Asianet Suvarna News Asianet Suvarna News

ಯಾದಗಿರಿ:  ಟಿಕ್‌ ಟಾಕ್‌ನಲ್ಲಿ  ಲವ್ವಿ ಡವ್ವಿ ಗೊತ್ತಾಯ್ತು, ಧರ್ಮದೇಟು ಭರಪೂರ ಬಿತ್ತು

ಟಿಕ್ ಟಾಕ್ ನಲ್ಲಿ ವೈರಲ್ ಆದ ವಿಡಿಯೋ ತಂದ ಪಜೀತಿ/ ಊರ ಹುಡಹುಗಿ ಜತೆ ಲವ್ ಡವ್/ ಗ್ರಾಮಸ್ಥರಿಂದ ಭರಪೂರ ಧರ್ಮದೇಟು

Villagers thrashed mercilessly for Making tiktok video with girl Yadagir
Author
Bengaluru, First Published Aug 21, 2019, 5:30 PM IST
  • Facebook
  • Twitter
  • Whatsapp

ಯಾದಗಿರಿ(ಆ. 21)  ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಪ್ರಾಪ್ತನಿಗೆ ಧರ್ಮದೇಟು ಬಿದ್ದಿದೆ. ಧರ್ಮದೇಟು ಬಿದ್ದಿರುವುದು ಅದೆ ಗ್ರಾಮದವರಿಂದ!

ಯಾದಗಿರಿ ತಾಲೂಕಿನ ಹಳಿಗೇರ ಗ್ರಾಮದ ಅಪ್ರಾಪ್ತ, ಅದೇ ಗ್ರಾಮದ ಅಪ್ರಾಪ್ತೆ ಜೊತೆ ಲವ್ವಿ ಡವ್ವಿ ನಡೆಸಿದ್ದು ಟಿಕ್ ಟಾಕ್ ನಲ್ಲಿ ವಿಡಿಯೋ ಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗಿದ್ದು ಈತನ ಪ್ರೇಮ್ ಕಹಾನಿ ಬಹಿರಂಗವಾಗಿ ಊರಿಗೆಲ್ಲ ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಅಪ್ರಾಪ್ತೆಯ ಕುಟುಂಬಸ್ಥರು ಮಂಗಳವಾರ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.. ಕುಟುಂಬಸ್ಥರು ಮರ್ಯಾದೆಗೆ ಅಂಜಿ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ.  ಯಾದಗಿರಿ ಗ್ರಾಮಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

 

Follow Us:
Download App:
  • android
  • ios