ಚಾಮರಾಜನಗರ(ಜು.07): ಯಳಂದೂರು ತಾಲೂಕಿನ ಪ್ರಸಿದ್ಧ ಗಿರಿಧಾಮವಾಗಿರುವ ಬಿಳಿಗಿರಿರಂಗನ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್‌ಗಳಲ್ಲಿ ಸ್ಥಳೀಯರನ್ನು ಹೊರತುಪಡಿಸಿ ಬೇರೆಯವರನ್ನು ಕರೆತರಬಾರದು ಎಂದು ಸೋಲಿಗರು ಹಾಗೂ ಸ್ಥಳೀಯರು ಸೋಮವಾರ ಬಸ್‌ ತಡೆದು ಪ್ರತಿಭಟನೆ ನಡೆಸಿದರು.

ಜಿಲ್ಲೆ ಹಾಗೂ ತಾಲೂಕಿನಲ್ಲಿ ಎಲ್ಲೆಡೆ ಕರೊನಾ ಭೀತಿ ಇದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ನಲ್ಲಿ ಸಾರ್ವಜನಿಕ ವಾಹನಗಳಿಗೆ ನಿಷೇಧ ಹೇರಲಾಗಿದೆ. ಆದರೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಬೆಂಗಳೂರು ಸೇರಿದಂತೆ ದೂರದೂರಿನಿಂದ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ಅಧಿಕವಾಗಿದೆ.

ಆ.15ರೊಳಗೆ ಲಸಿಕೆ ಅಸಾಧ್ಯ: ಬೆಂಗಳೂರು ವಿಜ್ಞಾನ ಸಂಸ್ಥೆ!

ಖಾಸಗಿ ವಾಹನಳ ನಿಷೇಧದಿಂದ ಹೊರಗಿನವರು ಸಾರಿಗೆ ಬಸ್‌ಗಳಲ್ಲಿ ಬರುತ್ತಿದ್ದಾರೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿಯ ತನಕ ಇಲ್ಲಿಗೆ ಕರೋನಾ ಸೋಂಕು ಬಂದಿಲ್ಲ. ಮುಂದಿನ ದಿನಗಳಲ್ಲೂ ಇದನ್ನು ಹೀಗೆ ಉಳಿಸಿಕೊಂಡು ಹೋಗಬೇಕಾದರೆ ಈಗ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಹಾಗಾಗಿ ಬಸ್‌ಗಳಲ್ಲಿ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಬೇಕು.

ಕೊರೋನಾ ಭಯ: ಪ್ರವಾ​ಸಿ​ಗರ ವಾಹನ ತಡೆದು ವಾಪಸ್‌ ಕಳು​ಹಿ​ಸಿದ ಗ್ರಾಮ​ಸ್ಥ​ರು

ಈ ಹಿಂದೆ ಲಾಕ್‌ಡೌನ್‌ ಆಗಿದ್ದ ವೇಳೆ ಬೆಟ್ಟಕ್ಕೆ ಸಂಪೂರ್ಣ ಬಸ್‌ ನಿಷೇಧ ಮಾಡಲಾಗಿತ್ತು. ಆಗ ಕರೋನಾ ಭೀತಿಯೇ ಇರಲಿಲ್ಲ. ಯಳಂದೂರು ಹಾಗೂ ಚಾಮರಾಜನಗರಗಳಿಗೆ ಇಲ್ಲಿಂದ ಬಸ್‌ಗಳು ಸಂಚರಿಸುತ್ತವೆ. ಪ್ರತಿಯೊಂದು ವ್ಯವಹಾರಕ್ಕೂ ಸ್ಥಳೀಯರು ಇವೆರಡು ಪಟ್ಟಣಗಳಿಗೆ ಸಂಚರಿಸುತ್ತಾರೆ. ಹಾಗಾಗಿ ಸ್ಥಳೀಯರನ್ನು ಮಾತ್ರ ಬಸ್‌ನಲ್ಲಿ ಹತ್ತಿಸಿಕೊಳ್ಳಬೇಕು. ಬೇರೆ ಊರುಗಳವರಿಗೆ ನಿಷೇಧ ಹೇರಬೇಕು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸೋಲಿಗರು, ಮಹಿಳೆಯರೂ ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದರು.