Asianet Suvarna News Asianet Suvarna News

ನಾನು ಬಿಜೆಪಿಗನಾದ್ರೂ ವಾಸ್ತವ ಹೇಳಬೇಕು: ಹಿಜಾಬ್‌, ಹಲಾಲ್‌ ಗಲಾಟೆ ಹಿಂದೆ ವಿಹಿಂಪ, RSS: ವಿಶ್ವನಾಥ್‌

*    ಸರ್ಕಾರ ಮತ್ತು ಯಡಿಯೂರಪ್ಪ ಮಧ್ಯಪ್ರವೇಶ ಮಾಡಬೇಕು 
*   ಹಲಾಲ್‌ ಕಟ್‌ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ
*   ದೇವಸ್ಥಾನ ಬಳಿ ಒಂದು ಸಮುದಾಯ ವ್ಯಾಪಾರ ಮಾಡಬಾರದು ಎಂದು ಹೇಳುವುದು ಒಳ್ಳೆಯದಲ್ಲ

VHP and RSS Behind the Hijab Halal Controversy in Karnataka Says BJP Leader H Vishwanath grg
Author
Bengaluru, First Published Apr 1, 2022, 9:37 AM IST | Last Updated Apr 1, 2022, 9:37 AM IST

ನವದೆಹಲಿ(ಏ.01):  ನಾನು ಬಿಜೆಪಿ(BJP) ಸದಸ್ಯ, ಆದರೆ ವಾಸ್ತವ ಹೇಳಬೇಕು. ಹಿಜಾಬ್‌, ಹಲಾಲ್‌ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್‌(VHP), ಆರ್‌ಎಸ್‌ಎಸ್‌(RSS) ಇದೆ ಎಂದು ಆರೋಪಿಸಿರುವ ಮಾಜಿ ಸಚಿವ ಎಚ್‌.ವಿಶ್ವನಾಥ್‌(H Vishwanath), ಸರ್ಕಾರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರು ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್‌(Halal) ಕಟ್‌ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ದೇವಸ್ಥಾನ(Temple) ಬಳಿ ಒಂದು ಸಮುದಾಯ ವ್ಯಾಪಾರ ಮಾಡಬಾರದು ಎಂದು ಹೇಳುವುದು ಒಳ್ಳೆಯದು ಅಲ್ಲ. ಕೂಡಲೇ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಅಂತ ಆಗ್ರಹಿಸಿದ್ದಾರೆ. 

Karnataka Politics : ಸಿದ್ದರಾಮಯ್ಯ ವಿರುದ್ಧ ಎಚ್‌. ವಿಶ್ವನಾಥ್‌ ಏಕವಚನದಲ್ಲಿ ವಾಗ್ದಾಳಿ

ಕರ್ನಾಟಕದಲ್ಲಿ(Karnataka) ಇರುವುದು ಬಿಜೆಪಿ ಸರ್ಕಾರ. ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್‌ ಸರ್ಕಾರ ಇಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಹಲಾಲ್‌, ಹಿಜಾಬ್‌(Hijab) ವಿಚಾರಗಳು ಮುನ್ನೆಲೆಗೆ ಬರುತ್ತಿರಲಿಲ್ಲ. ಹಾಗಾಗಿ ಬಿಎಸ್‌ವೈ ಮಧ್ಯ ಪ್ರವೇಶ ಮಾಡಿ, ಪರಿಸ್ಥಿತಿ ತಿಳಿಗೊಳಿಸಬೇಕು ಎಂದರು.

ಮತಾಂತರ ನಿಷೇಧ ವಿಧೇಯಕ : ಎಚ್ ವಿಶ್ವನಾಥ್ ವಿರೋಧ

ಬೆಳಗಾವಿ: ಅಧಿವೇಶನದಲ್ಲಿ‌ ಮತಾಂತರ ವಿಧೇಯಕ ಮಂಡನೆ ವಿಚಾರಕ್ಕೆ ಇದೀಗ ಬಿಜೆಪಿ (BJP)  ಮುಖಂಡರಿಂದಲೇ ವಿರೋಧ ವ್ಯಕ್ತವಾಗಿದೆ.  ವಿಧೇಯಕಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ. 
ಡಿ.23 ರಂದು ಬೆಳಗಾವಿಯಲ್ಲಿ (Belagavi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ವಿಶ್ವನಾಥ್ 12 ಶತಮಾನದಲ್ಲಿ ಸಮಾನತೆ ಬಗ್ಗೆ ಬಸವಣ್ಣ ಮಾನವ ಧರ್ಮ ಸ್ಥಾಪನೆ ‌ಮಾಡಿದ್ದರು. ಜಾತಿ ಧರ್ಮ ಭೇದವಿಲ್ಲದೆ ಸಮಾನತೆ ಬಗ್ಗೆ ಹೇಳಿದ್ದರು. ಇದಕ್ಕೆಲ್ಲಾ ವಿರೋಧವಾಗಿರುವ ಈ  ವಿಧೇಯಕ ಜಾರಿ ಸರಿ ಅಲ್ಲ ಎಂದು ಹೇಳಿದ್ದರು. 

ಭಾರತ ಬಹುತ್ವ ಉಳ್ಳ ದೇಶವಾಗಿದೆ. ಅಂಬೇಡ್ಕರ್ (Ambedkar) ಸಂವಿಧಾನವನ್ನು ನೀಡಿದ್ದಾರೆ. ತಮ್ಮ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ.  ಪ್ರಧಾನಿ ಮೋದಿ (Prime Minister Modi)  ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ. ದೇಶದ ಮಹನಿಯರು ಹೇಳಿರುವುದು ಸಹಬಾಳ್ವೆ ಬಗ್ಗೆಯೆ ಹೇಳಿರುವುದು.  ಬಸವೇಶ್ವರ ಕಟ್ಟಿದ ಮಾನವ ಧರ್ಮವನ್ನ ಮುಖ್ಯಮಂತ್ರಿ ಒಡೆಯುವ ಕೆಲಸ ಮಾಡುತ್ತಿರುವುದು ವಿಪರ್ಯಾಸವೇ ಸರಿ ಎಂದು ವಿಶ್ವನಾಥ್ ತಿಳಿಸಿದ್ದರು. 

Council Election Karnataka : ರಾಜ್ಯದ ನಾಯಕರು ದಿಕ್ಕೆಡಿಸುವ ಕೆಲಸ ಮಾಡುತ್ತಿದ್ದಾರೆ : ವಿಶ್ವನಾಥ್

ನಮ್ಮ ಮುಖ್ಯಮಂತ್ರಿ ಹೆಸರು ಕೂಡ ಬಸವಣ್ಣನೆ. ಮತಾಂತರ ವಿಧೇಯಕವನ್ನು ಯಾರೂ ಮೆಚ್ಚುವುದಿಲ್ಲ. ಜಿಲ್ಲಾಧಿಕಾರಿಗಳಿಂದ ಜೈಲಿಗೆ ಹಾಕಿಸಲು ಸಾಧ್ಯವಾ..? ಆರ್.ಎಸ್.ಎಸ್ ನಾಯಕರ ಮಕ್ಕಳೇ ಮುಸ್ಲಿಂರ ಮಕ್ಕಳನ್ನು ಮದುವೆಯಾಗಿದ್ದಾರೆ. ಇವರುಗಳನ್ನು ಜೈಲಿಗೆ ಹಾಕಲು ಸಾಧ್ಯವೇ. ಸಿನಿಮಾ ನಟರು ಬ್ರಾಹ್ಮಣರನ್ನು‌ ಮದುವೆಯಾಗಿದ್ದಾರೆ.  ಇವರನ್ನ ಜೈಲಿಗೆ ಹಾಕಲು ಸಾಧ್ಯವೇ ಎಂದಿದ್ದರು. 

ಕಾಂಗ್ರೆಸ್‌ (Congress) ನಾಯಕರು ಇಬ್ಬಗೆಯ ನಾಟವಾಡುತ್ತಿದ್ದಾರೆ. ನಾವು ಹೊರಗೆ ಇದ್ದಾಗ ಮಂಡನೆ ಮಾಡಿದರು ಎನ್ನುತ್ತಾರೆ.  ಹೊರಗಡೆ ಹರಟೆ ಹೊಡೆಯುತ್ತಾ ಕುಳಿತು ಮುಸ್ಲಿಂರ (Muslim) ಧಾರ್ಮಿಕ ಸ್ವಾತಂತ್ರ್ಯ ಕಾಪಾಡುತ್ತಿದ್ದೀರಾ?  ದಲಿತರು ಮತಾಂತರ ಆಗಲೆ ಬಾರದು ಎನ್ನುವ ರೀತಿ ಧಾರ್ಮಿಕ ದಿಗ್ಬಂದನ ಹಾಕಲಾಗುತ್ತಿದೆ.  ದಿಗ್ಬಂದನವನ್ನು ಹೇರಲಾಗುತ್ತಿದೆ ಎಂದು ಹೇಳಿದ್ದರು. ಬಸವಣ್ಣನ (Basavanna) ತತ್ವವನ್ನ ಅಳವಡಿಸಿಕೊಂಡಿರುವ ಮಠಾಧೀಶರು ಯಾರು ಮಾತನಾಡುತ್ತಿಲ್ಲ.  ಚಿತ್ರದುರ್ಗದ (Chitradurga) ಮಠದವರು ಬಾಯಿ ಮುಚ್ಚಿ ಕುಳಿತಿದ್ದಾರೆ.  ಸರ್ಕಾರದ ಅನುದಾನ ನೀಡಿ ಬಾಹಿ ಮುಚ್ಚಿಸಿದ್ದಾರೆ. ಅಹಿಂದ ಮಠಗಳು ಮಾತನಾಡುತ್ತಿಲ್ಲ. ನಿಮ್ಮ ಬಾಯಿ ಕಟ್ಟಿರುವುದು ಯಾರು. ಸಾಹಿತಿಗಳು ಚಿಂತಕರು ಬಾಯಿ‌ಬಿಡುತ್ತಿಲ್ಲ. ಅವರೆಲ್ಲಾ ರಾಜ್ಯೋತ್ಸವ ಪ್ರಶಸ್ತಿಗಷ್ಟೆ ಸೀಮಿತವಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು.
 

Latest Videos
Follow Us:
Download App:
  • android
  • ios