇಕು ಎಂದು ತಿಳಿಸಿದರು.
ಯಾವುದೇ ಒಬ್ಬ ವ್ಯಕ್ತಿಗೆ ಜ್ವರ, ಕೆಮ್ಮು, ಕಫಾದ ಮುನ್ಸೂಚನೆಗಳಿದ್ದರೆ 3 ಅಡಿಗಳ ಕನಿಷ್ಠ ಅಂತರವನ್ನು ಕಾಯ್ದುಕೊಂಡು ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ ಎಂದರು.
ಸೋಂಕಿತರು ಗುಣಮುಖರಾದರೂ ಎರಡು ಪರೀಕ್ಷೆ ಬಳಿಕವೇ ಡಿಸ್ಚಾರ್ಜ್!...
ವಿದೇಶದಿಂದ 25 ಜನ ಜಿಲ್ಲೆಗೆ ಮರಳಿದ್ದಾರೆ. ಅವರನ್ನು ಕೇಂದ್ರ ಸರ್ಕಾರ ನೀಡಿರುವ ಪ್ರೋಟೋಕಾಲ್ ಪ್ರಕರಣದಂತೆ ನಡೆಸಿಕೊಂಡು ಬರಲಾಗಿದೆ. ಇದುವರೆವಿಗೂ ಅವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. 14 ದಿವಸಗಳ ಕಾಲ ಅವರ ಮನೆಗಳಲ್ಲೆ ವಾಸವಾಗಿರುತ್ತಾರೆ. ಒಂದು ವೇಳೆ ರೋಗ ಲಕ್ಷಣಗಳು ಕಂಡುಬಂದಲ್ಲಿ ನಿಯಮಾನುಸಾರ ಅವರನ್ನು ತಪಾಸಣೆಗೆ ಒಳಪಡಿಸಿ ಐಸುಲೇಷನ್ ವಾರ್ಡ್‌ನಲ್ಲಿ ಇರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲೆಯಲ್ಲಿ ಜನರು ಗುಂಪು ಗುಂಪಾಗಿ ಸೇರಬಾರದು ಎಂದು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ರಂಗನತಿಟ್ಟು ಹಾಗೂ ಕೆ.ಆರ್ ಎಸ… ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಮಾಲ…ಗಳು, ನೈಚ್ ಕ್ಲಬ…ಗಳು, ಸ್ವಿಮಿಂಗ… ಫೂಲ…ಗಳು ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಕೂಡ ಸ್ವಯಂ ಪ್ರೇರಿತವಾಗಿ ಸಹಕರಿಸುತ್ತಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರು ಕೈಗಳನ್ನು ಸೋಪು ಅಥವಾ ಲಿಕ್ವಿಡ್‌ಗಳ ಮೂಲಕ ತೊಳೆದುಕೊಳ್ಳಬೇಕು. ಶುದ್ಧವಾದ ಗಾಳಿ ಹಾಗೂ ಬೆಳಕಿನಲ್ಲಿ ಇರಬೇಕು. ಪರಸ್ಪರ ಕೈಕುಲುಕುವುದು ಹಾಗೂ ನಿಕಟ ಸಂಪರ್ಕ ಹೊಂದುವುದನ್ನು ನಿಯಂತ್ರಿಸಬೇಕು. ಇವುಗಳ ನಿರಂತರ ಪ್ರಕ್ರಿಯೆಯಿಂದ ಕೊರೋನೊ ವೈರಸ್‌ನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬಹುದು ಎಂದು ತಿಳಿಸಿದರು.