ಕೋಲಾರ(ಮೇ 14): ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ಐದು ಕೊರೊನಾ ಪಾಸಿಟಿವ್‌ ಕೇಸ್‌ ಬಂದಿರುವ ಹಿನ್ನೆಲೆಯಲ್ಲಿ ಗಡಿಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಬಿಗಿ ಗೊಳಿಸಲಾಗಿದೆ.ಗಡಿಗೆ ಹೊಂದಿಕೊಂಡಿರುವ ಎಲ್ಲ ಸಂಪರ್ಕ ರಸ್ತೆಗಳನ್ನು ಬಂದ್‌ ಮಾಡಿ ಪೋಲಿಸರ ಬಿಗಿ ಕಾವಲು ಹಾಕಲಾಗಿದೆ.

ಪಾಸಿಟಿವ್‌ ಕೇಸು ಬಂದಿರುವ ಗ್ರಾಮಗಳು ಮತ್ತು ಸುತ್ತಮುತ್ತಲ ಗ್ರಾಮದವರು ಆತಂಕಕ್ಕೆ ಒಳಗಾದ ಗ್ರಾಮಸ್ಥರಿಂದ ಗ್ರಾಮಗಳಿಗೆ ಸ್ವಯಂ ನಿಬಂರ್‍ಧ ಹಾಕಿಕೊಂಡಿದ್ದಾರೆ.

ಇಬ್ಬರು ಸೋಂಕಿತರು ಸೃಷ್ಟಿಸಿದ ಆತಂಕ

ಈ ಮಧ್ಯೆ ಮುಳಬಾಗಿಲು ತಾಲೂಕು ತಾಯಲೂರು ಹೋಬಳಿ ಬೆಳಗಾನಹಳ್ಳಿಯಲ್ಲಿ ಇಬ್ಬರಿಗೆ ಸೋಂಕು ಬಂದಿರುವ 909 ಮತ್ತು 910 ಸೋಂಕಿತರು ಗ್ರಾಮದಿಂದ 18 ಕಿ.ಮೀ.ದೂರದಲ್ಲಿರುವ ತಾತಿಕಲ್ಲು ಗ್ರಾಮಕ್ಕೆ ಹೋಗಿದ್ದು ಅಲ್ಲಿಯೂ ಆತಂಕ ಸೃಷ್ಟಿಸಿದೆ. ಸೋಂಕಿತರನ್ನು ಹೋಂ ಕ್ವಾರೆಂಟೈನ್‌ನಲ್ಲಿ ಇಡಲಾಗಿತ್ತು, ಆದರೆ ಅವರು ಹೋಂ ಕ್ವಾರೆಂಟೈನ್‌ನಲ್ಲಿ ಇರಲು ಇಷ್ಟಪಡದೆ ಅದನ್ನು ಉಲ್ಲಂಘಿಸಿ ಸೋಂಕಿತರ ತಾಯಿಯ ಹುಟ್ಟೂರು ತಾತಿಕಲ್ಲು ಗ್ರಾಮಕ್ಕೆ ತೆರಳಿದ್ದರು.

ಕೋಲಾರ: ಅನ್ಯರಾಜ್ಯದ ವಾಹನಗಳಿಗೆ ಗಡಿ ಬಂದ್..!

ಸೋಂಕಿತರಿಗೆ ಕೊರೊನಾ ಪಾಸಿಟಿವ್‌ ವರದಿ ಬಂದಿದೆ ಎಂದು ತಿಳಿದು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಹೋದಾಗ ಇಬ್ಬರೂ ಸೋಂಕಿತರೂ ಗ್ರಾಮದ ಹುಡುಗರ ಜತೆ ಕ್ರಿಕೆಟ್‌ ಆಟವಾಡುತ್ತಿದ್ದರು ಎಂದು ಮೂಲಗಳು ಹೇಳಿವೆ.

ಆರೋಗ್ಯಾಧಿಕಾರಿಗಳಿಗೆ ತರಾಟೆ

ಈ ಹಿನ್ನೆಲೆಯಲ್ಲಿ ಇಂದು ತಾತಿಕಲ್ಲು ಗ್ರಾಮಕ್ಕೆ ತೆರಳಿ ಅಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರೆಂಟೈನ್‌ನಲ್ಲಿ ಇಡಲು ಮುಂದಾದಾಗ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ನಿಮ್ಮ ಬೇಜವಾಬ್ದಾರಿತನದಿಂದ ತಾತಿಕಲ್ಲು ಗ್ರಾಮಕ್ಕೂ ಕೊರೊನಾ ಸೋಂಕು ಬರುವ ಆತಂಕ ಉಂಟಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಲ್ಲುಗಳನ್ನು ಹಾಕಿ ರಸ್ತೆ ಬಂದ್‌

ಈ ನಡುವೆ ಪಾಸಿಟಿವ್‌ ಕೇಸುಗಳು ಬಂದಿರುವ ಗ್ರಾಮಗಳಲ್ಲದೆ ಸುತ್ತಮುತ್ತ ಗ್ರಾಮಗಳವರೂ ತಮ್ಮ ಗ್ರಾಮಕ್ಕೆ ಹೊರಗಿನವರಿಗೆ ಪ್ರವೇಶ ನೀಡದಂತೆ ದಿಗ್ಬಂಧನ ಹಾಕಿಕೊಂಡಿದ್ದಾರೆ. ಗ್ರಾಮದ ಮುಖ್ಯ ರಸ್ತೆಗೆ ಕಲ್ಲು ಬಂಡೆಗಳನ್ನು ಹಾಕಿ ಪ್ರವೇಶ ನಿಬಂರ್‍ಧ ಮಾಡಿಕೊಂಡಿದ್ದಾರೆ.ಸುಮಾರು 6 ಕ್ಕೂ ಹೆಚ್ಚು ಗ್ರಾಮಗಳಗೆ ಪ್ರವೇಶ ನಿಬಂರ್‍ಧ ಮಾಡಿರುವ ಗ್ರಾಮಸ್ಥರು.

ಸೋಂಕು ಹೆಚ್ಚುವ ಆತಂಕ:

ಆಂಧ್ರಪ್ರದೇಶದ ವಿ.ಕೋಟ, ಪುಂಗನೂರು ಮತ್ತು ತಮಿಳುನಾಡಿನ ಕೊರೊನಾ ಸೋಂಕಿತರು ಜಿಲ್ಲೆಯ ಕೋಲಾರ, ಶ್ರೀನಿವಾಸಪುರ ಹಾಗೂ ಕೆಜಿಎಫ್‌ ಭಾಗಕ್ಕೆ ಬಂದು ಹೋಗಿದ್ದು, ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಸುಮಾರು 90 ಮಂದಿಯನ್ನು ಪತ್ತೆ ಹಚ್ಚಿ ಮೇ 9ರಂದು ಕ್ವಾರಂಟೈನ್‌ ಮಾಡಲಾಗಿತ್ತು. ಈ ಮಂದಿಯ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನಿಷೇಧಿತ ಪ್ರದೇಶ ಘೋಷಣೆ

ಕೋಲಾರ: ಕೊರೊನಾ ಸೋಂಕು ಪತ್ತೆಯಾಗಿರುವ ಜಿಲ್ಲೆಯ ಮುಳಬಾಗಿಲು ತಾಲೂಕಿನ 3 ಗ್ರಾಮಗಳು ಹಾಗೂ ನಗರಸಭೆಯ ಒಂದು ವಾರ್ಡನ್ನು ಜಿಲ್ಲಾಡಳಿತವು ನಿಷೇಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌ ಝೋನ್‌) ಘೋಷಿಸಿದೆ.

ವಂದೇ ಭಾರತ್ ಮಿಷನ್ ವಿಮಾನ ಅರಬ್ಬೀ ಸಮುದ್ರದ ಮೇಲೆ ಹಾರುವಾಗ ಭಾವುಕರಾದ ಪೈಲಟ್..!

ಮುಳಬಾಗಿಲು ತಾಲ್ಲೂಕಿನ ವಿ.ಹೊಸಹಳ್ಳಿ, ಬೈರಸಂದ್ರ ಹಾಗೂ ಬೆಳಗಾನಹಳ್ಳಿಯನ್ನು ಸಂಪೂರ್ಣವಾಗಿ ನಿಬಂರ್‍ಧಿತ ಪ್ರದೇಶಗಳೆಂದು ಆದೇಶಿಸಲಾಗಿದೆ. ಅದೇ ರೀತಿ ಮುಳಬಾಗಿಲು ನಗರಸಭೆಯ ಬೂಸಾಲಕುಂಟೆ ಬಡಾವಣೆ (9ನೇ ವಾರ್ಡ್‌) ಸುತ್ತಲಿನ 100 ಮೀಟರ್‌ ವ್ಯಾಪ್ತಿಯನ್ನು ಕಂಟೈನ್‌ಮೆಂಟ್‌ ಪ್ರದೇಶವಾಗಿ ಮಾಡಲಾಗಿದೆ. ಈ 3 ಹಳ್ಳಿಗಳ ಹಾಗೂ ಬೂಸಾಲಕುಂಟೆ ಬಡಾವಣೆಯಲ್ಲಿನ ಸ್ಥಳೀಯರು ಮನೆಯಿಂದ ಹೊರ ಬಾರದಂತೆ ಮತ್ತು ಹೊರಗಿನ ವ್ಯಕ್ತಿಗಳು ಇಲ್ಲಿಗೆ ಬಾರದಂತೆ ನಿಬಂರ್‍ಧ ವಿಧಿಸಲಾಗಿದೆ. ಇಲ್ಲಿನ ಜನರಿಗೆ ಮನೆಗಳಿಂದ ಹೊರ ಬಾರದಂತೆ ಸೂಚನೆ ನೀಡಲಾಗಿದೆ.

ಅಗತ್ಯ ವಸ್ತುಗಳ ತಲುಪಿಸಲು ವ್ಯವಸ್ಥೆ

ತರಕಾರಿ, ಹಾಲು, ಆಹಾರ ಪದಾರ್ಥಗಳು ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಯ ಮೇಲ್ವಿಚಾರಣೆಗಾಗಿ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಿದೆ. ಹಳ್ಳಿಗಳಲ್ಲಿ ಗ್ರಾ.ಪಂ ಪಿಡಿಒ, ಕಾರ್ಯದರ್ಶಿ, ಕರ ಸಂಗ್ರಹಗಾರರನ್ನು ಒಳಗೊಂಡಂತೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಆಯುಕ್ತರು, ಆರೋಗ್ಯ ನಿರೀಕ್ಷಕರು, ಕರ ಸಂಗ್ರಹಗಾರರನ್ನು ಒಳಗೊಂಡಂತೆ ವಿಶೇಷ ತಂಡ ರಚಿಸಲಾಗಿದೆ.