Asianet Suvarna News Asianet Suvarna News

ಪಾಳು ಬಾವಿಯಲ್ಲಿ ಸ್ಫೋಟ : ಮನೆಯೇ ಛಿದ್ರ

ಹಾಳು ಭಾವಿಯಲ್ಲಿನ ಬೆಂಕಿಯಿಂದ ಸ್ಫೋಟವಾಗಿದ್ದು ಗೋಡೆಯು ಛಿದ್ರ ಛಿದ್ರವಾಗಿದೆ. 

Wall Collapsed inside Fire At well snr
Author
Bengaluru, First Published Oct 21, 2020, 11:16 AM IST

ನೆಲಮಂಗಲ (ಅ.21): ಕಸ ತುಂಬಿದ್ದ ಮನೆಯ ಪಾಳುಬಾವಿಗೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ ಎಂದು ದಾರಿಹೋಕನೊಬ್ಬ ಹೇಳಿದ ಶಾಸ್ತ್ರ ನಂಬಿ ವ್ಯಕ್ತಿ ಬಾವಿಗೇ ಬೆಂಕಿ ಹಾಕಿದ ಘಟನೆ   ಸಂಭವಿಸಿದೆ. ಈ ವೇಳೆ ಕಸದರಾಶಿಯಲ್ಲಿದ್ದ ಯಾವುದೋ ವಸ್ತು ಸ್ಫೋಟಿಸಿ ಭಾರೀ ಸದ್ದಿನೊಂದಿಗೆ ಬಾವಿಯ ಗೋಡೆ ಛಿದ್ರಗೊಂಡು ಕೆಲಕಾಲ ಆತಂಕ ಸೃಷ್ಟಿಸಿತ್ತು.

ಕಲಬುರಗಿ ಶಾಕಿಂಗ್; ಬಾವಿಯಲ್ಲಿ ಮಹಿಳಾ ಹೆಡ್ ಕಾನ್ಸ್ಟೇಬಲ್ ಶವ ಪತ್ತೆ

ನಗರದ ಬೆಸ್ಕಾಂ ಕಚೇರಿ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಈ ಮನೆಯಲ್ಲಿ ಬಾಡಿಗೆಗಿದ್ದ ಶಿವಶಂಕರ್‌ ಎಂಬಾತ ಮಾಟ-ಮಂತ್ರಕ್ಕೆ ಹೆದರಿ ಬಾವಿಗೆ ಬೆಂಕಿಹಾಕಿದಾತ. 

ಘಟನೆಯಲ್ಲಿ ಶಿವಶಂಕರ್‌ ಹಾಗೂ ಆತನ ತಂಗಿಯ ಮಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Follow Us:
Download App:
  • android
  • ios