ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿಡಲು ಮನವಿ ವಿನೋಬನಗರ ಸ್ನೇಹ ಜೀವಿ ಗೆಳೆಯರ ಬಳಗದಿಂದ ಡಿಸಿ ಕಚೇರಿಯಲ್ಲಿ ಮನವಿ 

ಶಿವಮೊಗ್ಗ (ಜು.12): ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿಡಲು ವಿನೋಬನಗರ ಸ್ನೇಹ ಜೀವಿ ಗೆಳೆಯರ ಬಳಗ ಡಿಸಿ ಕಚೇರಿಯಲ್ಲಿ ಮನವಿ ಮಾಡಿದೆ. 

ಡಿಸಿ ಮೂಲಕ ಸಿಎಂ ಯಡಿಯೂರಪ್ಪ ಅವರಿಗಿಂದು ಮನವಿ ಮಾಡಿದ್ದು, ದೈವ ಸಂಕಲ್ಪ ಹೊತ್ತು ಲಕ್ಷಾಂತರ ಮಕ್ಕಳಿಗೆ ವಿದ್ಯೆ , ಅನ್ನದಾನ ಮಾಡುತ್ತ ನಡೆದಾಡುವ ದೇವರಾಗಿ ಕೊಟ್ಯಂತರ ಭಕ್ತ ಸಮೂಹವನ್ನೊಳಗೊಂಡಿದ್ದಾರೆ. ತಮ್ಮದೇ ಸಿದ್ಧಾಂತದಲ್ಲಿ ಸಿದ್ದಗಂಗಾ ಮಠವನ್ನು ನಡೆಸಿದ ಶಿವಕುಮಾರ ಸ್ವಾಮಿಗಳ ಹೆಸರನ್ನು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಇಡಬೇಕೆಂದರು.

ಕಮಲ ರೀತಿ ಶಿವಮೊಗ್ಗ ಏರ್‌ಪೋರ್ಟ್‌ ನಿರ್ಮಾಣ: ಕೈ ಕಿಡಿ!

 ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ದಗಂಗಾ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದೀಗ ಇಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು ಅಂತಿಮಗೊಳಿಸಲು ಎಂದು ಮನವಿಯಲ್ಲಿ ತಿಳಿಸಿದರು. 

ಶಿವಕುಮಾರ ಸ್ವಾಮೀಜಿ ಭಕ್ತರಾಗಿ ಇಂದಿಗೂ ಕೂಡ ಅಪಾರ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.