ಈ ಬಾರಿ ಕಾಂಗ್ರೆಸ್‌ಗೆ 160 ಸೀಟು: ಜಮೀರ್ ವಿಶ್ವಾಸ
ಈ ಬಾರಿ ಕಾಂಗ್ರೆಸ್‌ಗೆ ಸುಮಾರು 160 ಸೀಟು ಬರುವ ಮೂಲಕ ಕಾಂಗ್ರೆಸ್ ಪಕ್ಷ ಆಡಳಿತ ಮಾಡುತ್ತದೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ತಿಳಿಸಿದರು.
ಗುಬ್ಬಿ : ಈ ಬಾರಿ ಕಾಂಗ್ರೆಸ್‌ಗೆ ಸುಮಾರು 160 ಸೀಟು ಬರುವ ಮೂಲಕ ಕಾಂಗ್ರೆಸ್ ಪಕ್ಷ ಆಡಳಿತ ಮಾಡುತ್ತದೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ತಿಳಿಸಿದರು.
ಪಟ್ಟಣದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಕುನ್ನಾಲಾ ಗ್ರಾಮದವರೆಗೂ ನಡೆದ ರೋಡ್ ಶೋದಲ್ಲಿ ಮಾತನಾಡಿದ ಅವರು ಇಬ್ರಾಹಿಂ ಜೋಕರ್ ಇದ್ದಂತೆ. ಭದ್ರಾವತಿಯ ಅವರ ಕ್ಷೇತ್ರದಲ್ಲಿ ಅವರು ಗೆಲ್ಲಲು ಸಾಧ್ಯವಾಗಿಲ್ಲ. ಅಂತದರಲ್ಲಿ ರಾಜ್ಯದಲ್ಲಿ ಎಷ್ಟುಸೀಟು ಗೆಲ್ಲಿಸಲು ಅವರಿಂದ ಸಾಧ್ಯ ಎಂದು ವ್ಯಂಗ್ಯವಾಡಿದ ಅವರು ಬಿಜೆಪಿ ಪಕ್ಷದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಈ ಚುನಾವಣೆಯಲ್ಲಿ ಅವರಿಗೆ ಜನ ಪಾಠ ಕಲಿಸುತ್ತಾರೆ. ವಾಸಣ್ಣನಿಂದ ಜೆಡಿಎಸ್ ಹೊರತು ಜೆಡಿಎಸ್‌ನಿಂದ ಯಾವತ್ತು ವಾಸಣ್ಣ ಗುಬ್ಬಿ ಕ್ಷೇತ್ರದಲ್ಲಿ ಆಗಿಲ್ಲ. ಈ ಬಾರಿ ಗೆಲ್ಲಿಸಿದರೆ ಖಂಡಿತವಾಗಿಯೂ ಸಚಿವ ಸ್ಥಾನಕ್ಕೆ ನಾನು ಅವರ ಪರವಾಗಿ ಹೋರಾಡುತ್ತೇನೆ.
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೋರಾಟವಿರುವುದು ಬಿಟ್ಟರೆ ಜೆಡಿಎಸ್ ಲೆಕ್ಕಕ್ಕಿಲ್ಲ. ಕಾಂಗ್ರೆಸ್ ಮಾಡಿರುವಂತಹ ಸಾಧನೆ ಬಹಳ ದೊಡ್ಡದು. ಸಿದ್ದರಾಮಯ್ಯ ಅವರ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ನೂರಾರು ಭಾಗ್ಯಗಳನ್ನು ನೀಡಿ ನಾವು ಚುನಾವಣೆ ಎದುರಿಸುತ್ತೇವೆ. ಬಿಜೆಪಿಯವರು ಮೋದಿ, ಅಮಿತ್ ಶಾ ಕರೆಸಿ ಪ್ರಚಾರ ಮಾಡಿಸುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಅವರ ಸಾಧನೆ ಶೂನ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್.ಆರ್. ಶ್ರೀನಿವಾಸ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರೆಹಮಾತ್, ಪಟ್ಟಣ ಪಂಚಾಯಿತಿ ಸದಸ್ಯ ಮಹಮದ್ ಸಾಧಿಕ್, ಕೊಪ್ಪ ದೇವರಾಜು, ಸಿ.ಕೆ.ಗೌಡ ಸೇರಿದಂತೆ ಈ ಭಾಗದ ಎಲ್ಲಾ ಮುಸ್ಲಿಂ ಮುಖಂಡರು, ಸಾವಿರಾರು ಕಾರ್ಯಕರ್ತರು ಹಾಜರಿದ್ದರು.
ಕಾಂಗ್ರೆಸ್ ಗೆದ್ದರೆ ಪಿಎಫ್ ಐ ಸಕ್ರೀಯ
ಕಾಪು/ಕುಂದಾಪುರ(ಏ.30): ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಕರ್ನಾಟಕವನ್ನು ಸುರಕ್ಷಿತವಾಗಿಟ್ಟಿದೆ. ನಮಗೆ ನೀಡುವ ಒಂದು ಮತದಿಂದ ಬಿಜೆಪಿ ರಾಜ್ಯದಲ್ಲಿ ಮಾತ್ರವಲ್ಲದೆ, 2024ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲೂ ಬಿಜೆಪಿ ಗೆದ್ದು ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಿಎಫ್‌ಐ ರಾಜ್ಯದಲ್ಲಿ ಮತ್ತೆ ಸಕ್ರಿಯವಾಗುತ್ತದೆ. ಡಬಲ್ ಎಂಜಿನ್ ಸರ್ಕಾರ ಬೇಕೋ, ಬೇಡ್ವೋ ಎಂದು ನೀವೇ ನಿರ್ಧರಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಉಡುಪಿ ಜಿಲ್ಲೆಯ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಶನಿವಾರ ಬೃಹತ್ ಚುನಾವಣಾ ರಾರಯಲಿ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಅಮಿತ್ ಶಾ ಬಿರುಸಿನ ಪ್ರಚಾರ: ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು
ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಬರಬೇಕು ಎಂದಾದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ರಚನೆಯಾಗಬೇಕು. ಕರಾವಳಿ ಜಿಲ್ಲೆಗಳು ಸುರಕ್ಷತವಾಗಿರಬೇಕಾದರೆ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು. ಕಾಂಗ್ರೆಸ್‌ಗೆ ನೀಡುವ ಮತ ರಾಜ್ಯದಲ್ಲಿ ರಿವರ್ಸ್ ಗೇರ್ ಸರ್ಕಾರ ಅಧಿಕಾರಕ್ಕೆ ತರುತ್ತದೆ. ಆ ಸರ್ಕಾರ ಕರ್ನಾಟಕಕ್ಕೆ ಸುರಕ್ಷತೆ ನೀಡುವುದಿಲ್ಲ, ಅನುದಾನ ನೀಡುವುದಿಲ್ಲ, ಅಭಿವೃದ್ಧಿ ನೀಡುವುದಿಲ್ಲ ಎಂದರು.
ಯಾವ ಗ್ಯಾರಂಟಿ ಬೇಕು?:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತುಷ್ಟೀಕರಣ ಗ್ಯಾರಂಟಿ, ವಂಶವಾದ ಗ್ಯಾರಂಟಿ, ಪಿಎಫ್‌ಐ ನಿಷೇಧ ರದ್ದು ಗ್ಯಾರಂಟಿ, ಸಮಾಜದಲ್ಲಿ ಅಸುರಕ್ಷತೆ ಗ್ಯಾರಂಟಿ ಎಂದು ಲೇವಡಿ ಮಾಡಿದ ಶಾ, ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ಅಭಿವೃದ್ಧಿ, ಶಾಂತಿ, ಸಮೃದ್ಧಿ, ಸುರಕ್ಷತೆಯ ಗ್ಯಾರಂಟಿ ಸಿಗುತ್ತದೆ. ನಿಮಗೆ(ಮತದಾರರಿಗೆ) ಯಾವ ಗ್ಯಾರಂಟಿ ಬೇಕು ಎಂದವರು ಇದೇ ವೇಳೆ ಮತದಾರರನ್ನು ಪ್ರಶ್ನಿಸಿದರು.