Asianet Suvarna News Asianet Suvarna News

ಮಂಗಳಮುಖಿಯರಿಗೆ ಪಾದಪೂಜೆ ಸಲ್ಲಿಸಿ ವಿನಯ್‌ ಗುರೂಜಿ ದೀಪಾವಳಿ

*  ದೀಪಾವಳಿ ಹಬ್ಬವನ್ನು ವಿನೂತನವಾಗಿ ಆಚರಿಸಿದ ವಿನಯ್‌ ಗುರೂಜಿ
*  ಮಂಗಳಮುಖಿಯರಿಗೆ ಪಾದಪೂಜೆ ಸಲ್ಲಿಸಿದ ಅವಧೂತರಾದ ವಿನಯ್‌ ಗುರೂಜಿ
*  ಪೌರ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿದ್ದ ವಿನಯ್ ಗುರೂಜಿ
 

Vinay Guruji Celebrate Deepavli After Pedicure to Transgenders at Koppa grg
Author
Bengaluru, First Published Nov 5, 2021, 7:52 AM IST
  • Facebook
  • Twitter
  • Whatsapp

ಕೊಪ್ಪ(ನ.05):  ಇಲ್ಲಿನ ಗೌರಿಗದ್ದೆಯಲ್ಲಿರುವ ಸ್ವರ್ಣಪೀಠಿಕಪುರ ಆಶ್ರಮದಲ್ಲಿ ಗುರುವಾರ ದೀಪಾವಳಿ(Deepavali) ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು. ಆಶ್ರಮದ ಅವಧೂತರಾದ ವಿನಯ್‌ ಗುರೂಜಿ(Vinay Guruji) ಅವರು ಮಂಗಳಮುಖಿಯರಿಗೆ(Transgenders) ಪಾದಪೂಜೆ(Pedicure) ಸಲ್ಲಿಸಿದರು. ಬಳಿಕ ಗುರೂಜಿ ಅವರು ಸುಮಾರು 150ಕ್ಕೂ ಹೆಚ್ಚು ಮಂದಿ ಬಡವರಿಗೆ ಆಹಾರ, ತರಕಾರಿಗಳ ಕಿಟ್‌ ವಿತರಿಸಿದರು.

ಇತ್ತೀಚೆಗೆ ನಡೆದ ನವರಾತ್ರಿ ಸಂದರ್ಭದಲ್ಲಿ ಆಶ್ರಮದಿಂದ ಚಿಕ್ಕಮಗಳೂರು(Chikmagalur) ಜಿಲ್ಲೆಯ ಕೊಪ್ಪ(Koppa) ತಾಲೂಕಿನ ಹಲವು ದೇವಾಲಯಗಳಿಗೆ(Temples) ಹಾಗೂ ಮಾತೆಯರಿಗೆ ಸುಮಾರು 20 ಸಾವಿರಕ್ಕೂ ಹೆಚ್ಚು ಸೀರೆ ವಿತರಿಸಲಾಗಿತ್ತು. ಹೀಗೆ ಆಶ್ರಮದಿಂದ(Ashram) ಪ್ರತಿ ಹಬ್ಬದಲ್ಲೂ ವಿಶೇಷ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಆಶ್ರಮದ ಭಕ್ತರು(Devotees) ತಿಳಿಸಿದ್ದಾರೆ. ಇದೀಗ ಪ್ರಥಮ ಬಾರಿಗೆ ಮಂಗಳಮುಖಿಯರಿಗೆ ಪಾದಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ಸಿಬ್ಬಂದಿ, ಆಪ್ತರು ಭಾಗಿಯಾಗಿದ್ದರು.

ನಟ ಅರ್ಜುನ್ ಸರ್ಜಾ ಆಂಜನೇಯಸ್ವಾಮಿ ‌ದೇವಸ್ಥಾನದಲ್ಲಿ ವಿನಯ್ ಗುರೂಜಿ!

ಪೌರ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿದ್ದ ವಿನಯ್ ಗುರೂಜಿ

ದತ್ತ ಪೀಠದ (Datta Peetha) ಬಗ್ಗೆ ನ್ಯಾಯಾಲಯದ ತೀರ್ಪು, ಅದಕ್ಕಾಗಿ ಹೋರಾಡಿದ ಹಿಂದೂ (Hindu) ಕಾರ್ಯಕರ್ತರ ರಕ್ತ ತರ್ಪಣದ ಫಲ. ಇಂತಹ ಹೋರಾಟಗಳಲ್ಲಿ ಬಲಿಯಾಗುವ ಕಾರ್ಯಕರ್ತರಿಗೆ ಸರ್ಕಾರ ವಿಮಾ ಯೋಜನೆ (Insurance policy) ಜಾರಿಗೊಳಿಸಿ, ಅವರ ಬಡ ಕುಟುಂಬಗಳಿಗೆ ಅದರ ಪರಿಹಾರದ ಮೊತ್ತ ಸಿಗುವಂತೆ ಮಾಡಬೇಕು ಎಂದು ಕೊಪ್ಪದ ಗೌರಿಗದ್ದೆಯ ಶ್ರೀ ವಿನಯ ಗುರೂಜಿ (Vinay guruji) ಸರ್ಕಾರವನ್ನು ಒತ್ತಾಯಿಸಿದ್ದರು.
ಪೆರ್ಣಂಕಿಲದ ಪಡುಬೆಟ್ಟುನಲ್ಲಿ ಸಾಮಾಜಿಕ ರಾಜಕೀಯ (Politics) ಮುಂದಾಳು ಶಂಕರ ನಾಯಕ್‌ ಹೆಸರಿನಲ್ಲಿ ಅವರ ಕುಟುಂಬಸ್ಥರು ಆರಂಭಿಸಿದ ಪೆರ್ಣಂಕಿಲ ಶಂಕರ ಪ್ರತಿಷ್ಠಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ ಧರ್ಮ ಹಾಳಾಗುವುದಕ್ಕೆ ಕಾರಣವೇ ಹಿಂದೂಗಳ ನಡುವೆ ಇರುವ ತಾರತಮ್ಯ. ದೇಶ ಕಟ್ಟಬೇಕಾದರೇ ಮೊದಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ತಿಳಿಸಿದ್ದರು.  ಇದೇ ಸಂದರ್ಭದಲ್ಲಿ ಗುರೂಜಿ ಅವರು ಕಾಪು ಪುರಸಭೆಯ ಪೌರಕಾರ್ಮಿಕರನ್ನು (Municpolity Workers), ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದರು. 

ಗವಿಮಠ ಶ್ರೀಗಳ ಪಾದುಕೆ ತಲೆ ಮೇಲಿಟ್ಟುಕೊಂಡು ಅಚ್ಚರಿ ಮೂಡಿಸಿದ್ದ ವಿನಯ ಗುರೂಜಿ

ಅವಧೂತ ವಿನಯ ಗುರೂಜಿ ಗವಿಮಠಕ್ಕೆ ಭೇಟಿ ನೀಡಿದ್ದ ವೇಳೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪಾದುಕೆಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಅಚ್ಚರಿ ಮೂಡಿಸಿದ್ದ ಘಟನೆ ಕೊಪ್ಪಳದಲ್ಲಿ ನಡೆದಿತ್ತು. ಕರ್ತೃ ಗದ್ದುಗೆಗೆ ಬಿಲ್ವಾರ್ಚನೆಯ ಪೂಜೆ ನೆರವೇರಿಸಿ, ಸುಮಾರು ಹೊತ್ತು ಕರ್ತೃ ಗದ್ದುಗೆಯ ಪಕ್ಕದಲ್ಲಿಯೇ ಕುಳಿತು ಧ್ಯಾನ ಮಾಡಿದ್ದ ಗುರೂಜಿ. 

ಅನಿಲ್, ಉದಯ್ ಸಾವಿಗೂ ಮುನ್ನ ಸ್ಥಳಕ್ಕೆ ತೆರಳಿದ ವಿನಯ್ ಗುರೂಜಿ ಹೀಗಂದಿದ್ದರು!

ಬಳಿಕ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಭಕ್ತರಿಗೆ ದರ್ಶನ ನೀಡುತ್ತಿದ್ದ ಸ್ಥಳಕ್ಕೆ ಹೋಗಿ, ಅಲ್ಲಿ ಏಕಾಏಕಿ ಗವಿಮಠ ಶ್ರೀಗಳ ಪಾದುಕೆಗಳನ್ನು ತಲೆಯ ಮೇಲಿಟ್ಟುಕೊಂಡು, ಕೆಲಹೊತ್ತು ಧ್ಯಾನ ಮಾಡಿದರು. ಗವಿಮಠ ಶ್ರೀಗಳು ಬೇಡವೆನ್ನುತ್ತಿರುವಾಗಲೇ ಅವರು ಪಾದುಕೆಗಳನ್ನು ತೆಗೆದುಕೊಂಡು ತಲೆಯ ಮೇಲೆ ಇಟ್ಟುಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. 

'ನಿಖಿಲ್‌ಗೆ‌ ಶಾಸಕ ಯೋಗ, ಗಂಡು ಮಗು ಭಾಗ್ಯ, ಜೆಡಿಎಸ್‌ಗೆ ಅಧಿಕಾರ ಪಕ್ಕಾ ಎಂದಿದ್ದ ಗುರೂಜಿ 

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ವಿನಯ್ ಗುರೂಜಿಯವರನ್ನು ಭೇಟಿ ಮಾಡಿ, ಕೆಲ ಕಾಲ ಚರ್ಚೆ ನಡೆಸಿದ್ದರು. ಈ ವೇಳೆ ವಿನಯ್ ಗುರೂಜಿ, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ ಎಂದು ಆಶೀರ್ವಚನ ನೀಡಿದ್ದರು. ಎಚ್‌ಡಿಕೆ ಅವರ ಪುತ್ರ ನಿಖಿಲ್‌ಗೌಡ ಅವರಿಗೆ‌ ಶಾಸಕನಾಗುವ ಯೋಗವಿದ್ದು ಗಂಡು ಮಗು ಭಾಗ್ಯ ಎಂದು ಭವಿಷ್ಯ ನುಡಿದಿದ್ದರು. ಗುರರೂಜಿ ಹೇಳಿದ ಹಾಗೆಯೇ ನಿಖಿಲ್‌ಗೆ ಗಂಡು ಮಗು ಜನಿಸಿದೆ.
 

Follow Us:
Download App:
  • android
  • ios