ಕೆ.ಆರ್‌.ಪೇಟೆ (ಫೆ.13):  ಬಿಜೆಪಿ ಪಕ್ಷ ಹಾಗೂ ವಿಶ್ವಕರ್ಮ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ವಿಧಾನ ಪರಿಷತ್‌ ಸದಸ್ಯ ಕೆ.ಪಿ. ನಂಜುಂಡಿ ಅವರಿಗೆ ಕೂಡಲೇ ಮಂತ್ರಿ ಸ್ಥಾನ ನೀಡಬೇಕೆಂದು ತಾಲೂಕು ವಿಶ್ವಕರ್ಮ ಕರಕುಶಲ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಪ್ರೆಸ್‌ ಕುಮಾರಸ್ವಾಮಿ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ವಿಶ್ವಕರ್ಮದ ಸಮುದಾಯದ ಅಭಿವೃದ್ಧಿಗಾಗಿ 12 ಲಕ್ಷ ರು. ಅನುದಾನವನ್ನು ತಮ್ಮ ಸಹಾಯಧನ ನೀಡಿದ್ದಾರೆ. ಅಕ್ಕಿಹೆಬ್ಬಾಳು ದೇವಾಲಯ ಮತ್ತು ಸಮುದಾಯ ಭವನದ ಅಭಿವೃದ್ಧಿಗಾಗಿ 2 ಲಕ್ಷ ರು., ಸಂಗಾಪುರದ ಆಂಜನೇಯ ದೇವಾಲಯದ ಅಭಿವೃದ್ಧಿಗೆ 2 ಲಕ್ಷ ರು., ಹೊಸಹೊಳಲು ಕಾಳಿಕಾಂಬ ದೇವಾಲಯಕ್ಕೆ 2 ಲಕ್ಷ ರು., ಕಿಕ್ಕೇರಿ ಸಮುದಾಯ ಭವನಕ್ಕೆ 3 ಲಕ್ಷ ಹಾಗೂ ಸಂತೆಬಾಚಹಳ್ಳಿ ಸಮುದಾಯಭವನದ ಅಭಿವೃದ್ಧಿಗೆ 3 ಲಕ್ಷ ರು. ಸೇರಿದಂತೆ ಒಟ್ಟು 12 ಲಕ್ಷ ರು. ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.

ನೋಟಿಸ್‌ಗೆ ಡೋಂಟ್ ಕೇರ್: ಮತ್ತೆ ಬಿಎಸ್‌ವೈ ವಿರುದ್ಧ ತಿರುಗಿಬಿದ್ದ ಯತ್ನಾಳ್ ...

ಸಿಎಂ ಯಡಿಯೂರಪ್ಪನವರು ವಿಶ್ವಕರ್ಮ ಸಮುದಾಯಕ್ಕೆ ಮುಂದಿನ ಬಜೆಟ್‌ನಲ್ಲಿ 100 ಕೋಟಿ ರು.ಗಳನ್ನು ಸಮುದಾಯದ ಜನರ ಯೋಗಕ್ಷೇಮಕ್ಕಾಗಿ ನೀಡಬೇಕು. ಕಳೆದ ಬಜೆಚ್‌ನಲ್ಲಿ ಸಿಎಂ ಸಮುದಾಯದ ಅಭಿವೃದ್ಧಿಗಾಗಿ ಅಮರಶಿಲ್ಪಿ ಜಕಣಾಚಾರಿ ಜಯಂತೋತ್ಸವದಲ್ಲಿ  50 ಕೋಟಿ ರು. ಮಂಜೂರು ಮಾಡಿರುವುದಾಗಿ ಆಶ್ವಾಸನೆ ನೀಡಿದರು. ಈಗ 10 ಕೋಟಿ ರು. ಮಂಜೂರು ಮಾಡಿದೆ. ಉಳಿದ 40 ಕೋಟಿ ಬಿಡುಗಡೆಗೆ ಒತ್ತಾಯಿಸಿದರು.

ವಿಶ್ವಕರ್ಮ ಸಮುದಾಯದ ಜಿಲ್ಲಾಧ್ಯಕ್ಷ ತೈಲೂರು ಆನಂದಾಚಾರ್‌, ತಾಲೂಕು ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರಾದ ಗುಡ್ಡೇನಹಳ್ಳಿ ಸುರೇಶ್‌, ತಾಲೂಕು ಯುವ ಘಟಕದ ಅಧ್ಯಕ್ಷ ಮೋಹನ್‌ ಕುಮಾರ್‌, ಮಂಡ್ಯ ತಾಲೂಕು ಅಧ್ಯಕ್ಷ ರಘುಆಚಾರ್‌, ತಾಲೂಕು ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚಂದನ್‌ ಸಂಗಾಪುರ, ಉಪಾದ್ಯಕ್ಷ ವಿಜಯ್ ಕುಮಾರ್‌, ಉಮೇಶ್‌ ಬಿಂಡಳ್ಳಿ, ಕಬ್ಬಲಗರೆಪುರ ರವಿ, ರಂಗಸ್ವಾಮಿ, ರಮೇಶ, ಪಾಪಚಾರ್‌, ಕುಮಾರ್‌, ಶಿವಲಿಂಗಾಚಾರಿ, ಯೋಗಾಚಾರ್‌, ಚಂದ್ರಾಚಾರಿ ಇದ್ದರು.