Asianet Suvarna News Asianet Suvarna News

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು: ಗುರು ಹಿರಿಯರ ಸಮಕ್ಷಮದಲ್ಲಿ ನಡೆದ ಅದ್ದೂರಿ ಮದುವೆ

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು
  • ಗುರು ಹಿರಿಯರ ಸಮಕ್ಷಮದಲ್ಲಿ ನಡೆದ ಅದ್ದೂರಿ ಮದುವೆ
  • ಯಾದಗಿರಿಯಲ್ಲಿ ಅಣಕು ಮದುವೆ ಸಂಭ್ರಮ
villagers did Mock child marriage in Yadagiri akb
Author
Bangalore, First Published Jun 16, 2022, 11:01 AM IST

ವರದಿ: ಪರಶುರಾಮದ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ: ಆ ಗ್ರಾಮದಲ್ಲಿ ಗುರು ಹಿರಿಯರ ಸಮಕ್ಷಮದಲ್ಲಿಯೇ ಮಕ್ಕಳ ಮದುವೆ ಅದ್ದೂರಿಯಾಗಿ ಮಾಡಲಾಯಿತು. ಬಾಲ್ಯ ವಿವಾಹ ನಿಷೇಧವಿದ್ದರೂ ಮಕ್ಕಳ ಮದುವೆ ಹೇಗೆ ಮಾಡಲಾಯಿತು ಎಂದು ಶಾಕ್ ಆಗಬೇಡಿ. ಆ ಗ್ರಾಮದಲ್ಲಿ ಎಲ್ಲಾ ರೀತಿಯಿಂದಲೂ ನಿಜವಾದ ಮದುವೆಯಂತೆ ಅಣಕು ಮದುವೆಯನ್ನು ವೈಭವದಿಂದ ಮಾಡಲಾಗಿದೆ.

ಯಾದಗಿರಿಯಲ್ಲಿ ಸಸಿ ಹಬ್ಬ ಆಚರಿಸಿದ ಮಕ್ಕಳು

ಯಾದಗಿರಿ ಜಿಲ್ಲೆಯಲ್ಲಿ ಕಾರ ಹುಣ್ಣಿಮೆ ಮರು ದಿನ ಅಂದರೆ ಕಾರ ಹುಣ್ಣಿಮೆ ಕರಿ ದಿವಸ ಸಸಿ ಹಬ್ಬ ಆಚರಣೆ ಮಾಡುತ್ತಾರೆ. ಸಸಿ ಹಬ್ಬವನ್ನು ಮಕ್ಕಳು ಆಚರಣೆ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಒಂದು ತಿಂಗಳಿನಿಂದ ಭತ್ತ ಜೋಳ, ಸಜ್ಜೆಯ ಸಸಿಗಳನ್ನು ಬೆಳೆಸಿದಂತಹ ಮಕ್ಕಳು ಕಾರ ಹುಣ್ಣಿಮೆ ಕರಿಯ ದಿನದಂದು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಆ ಗ್ರಾಮದ ಎಲ್ಲಾ ಮನೆಗಳಿಗೆ ಹೋಗಿ, ತಮ್ಮ ಸಸಿಗಳಿಗೆ ನೀರು ಹಾಕಿಸಿಕೊಂಡು, ಸಂಜೆ ಭೋಜನ ಸವಿಯಲು ದಾನಗಳನ್ನು ತೆಗೆದುಕೊಂಡು ಬರ್ತಾರೆ. ನಂತರ ಕೆರೆಯೋ ಅಥವಾ ಬಾವಿಯ ಹತ್ತಿರ ಹೋಗಿ ಸಸಿಗಳಿಗೆ ಪೂಜೆ ಮಾಡಿ, ಬಾವಿ ಇಲ್ಲವೇ ಕೆರೆಯಲ್ಲಿ ಅಂದ್ರೆ ಗಂಗೆ(ನೀರು)ಗೆ ಸಸಿಗಳನ್ನು ಬಿಡಲಾಗುತ್ತದೆ.

ಮಕ್ಕಳ ಮದುವೆ ಪೋಷಕರ ಸಂಭ್ರಮ

ಸಸಿ ಆಡಿದ ನಂತರ ಮಕ್ಕಳ ಮದುವೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ನಿಜವಾದ ವಿವಾಹ ಮಾಡುವ ಎಲ್ಲಾ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ. ಒಂದು ಹೆಣ್ಣು ಮಗುವಿಗೆ ವರನ ಉಡಿಗೆ ತೊಡಿಸಿ ಮತ್ತೊಂದು ಹೆಣ್ಣು ಮಗುವಿಗೆ ವಧುವಿನ ಅಲಂಕಾರ ಮಾಡಿ ಗುರು ಹಿರಿಯರ ಸಮಕ್ಷಮದಲ್ಲಿಯೇ ಸಾಂಕೇತಿಕವಾಗಿ ಮಾಂಗಲ್ಯ ಕಟ್ಟಿಸಿ ವಿವಾಹ ಮಾಡಲಾಗುತ್ತದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೆಗ್ಗಣ್ಣದೊಡ್ಡಿ ಗ್ರಾಮದಲ್ಲಿ ಇಂತಹದೊಂದು ವಿಶೇಷ ಮದುವೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಸಸಿ ಹಬ್ಬ ಆಡಿದ ನಂತರ ಮಕ್ಕಳ ಅಣಕು ಮದುವೆ

ಹೆಗ್ಗಣ್ಣದೊಡ್ಡಿಯ (Heggannadodi) ಹಿರೇಮಠದಲ್ಲಿ ಅಣಕು ಮದುವೆ ಕಾರ್ಯಕ್ರಮ ನಡೆಸಲಾಯಿತು. ಮಂತ್ರ ಘೋಷದೊಂದಿಗೆ ಭಾಜ ಭಜಂತ್ರಿ ವಾದ್ಯಗಳೊಂದಿಗೆ ವಿವಾಹ ಮಾಡಲಾಯಿತು. ಶಾಂತಯ್ಯ ಹಿರೇಮಠ (Shanthayya Hiremath) ಅವರು ಅಣಕು ಮದುವೆಯ ನೇತೃತ್ವ ವಹಿಸಿದರು. ಅಣಕು ಮದುವೆಯು ಪ್ರತಿ ವರ್ಷ ಆಚರಣೆ ಮಾಡಿಕೊಂಡು ಬಂದ ಸಂಪ್ರದಾಯವಾಗಿದೆ ಅದರಂತೆ ಈ ಗ್ರಾಮದಲ್ಲಿ ಅಣಕು ಮದುವೆ ಮಾಡಲಾಯಿತು.


ಅಣಕು ಮದುವೆ, ಅದ್ದೂರಿ ಮೆರವಣಿಗೆ..!

ಅಣಕು ಮದುವೆಗೆ ಗುರು ಹಿರಿಯರು, ಮಹಿಳೆಯರು (women), ಮಕ್ಕಳು (Children) ಸಾಕ್ಷಿಯಾದರು ಮದುವೆ ನೋಡಿ ಖುಷಿಗೊಂಡರು. ಅಣಕು ಮದುವೆಯಾದವರಿಗೆ ಗ್ರಾಮದಲ್ಲಿ ಭಾಜ ಭಜಂತ್ರಿ ವಾದ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಅಕ್ಷತೆ ಹಾಕಿ ಶುಭ ಹಾರೈಸಿದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಶುಭ ಹಾರೈಕೆ ಮಾಡುವಂತೆ ಅಣಕು ಮದುವೆಯಾದ ಇವರಿಗೆ ಗ್ರಾಮಸ್ಥರು ಶುಭ ಹಾರೈಸಿದರು. ಸ್ಟೆಜ್ ಮೇಲೆ ನವದಂಪತಿ (newly marrie couple) ಜೊತೆ ಪೊಟೋ ಕ್ಲಿಕ್ಕಿಸಿಕೊಂಡು ಸಂತೋಷಗೊಂಡರು. ಮಕ್ಕಳು, ಮಹಿಳೆಯರು, ಗುರು ಹಿರಿಯರು ಹಾರೈಸಿದರು. ಅಣಕು ಮದುವೆಯ ನಂತರ  ವಿವಿಧ ಬಗೆಯ ತಿಂಡಿ, ತಿನಿಸು, ಅಡುಗೆಗಳನ್ನು ಮಾಡಲಾಗುತ್ತದೆ, ಗ್ರಾಮದ ಪ್ರತಿಯೊಬ್ಬರು ನವ ವರರಿಗೆ ಶುಭ ಹಾರೈಸಿ, ಭಕ್ಷ್ಯ ಭೋಜನ ಸವಿದು ಜನರು ಖುಷಿಪಡುತ್ತಾರೆ. ಸಸಿ ಹಬ್ಬ ಬಂದ್ರೆ ಸಾಕು ಗ್ರಾಮೀಣ ಭಾಗದ ಮಕ್ಕಳ ಹರ್ಷಕ್ಕೆ ಪಾರವೇ ಇರುವುದಿಲ್ಲ.

ಮದುವೆ ಬಂದವರಿಗೆ ಶಾಕ್..!

ಮಕ್ಕಳ ಮದುವೆ ಇದೆ, ಬಾಲ್ಯ ವಿವಾಹ ನಿಷೇಧವಿದೆ ಅದು ಹೇಗೆ ಮದ್ವೆ ಮಾಡುತ್ತಾರೆಂದು ಕೆಲವರು ತಿಳಿದುಕೊಂಡಿದ್ದರು, ಆದರೆ ಇದು ನಿಜವಾದ ಮದುವೆ ಅಲ್ಲ. ಅಣಕು ಮದುವೆ. ಪುರಾತನ ಕಾಲದಿಂದಲೂ ಸಸಿ ಹಬ್ಬದ ಪ್ರಯುಕ್ತ  ಅಣಕು ಮದುವೆ ಕಾರ್ಯಕ್ರಮ ಮಾಡುವುದು ವಿಶೇಷವಾಗಿದೆ. ಯಾದಗಿರಿ (Yadagiri) ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಅಣಕು ಮದುವೆ ಕಾರ್ಯಕ್ರಮ ನಡೆದಿದ್ದು ವಿಶೇಷವಾಗಿದೆ.

Follow Us:
Download App:
  • android
  • ios