Asianet Suvarna News Asianet Suvarna News

ಧಾರವಾಡ: ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ, ಜನಜಾಗೃತಿಗಾಗಿ ಕಾಲ್ನಡಿಗೆ

ಜನಜಾಗೃತಿಗಾಗಿ ಕಾಲ್ನಡಿಗೆ ಜಾಥಾ ಇಂದಿನಿಂದ ತಿಂಗಳ ಕಾಲ ಬಿಎಲ್‍ಓ ಗಳಿಂದ ಮನೆ ಮನೆ ಭೇಟಿ  

Walking for Public Awareness About Electoral Roll Special Brief Revision in Dharwad grg
Author
First Published Nov 9, 2022, 7:15 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ ..

ಧಾರವಾಡ(ನ.09): ಭಾರತ ಚುನಾವಣಾ ಆಯೋಗವು ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಆರಂಭಿಸಿದ್ದು ಇಂದಿನಿಂದ ಒಂದು ತಿಂಗಳ ಕಾಲ ಪ್ರತಿ ಮತಗಟ್ಟೆ ಅಧಿಕಾರಿ ತನ್ನ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ, ಮತದಾರ ಪಟ್ಟಿಯ ಸ್ವಚ್ಛತೆ (ಪರಿಷ್ಕರಣೆ) ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು. 

ಅವರು ಇಂದು(ಬುಧವಾರ) ನಡೆದ ಕೆಸಿಡಿ ಆವರಣದಲ್ಲಿ ಶಾಲಾ-ಕಾಲೇಜುಗಳ ಮತದಾರ ಸಾಕ್ಷರತಾ ಕ್ಲಬ್‍ಗಳ ಸದಸ್ಯರನ್ನು ಮತ್ತು ಮತದಾರ ಜಾಗೃತಿ ಕಾಲೇಜು ರಾಯಭಾರಿಗಳ ಕಾಲನಡಿಗೆ ಜಾಥಾ ಉದ್ದೇಶಿಸಿ ಮಾತನಾಡಿದರು 2023 ರಲ್ಲಿ ಬರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023 ಆರಂಭವಾಗಿದೆ. ಮತದಾರ ಪಟ್ಟಿಯ ಪರಿಷ್ಕರಣೆಯಲ್ಲಿ ನಿಧನರಾದವರ ಸ್ಥಳಾಂತರಗೊಂಡವರ ಮತ್ತು ಬೇರೆ ಮತಕ್ಷೇತ್ರದ ಮತದಾರ ಪಟ್ಟಿಗೆ ಹೆಸರು ವರ್ಗಾಯಿಸಿಕೊಂಡಿರುವ ಕುರಿತು ಪರಿಶೀಲಿಸಲಾಗುತ್ತದೆ. ನಿಗದಿತ ನಮೂನೆಗಳಲ್ಲಿ ಮಾಹಿತಿ ತುಂಬಿ, ಮತದಾರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ನಾಯಕರಿಗೆ ಹಿಂದು ಪದ ಅಲರ್ಜಿ; ಜಗದೀಶ್ ಶೆಟ್ಟರ್ ಕಿಡಿ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಮತದಾರನ ಮತದಾರ ಚೀಟಿಯ ಸಂಖ್ಯೆಗೆ ಆಧಾರ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಮತದಾರ ಚೀಟಿಗೆ ಆಧಾರ ಸಂಖ್ಯೆ ಜೋಡಣೆ ಮಾಡುವುದರಿಂದ ಮತದಾರನ ಹೆಸರು ಬೇರೆ ಮತದಾರ ಪಟ್ಟಿಯಲ್ಲಿ ನಕಲು ಆಗುವುದು ತಪ್ಪುತ್ತದೆ ಪ್ರತಿ ಮತಗಟ್ಟೆ ಮಟ್ಟದ ಅಧಿಕಾರಿ ತನ್ನ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಪ್ರತಿ ಮತದಾನ ಕುರಿತು ಮಾಹಿತಿ ಸಂಗ್ರಹಿಸಿ, ಪರಿಷ್ಕರಿಸುತ್ತಾರೆ. ಆಧಾರ್ ಸಂಖ್ಯೆ ಜೋಡಣೆಗೆ ಕ್ರಮ ವಹಿಸುತ್ತಾರೆ. ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಅವರು ಹೇಳಿದರು.

ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬ ವ್ಯಕ್ತಿ ಮತದಾರ ಪಟ್ಟಿಗೆ ತನ್ನ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ವರ್ಷದಲ್ಲಿ ನಾಲ್ಕು ಸಲ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಕೇಂದ್ರ ಚುನಾವಣಾ ಆಯೋಗ ಅವಕಾಶ ನೀಡಿದೆ ಸದೃಢ ಪ್ರಜಾಪ್ರಭುತ್ವ ಸ್ಥಾಪಿಸಲು ಮತದಾರ ಮತದಾನ ಮುಖ್ಯವಾಗಿರುತ್ತವೆ ಎಂದರು.

ಶಾಲಾ ಕಾಲೇಜುಗಳಲ್ಲಿ ಮತದಾರ ಸಾಕ್ಷರತಾ ಕ್ಲಬ್‍ಗಳನ್ನು ಸ್ಥಾಪಿಸಲಾಗಿದೆ ಪ್ರತಿ ಕಾಲೇಜಿಗೆ ವಿದ್ಯಾರ್ಥಿ ರಾಯಭಾರಿಗಳನ್ನು ನೇಮಿಸಲಾಗಿದೆ. ಆ ಮೂಲಕ 18 ವರ್ಷ ತುಂಬಿದ ಹೊಸ ಮತದಾರರಲ್ಲಿ ಮತ್ತು ವಿದ್ಯಾರ್ಥಿಗಳ ಪಾಲಕರಲ್ಲಿ ಮತದಾರ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು ಜನಜಾಗೃತಿ ಕಾಲನಡಿಗೆ ಜಾಥಾ ಪೂರ್ವದಲ್ಲಿ ಕಲಾಭವನ ಆವರಣದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಬಿಜೆಪಿ ಕಿತ್ತೊಗೆಯಲು ಜನರ ಸಂಕಲ್ಪ: ಸಿದ್ದರಾಮಯ್ಯ

ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಪ್ರೋಬೆಷನರಿ ಎಸಿ ಅನುರಾಧಾ ವಸ್ತ್ರದ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣನಾಯಕ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಶಿರಸ್ತೆದಾರ ಪವೀಣ ಪೂಜಾರ, ಕಂದಾಯ ನಿರೀಕ್ಷಕ ಗುರು ಸುಣಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪದಕಿ ಮತ್ತು  ಬಿ.ಬಿ. ದುಬ್ಬನಮರಡಿ, ಜಿ.ಎನ್. ಮಠಪತಿ, ಎಸ್.ಎಮ್. ಹುದೇಡಮನಿ, ಜೆ.ಎನ್. ನಂದನ್ ಸೇರಿದಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಮಹಾವಿದ್ಯಾಲಯ, ಸರ್ಕಾರಿ ಮಹಿಳಾ ಪದವಿ ಕಾಲೇಜು, ಕಿಟಲ್ ಕಾಲೇಜು, ಅಂಜುಮನ್ ಕಾಲೇಜು, ಸಿಎಸ್‍ಐ ಕಾಲೇಜು, ಮೃತ್ಯುಂಜಯ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.

ಧಾರವಾಡ ತಹಶೀಲ್ದಾರ ಸಂತೋಷ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಾಕ್ಷರತೆ ಮತ್ತು ಸುಧಾರಣೆ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ವಂದಿಸಿದರು ತಹಶೀಲ್ದಾರ ಕಚೇರಿ ಚುನಾವಣಾ ಶಾಖೆ ಶಿರಸ್ತೆದಾರ ಮಂಜುನಾಥ ಗೂಳಪ್ಪನವರ ಕಾರ್ಯಕ್ರಮ ನಿರೂಪಿಸಿದರು.
 

Follow Us:
Download App:
  • android
  • ios