ಜೆಡಿಎಸ್‌ಗೆ ಮತ, ಬಿಜೆಪಿಗೆ ಹಿತ: ಜಮೀರ್‌

ನೀವು ಜೆಡಿಎಸ್‌ಗೆ ಒಂದು ಮತ ಹಾಕಿದರೆ, ಬಿಜೆಪಿಗೆ ಎರಡು ಮತ ಹಾಕಿದಷ್ಟುಸಮವಾಗಲಿದೆ. ಅಂದರೆ ಜೆಡಿಎಸ್‌ಗೆ ಮತ, ಬಿಜೆಪಿಗೆ ಹಿತ ಎನ್ನುವಂತಾಗುತ್ತದೆ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಹೇಳಿದರು.

 Vote for JDS  it is favor BJP Zameer snr

 ತುರುವೇಕೆರೆ :  ನೀವು ಜೆಡಿಎಸ್‌ಗೆ ಒಂದು ಮತ ಹಾಕಿದರೆ, ಬಿಜೆಪಿಗೆ ಎರಡು ಮತ ಹಾಕಿದಷ್ಟುಸಮವಾಗಲಿದೆ. ಅಂದರೆ ಜೆಡಿಎಸ್‌ಗೆ ಮತ, ಬಿಜೆಪಿಗೆ ಹಿತ ಎನ್ನುವಂತಾಗುತ್ತದೆ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಹೇಳಿದರು.

ತಾಲೂಕಿನ ಮಾಯಸಂದ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬೆಮಲ್‌ ಕಾಂತರಾಜ್‌ರವರ ಪರ ಮತಯಾಚನೆ ಮಾಡಿದ ಅವರು ತುರುವೇಕೆರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯೇ ಪ್ರತಿಸ್ಪರ್ಧಿ. ಜೆಡಿಎಸ್‌ ಮೂರನೇ ಸ್ಥಾನದಲ್ಲಿದೆ. ಅಲ್ಪಸಂಖ್ಯಾತರಿಗೆ ನೋವುಂಟು ಮಾಡುತ್ತಿರುವ ಬಿಜೆಪಿಯನ್ನು ಸೋಲಿಸಬೇಕೆಂದರೆ ಅಲ್ಪಸಂಖ್ಯಾತರೆಲ್ಲರೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕೆಂದು ಜಮೀರ್‌ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿಕೊಂಡರು.

ತುರುವೇಕೆರೆ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿರುವ ಮಸಾಲಾ ಜಯರಾಮ್‌ರವರು ಅಲ್ಪಸಂಖ್ಯಾತರಿಗೆ ಏನೇನು ಸಹಾಯ ಮಾಡಿಲ್ಲ. ಮಾಡುವುದೂ ಇಲ್ಲ. ಜೆಡಿಎಸ್‌ ಪಕ್ಷಕ್ಕೆ ಬೆಲೆ ಇಲ್ಲ. ಅವರು ಅಧಿಕಾರ ಮಾಡಲು ಸಾಧ್ಯವಿಲ್ಲ. ಇಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಸಿಗಬೇಕೆಂದರೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿರುವ ಬೆಮಲ್‌ ಕಾಂತರಾಜ್‌ ರವರು ಗೆಲ್ಲಲೇಬೇಕು ಎಂದರು.

ಬೆಮಲ್‌ ಕಾಂತರಾಜ್‌ ಹಾಗೂ ಅವರ ಕುಟುಂಬ ಸೇವೆಗೆ ಹೆಸರು ವಾಸಿಯಾಗಿದೆ. ಇಲ್ಲೂ ಸಹ ಸಜ್ಜನರಾಗಿರುವ ಬೆಮಲ್‌ ಕಾಂತರಾಜ್‌ರವರು ಕ್ಷೇತ್ರದ ಸೇವೆ ಮಾಡಲು ಪ್ರಾಮಾಣಿಕವಾಗಿ ಸಿದ್ಧರಿದ್ದಾರೆ. ಆದರೆ ಹಾಲಿ ಶಾಸಕರಾಗಿರುವ ಬಿಜೆಪಿಯ ಮಸಾಲಾ ಜಯರಾಮ್‌ರವರು ವ್ಯಾಪಾರಸ್ಥರು. ಅವರು ನಿಮ್ಮ ಕಷ್ಟಸುಖ ಕೇಳಲು ಸಿದ್ದರಿಲ್ಲ. ನಿಮಗೆ ಸೇವೆ ಮಾಡುವ ಮನಸ್ಸುಳ್ಳ ಬೆಮಲ್‌ ಕಾಂತರಾಜ್‌ ಬೇಕೋ? ವ್ಯಾಪಾರಸ್ಥ ಮಸಾಲಾ ಜಯರಾಮ್‌ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ಜಮೀರ್‌ ಅಹಮದ್‌ ಜನರನ್ನು ಪ್ರಶ್ನಿಸಿದರು.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬೆಮಲ್‌ ಕಾಂತರಾಜ್‌ ಮಾತನಾಡಿ, ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿವೆ. ನಮಗೆ ಬಿಜೆಪಿಯೇ ಪ್ರತಿಸ್ಪರ್ಧಿಯಾಗಿರುವುದರಿಂದ ಮುಸ್ಲಿಂ ಸಮುದಾಯ ತಮಗೆ ಬೆಂಬಲಿಸಿದರೆ ಕಾಂಗ್ರೆಸ್‌ ಗೆಲುವು ಶತಸ್ಸಿದ್ಧ ಎಂದು ಹೇಳಿದರು.

ಮಾಯಸಂದ್ರಕ್ಕೆ ಜಮೀರ್‌ ಅಹಮದ್‌ ಆಗಮಿಸುತ್ತಿದ್ದಂತೆ ನೂರಾರು ಮುಸ್ಲಿಂ ಯುವಕರು ಕಾಂಗ್ರೆಸ್‌ಗೆ ಹಾಗೂ ಜಮೀರ್‌ ಅಹಮದ್‌ಗೆ ಜಯಘೋಷ ಹಾಕಿದರು. ಜಮೀರ್‌ ಅಹಮದ್‌ ತೆರೆದ ವಾಹನದಲ್ಲಿ ನಿಂತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಎನ್‌.ಆರ್‌.ಜಯರಾಮ್‌, ಮುರುಳಕುಪ್ಪೆ ಶ್ರೀನಿವಾಸ್‌, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್‌.ವಸಂತಕುಮಾರ್‌, ಪಟ್ಟಣ ಪಂಚಾಯ್ತಿ ಸದಸ್ಯ ನದೀಂ, ಕೆ.ಬಿ.ಹನುಮಂತಯ್ಯ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ನಡ್ಡಾ ಸೇರಿದಂತೆ ಹಲವಾರು ಮುಖಂಡರು ಶತಾಯಗತಾಯ ಹೋರಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಆಡಳಿತ ಮಾಡಿರುವ ಬಿಜೆಪಿ ಸರ್ಕಾರ ಕೆಟ್ಟಹೆಸರು ತೆಗೆದುಕೊಂಡಿರುವುದರಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಸುಳ್ಳು. ಅಲ್ಪಸಂಖ್ಯಾತರಿಗೆ ಇಲ್ಲದ ಕಿರುಕುಳ ಕೊಡುತ್ತಿರುವ ಬಿಜೆಪಿ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಬೇಕೆಂದರೆ ಎಲ್ಲರೂ ಕಾಂಗ್ರೆಸ್‌ಗೆ ಮತ ನೀಡಲೇಬೇಕು.

ಜಮೀರ್‌ ಅಹಮದ್‌ ಮಾಜಿ ಸಚಿವ 

Latest Videos
Follow Us:
Download App:
  • android
  • ios