ಅಂಕೋಲಾ(ಮಾ.05): ಪಾರ್ಶ್ವ​ವಾ​ಯುವಿಗೆ ತುತ್ತಾಗಿ ತೀವ್ರ ಅಸ್ವಸ್ಥರಾದ ವ್ಯಕ್ತಿಯೊಬ್ಬರನ್ನು ಖುರ್ಚಿಯನ್ನೇ ಜೋಲಿಯನ್ನಾಗಿ ಮಾಡಿಕೊಂಡು ದುರ್ಗಮ ಅರಣ್ಯ ಪ್ರದೇಶದಿಂದ ಹೊತ್ತು ತಂದು ಆಸ್ಪತ್ರೆಗೆ ಸಾಗಿಸಿದ ದಯನೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಪಂ ವ್ಯಾಪ್ತಿಯ ವರೀಲಬೇಣಾದಲ್ಲಿ ನಡೆದಿದೆ.

ಹೌದು. ಇಲ್ಲಿನ ಜನತೆ ಮೂಲ ಸೌಕರ್ಯದಿಂದ ವಂಚಿತರಾಗಿ ಇನ್ನೂ ರಸ್ತೆ ಭಾಗ್ಯ ಕಾಣದೆ ಪರಿತಪಿಸುತ್ತಿದ್ದಾರೆ. ಅನಾರೋಗ್ಯ, ಕಾಯಿಲೆ ಪೀಡಿತ ಜನರನ್ನು ಇಲ್ಲಿ ಹೀಗೆ ಹೊತ್ತಿಕೊಂಡೇ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿದೆ. ಇಂಥ ಸಂದರ್ಭದಲ್ಲಿ ಪಾರ್ಶ್ವ​ವಾ​ಯು​ವಿಗೆ ತುತ್ತಾ​ದ ನೂರಾ ಪೊಕ್ಕ ಗೌಡ (20) ಎಂಬವರನ್ನು ಚಿಕಿತ್ಸೆಗೆಗಾಗಿ ಅಂಕೋಲಾದ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತರಲು ಹರ ಸಾಹಸವನ್ನೇ ಪಡುವಂತಾಯಿತು.

ಯಲ್ಲಾಪುರ: ಮನೆಯಲ್ಲಿ ಬೈಯ್ತಾರೆಂದು ಕಿಡ್ನ್ಯಾಪ್‌ ಕಥೆ ಕಟ್ಟಿದ ವಿದ್ಯಾರ್ಥಿನಿ..!

ವರೀಲಬೇಣಾದಲ್ಲಿ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಕುಟುಂಬದವರು ರೋಗಿಯನ್ನು ಖುರ್ಚಿಯಲ್ಲಿ ಕೂರಿಸಿ ಜೋಲಿ ಮಾಡಿಕೊಂಡು ಕಾಡಿನ ದಟ್ಟ ಹಾದಿಯಲ್ಲಿ 7 ಕಿ.ಮೀ.ನಷ್ಟು ದೂರದ ದಾರಿಯನ್ನು 2.15 ಗಂಟೆಯಲ್ಲಿ ಸಾಗಿ ಅಂಕೋಲಾ ಪಟ್ಟಣಕ್ಕೆ ಕರೆ ತಂದರು. ಬಳಿಕ ಅಂಕೋಲಾದಲ್ಲಿ ಆ್ಯಂಬುಲೆನ್ಸ್‌ ಸಿಗದ ಕಾರಣ ಅವ​ರನ್ನು ಖಾಸಗಿ ವಾಹನ ಮಾಡಿ ಮಂಗಳೂರಿಗೆ ಕರೆದೊಯ್ಯಲಾಗಿದೆ.