ನೆರೆ ಮನೆ ವಿವಾಹಿತ ಮಹಿಳೆಯ ಮತಾಂತರಗೊಳಿಸಿ 'ನಿಖಾ' ಮಾಡಿಕೊಂಡ ಯುವಕ!
* ಉತ್ತರ ಪ್ರದೇಶದ ಫತೇಪುರ್‌ನಲ್ಲಿ ಶಾಕಿಂಗ್ ಘಟನೆ
* ನೆರೆ ಮನೆಯ ವಿವಾಹಿತ ಮಹಿಳೆ ಮೇ;ಎ ಯುವಕನ ಕಣ್ಣು
* ದೆಹಲಿಗೆ ಕರೆದೊಯ್ದು ಮತಾಂತರ ಬಳಿಕ ನಿಖಾ ಮಾಡಿಕೊಂಡ
ಲಕ್ನೋ(ಏ.03): ಉತ್ತರ ಪ್ರದೇಶದ ಫತೇಪುರ್‌ನಲ್ಲಿ ಯುವಕನೊಬ್ಬ ಪಕ್ಕದ ಮನೆ ಮಹಿಳೆಗೆ ಆಮಿಷ ಒಡ್ಡಿ ತನ್ನೊಂದಿಗೆ ದೆಹಲಿಗೆ ಕರೆದೊಯ್ದ. ಆಕೆಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಆಕೆಯ ಧರ್ಮ ಬದಲಾಯಿಸಿದ್ದಾನೆ. ಆ ಬಳಿಕ ಮಹಿಳೆಯನ್ನು ಮದುವೆಯಾಗಿದ್ದಾನೆ. ಅತ್ತ ಮಹಿಳೆಯ ಪತಿಯ ದೂರಿನ ಮೇರೆಗೆ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸುತ್ತಾ ದೆಹಲಿ ತಲುಪಿದ್ದಾರೆ. ಅಲ್ಲಿ ಇಬ್ಬರನ್ನೂ ಪತ್ತೆ ಹಚ್ಚಿದ ಪೊಲೀಸರು ಮರಳಿ ಕರೆತಂದಿದ್ದಾರೆ. ಇದಾದ ನಂತರ ಮತಾಂತರ ಮಾಡಿ ಮದುವೆ ಬಯಲಿಗೆ ಬಂದಿದ್ದು, ಪೊಲೀಸರು ಸಂಬಂಧಪಟ್ಟ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಲ್ಲಿಂದ ಜೈಲಿಗೆ ಕಳುಹಿಸಿದ್ದಾರೆ.
ನಾನು ಬಿಜೆಪಿಗನಾದ್ರೂ ವಾಸ್ತವ ಹೇಳಬೇಕು: ಹಿಜಾಬ್, ಹಲಾಲ್ ಗಲಾಟೆ ಹಿಂದೆ ವಿಹಿಂಪ, RSS: ವಿಶ್ವನಾಥ್
ಮಾಹಿತಿಯ ಪ್ರಕಾರ, ಜಿಲ್ಲೆಯ ಲಾಲೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ನಿವಾಸಿ 22 ವರ್ಷದ ಹಸನ್ ಮೊಹಮ್ಮದ್ ಅಲಿಯಾಸ್ ಮೋನು ನೆರೆ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯನ್ನು ಮೋಸಗೊಳಿಸಿ ಮಾರ್ಚ್ 17ರಂದು ತನ್ನೊಂದಿಗೆ ದೆಹಲಿಗೆ ಕರೆದೊಯ್ದಿದ್ದ. ಮಹಿಳೆಯನ್ನು ಕರೆದುಕೊಂಡು ಹೋದ ನಂತರ, ಹಸನ್ ಮೊಹಮ್ಮದ್ ಗಾಜಿಯಾಬಾದ್‌ನಲ್ಲಿ ಆಕೆಯ ಧರ್ಮವನ್ನು ಪರಿವರ್ತಿಸಿದ ನಂತರ ಆಕೆಯನ್ನು ವಿವಾಹವಾಗಿದ್ದಾನೆ. ಆ ನಂತರ ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರನ್ನೂ ಹುಡುಕುತ್ತಾ ದೆಹಲಿ ತಲುಪಿದ್ದಾರೆ.
ಮಹಿಳೆಯ ಪತಿ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲು
ಇಬ್ಬರನ್ನೂ ಪತ್ತೆ ಹಚ್ಚಿದ ಪೊಲೀಸರು ಅವರನ್ನು ತಮ್ಮೊಂದಿಗೆ ವಾಪಸ್ ಕರೆತಂದಿದ್ದಾರೆ. ವಾಪಸ್ ಬಂದ ಬಳಿಕ ಯುವತಿಯನ್ನು ಬೇರೆ ಧರ್ಮಕ್ಕೆ ಮತಾಂತರಗೊಳಿಸಿ ಯುವಕ ಮದುವೆಯಾಗಿರುವುದು ಪತ್ತೆಯಾಗಿದೆ. ಬಳಿಕ ಮಹಿಳೆಯ ಪತಿ ಸ್ಥಳೀಯ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಈ ಪ್ರಕರಣದಲ್ಲಿ ಕಲಂ 386, 506, 3/5 (1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಯುವಕನನ್ನು ನ್ಯಾಯಾಲಯ ಜೈಲಿಗೆ ಕಳುಹಿಸಿದೆ.
Karnataka Politics: ಅವಧಿಗೆ ಮುನ್ನವೇ ಕರ್ನಾಟಕದಲ್ಲಿ ಎಲೆಕ್ಷನ್: ಅರುಣ್ ಸಿಂಗ್ ಹೇಳಿದ್ದಿಷ್ಟು
ಪೊಲೀಸರು ವಿಷಯದ ತನಿಖೆಯಲ್ಲಿ ತೊಡಗಿದ್ದಾರೆ ಎಂದ ಉನ್ನತ ಪೊಲೀಸ್ ಅಧಿಕಾರಿ
ಲಲೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ವ್ಯಕ್ತಿಯೊಬ್ಬರು ನೆರೆಹೊರೆಯ ವಿವಾಹಿತ ಮಹಿಳೆಯನ್ನು ವಂಚಿಸಿ ದೆಹಲಿಗೆ ಕರೆದೊಯ್ದು ಮತಾಂತರಿಸಿದ ನಂತರ ವಿವಾಹವಾಗಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ದೆಹಲಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಇಬ್ಬರನ್ನೂ ತನ್ನೊಂದಿಗೆ ಕರೆತಂದಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ವಿಷಯ ಚರ್ಚೆಯಾಗುತ್ತಿದೆ ಎಂದಿದ್ದಾರೆ.
ಧರ್ಮ, ಜಾತಿ ಇಲ್ಲದ ಪ್ರಮಾಣಪತ್ರ ನೀಡಿ: ಕೋರ್ಟ್ ಮೆಟ್ಟಿಲೇರಿದ ಬ್ರಾಹ್ಮಣ ಮಹಿಳೆ
ಸೂರತ್ ನಗರದ ಬ್ರಾಹ್ಮಣ ಮಹಿಳೆಯೊಬ್ಬರು ತನಗೆ ಯಾವುದೇ ಧರ್ಮ ಹಾಗೂ ಜಾತಿಯ ಉಲ್ಲೇಖವಿಲ್ಲದ ಪ್ರಮಾಣಪತ್ರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸ್ನೇಹ ಪ್ರತಿಭಾರಾಜ್ (Sneha Prathiibaraja) ಎಂಬವರು ತನ್ನ ಧಾರ್ಮಿಕ ಗುರುತನ್ನು ತೆಗೆದು ಹಾಕುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ(Madras high court) ಸಲ್ಲಿಸಿದ ಪ್ರಕರಣದಂತೆ ತನಗೂ ಜಾತಿ ಹಾಗೂ ಧರ್ಮದ ಉಲ್ಲೇಖವಿಲ್ಲದ ಪ್ರಮಾಣಪತ್ರವನ್ನು ನೀಡುವಂತೆ 36 ವರ್ಷದ ಕಾಜಲ್ ಗೋವಿಂದಭಾಯ್ ಮಂಜುಳಾ (Kajal Govindbhai Manjula) ಅವರು ವಕೀಲ ಧರ್ಮೇಶ್ ಗುರ್ಜರ್ (Dharmesh Gurjar)ಮೂಲಕ ಬುಧವಾರ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ತಾರತಮ್ಯದ ಜಾತಿ ವ್ಯವಸ್ಥೆಯ ಸಮಾಜದಿಂದ ತಾನು ಹಾಗೂ ತನ್ನ ಕುಟುಂಬ ಸಾಕಷ್ಟು ನೋವನ್ನು ಅನುಭವಿಸಿದ್ದು ಅಂತಿಮವಾಗಿ ಆ ಗುರುತುಗಳನ್ನು ತೊಡೆದು ಹಾಕಲು ನಿರ್ಧರಿಸಿರುವುದಾಗಿ ಕಾಜಲ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಭವಿಷ್ಯದಲ್ಲಿ ಎಲ್ಲಿಯೂ ತನ್ನ ಜಾತಿ ಮತ್ತು ಧರ್ಮದ ಪ್ರಸ್ತಾಪ ಆಗುವುದನ್ನು ಅವರು ಬಯಸುವುದಿಲ್ಲ. ನಮ್ಮ ದೇಶ ಮತ್ತು ಸಮಾಜದಲ್ಲಿನ ತಾರತಮ್ಯದ ಜಾತಿ ವ್ಯವಸ್ಥೆಯಿಂದಾಗಿ ಅರ್ಜಿದಾರರು ತಮ್ಮ ಜೀವನದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಿದ್ದಾರೆ. ಅಲ್ಲದೇ ಇಂತಹ ಜಾತಿ ವ್ಯವಸ್ಥೆಯ ಕಾರಣಕ್ಕೆ ದೇಶದಲ್ಲಿ ಅನೇಕ ಬಾರಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಅರ್ಜಿದಾರರು ಮೂಲತಃ ರಾಜ್‌ಗೋರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಇದರ ಹೊರತಾಗಿಯೂ ಅವರು ಸಮಾಜದಲ್ಲಿ ಇಂತಹ ವಿವೇಚನಾ ರಹಿತ ಜಾತಿ ವ್ಯವಸ್ಥೆಯಿಂದಾಗಿ ಅವರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ ಎಂದು ಗಮನಿಸುವುದು ಸೂಕ್ತವಾಗಿದೆ ಎಂದು ಅವರ ಅರ್ಜಿಯಲ್ಲಿ ಹೇಳಲಾಗಿದೆ.