ಬೆಂಗಳೂರು, (ಫೆ.12): ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಕೊಟ್ಟ ಶೋಕಾಸ್ ನೋಟಿಸ್ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಡೋಂಟ್ ಕೇರ್ ಎಂದಿದ್ದಾರೆ. 

ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ಮಾಳ್ ಅವರಿಗೆ ನೋಟಿಸ್ ನೀಡಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟಿಳ್ ಯತ್ನಾಳ್ ನನಗಿನ್ನೂ ಯಾವ ನೋಟೀಸ್ ಕೂಡ ಬಂದಿಲ್ಲ ಎಂದಿದ್ದಾರೆ.

ನನಗೆ ಅಧಿಕೃತ ಕಾಪಿ ಬಂದ ಮೇಲೆ ಅದರಲ್ಲಿ ಏನು ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತೆ. ನಾನು ಯಾವುದಕ್ಕೂ ಅಂಜುವುದಿಲ್ಲ, ನಾನು‌ ಸತ್ಯದ ಪರವಾಗಿ ಇರುವವನು. ಇದರಿಂದ ನನಗೆ ಶಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್

ಒಂಟಿ ಸಲಗ ಅಂದ್ರೆ ಇದೆ ಅಲ್ವೇ ಒಬ್ಬನೇ ನಡೆ ಮುಂದೆ ಜಗತ್ತು ನಿನ್ನತ್ತ ತಿರುಗುತ್ತೆ ಅಂತ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ನಾನು ಅವರ ಶಿಷ್ಯನಲ್ಲವೇ.. ಅದೇ ರೀತಿ ಒಂಟಿಯಾಗಿ ನಡೆದಿದ್ದೇನೆ. ನನಗೆ ಭಗವಂತನೇ ಇದ್ದಾನೆ. ನಾ ದೈನಂ ನಾ ಪಲಾಯನಂ ಎಂದರು.

'ನಾನು ಯಾವತ್ತೂ ಹೆದರಿದವನಲ್ಲ'
ನನಗೆ ನೊಟೀಸ್ ಕೊಡೋಕೆ ಡಿಮ್ಯಾಂಡ್ ಇತ್ತು. ನನ್ನ ಮಾತಿಗೆ ಅಷ್ಟು ಡಿಮ್ಯಾಂಡ್ ಇದೆ ನೋಡಿ. ನಾನು ಎಲ್ಲವನ್ನೂ ಎದುರಿಸುತ್ತೇನೆ. ನನ್ನನ್ನ ಮೂರು ಬಾರಿ ಉಚ್ಛಾಟನೆ ಮಾಡಿದ್ದಾರೆ. ನಾನು ಯಾವತ್ತೂ ಹೆದರಿದವನಲ್ಲ. ಪಕ್ಷೇತರನಾಗಿ ನಾನು ಪರಿಷತ್​ಗೆ ಬಂದಿದ್ದೆ. ನನ್ನನ್ನ ಅಮಿತ್ ಶಾ ಅವರೇ ಕರೆದು ಅವಕಾಶ ಕೊಟ್ರು. ಅವರ ಸೂಚನೆ ಮೇರೆಗೆ ನಾನು ಬಿಜೆಪಿಗೆ ಸೇರಿದ್ದು. ಯತ್ನಾಳ್ ಪಕ್ಷಕ್ಕೆ ಲಾಭ ಅಂತಾನೇ ತೆಗೆದುಕೊಂಡಿದ್ದು ಎಂದು ಪರೋಕ್ಷವಾಗಿ ಮತ್ತೆ ಸಿಎಂ ಬಿಎಸ್‌ವೈಗೆ ಟಾಂಗ್ ಕೊಟ್ಟರು.

ಸಿಎಂಗೆ ಟಾಂಗ್
ಕುಟುಂಬ ರಾಜಕಾರಣ ಹೊರತಾಗಿ ಮಾತನಾಡಿದ್ದೇನೆ. ಪಕ್ಷದ ಸೈದ್ಧಾಂತಿಕತೆ ಪರ ಮಾತನಾಡಿದ್ದೇನೆ. ಪ್ರಧಾನಿ ಕುಟುಂಬದಲ್ಲೇ ಕಾರ್ಪೋರೇಶನ್​ಗೆ ಸೀಟು ಕೊಟ್ಟಿಲ್ಲ. ವಡೋದರದಲ್ಲಿ ಟಿಕೆಟ್ ಕೊಟ್ಟಿಲ್ಲ. ಒಂದು ಕುಟುಂಬದಲ್ಲಿ ಒಬ್ಬರೇ ರಾಜಕಾರಣದಲ್ಲಿ ಇರಬೇಕು. ಕಾರ್ಯಕರ್ತರೇನು ಅಮಾಲಿ‌ ಕೆಲಸ ಮಾಡೋಕಾ ಇರೋದು..? ಮನೆಮಕ್ಕಳಿಗೆಲ್ಲ ಯಾಕೆ ಟಿಕೆಟ್ ಕೊಡಬೇಕು ಎಂದು ಸಿಎಂ ಬಿಎಸ್ ವೈ ವಿರುದ್ಧ ಯತ್ನಾಳ್ ತಿರುಗಿಬಿದ್ದರು.