ರಾಯಚೂರು(ಆ.01): 5-6 ಮದುವೆಗಳು ರಾಯಚೂರು ತಾಲೂಕಿನ ಗಡಿ ಭಾಗದ ತಲಮಾರಿ ಗ್ರಾಮಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಕಳೆದ ವಾರದಿಂದ ಗ್ರಾಮದಲ್ಲಿ ಐದಾರು ಮದುವೆ ಸಮಾರಂಭಗಳು ನಡೆದಿದ್ದವು.

ಇಲ್ಲಿಗೆ ಪಕ್ಕದ ಆಂಧ್ರಪ್ರದೇಶ, ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮದುವೆಗಳಿಗೆ ಭಾಗವಹಿಸಿದ್ದರು. ಇದರಿಂದ ಗ್ರಾಮದಲ್ಲಿ ಸುಮಾರು 70 ಪಾಸಿಟಿವ್‌ ಪ್ರಕರಣಗಳು ಬಂದಿವೆ. ಗ್ರಾಮದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ.

ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಆ.20ರೊಳಗೆ ಜಾರಿ: ಸಚಿವ

ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌, ಇಡೀ ಗ್ರಾಮದ ಮೇಲೆ ನಿಗಾ ಇಡಲು ವಿಶೇಷ ತಂಡವನ್ನು ರಚಿಸಿದ್ದಾರೆ. ಕೊರೋನಾ ಹೆಚ್ಚು ದೃಢಪಟ್ಟಿರುವ ಮನೆಗಳ ಅಕ್ಕಪಕ್ಕದಲ್ಲಿ ಕಟ್ಟಿಗೆಗಳನ್ನು ಬಳಸಿ ತಡೆಯೊಡ್ಡಬೇಕು, ಕೃಷಿ ಚಟುವಟಿಕೆಗಳನ್ನು ಹೊರತು ಪಡಿಸಿ, ಗ್ರಾಮದಿಂದ ಹೊರಗೆ ಹಾಗೂ ಗ್ರಾಮದೊಳಗೆ ಯಾರೂ ಕೂಡ ಪ್ರವೇಶಿಸುವಂತಿಲ್ಲ.

ವರಮಹಾಲಕ್ಷ್ಮಿ ಹಬ್ಬದಂದು ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಸಚಿವ ಸುರೇಶ್ ಕುಮಾರ್...!

ಅಡುಗೆ, ಊಟದ ವ್ಯವಸ್ಥೆ ಮಾಡಬೇಕು, ಶಾಲೆಯಲ್ಲಿ ಕಂಟ್ರೋಲ್‌ ರೋಂ ಆರಂಭಿಸಬೇಕು, ಸಂಪೂರ್ಣವಾಗಿ ಗ್ರಾಮದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಗ್ರಾಮಸ್ಥರಿಗೆ ಅಗತ್ಯವಿರುವ ದೈನಂದಿನ ದಿನಸಿ ವಸ್ತುಗಳನ್ನು ಅವರವರ ಮನೆ ಬಾಗಿಲಿಗೆ ಪೂರೈಸಬೇಕು. ಗ್ರಾಮಸ್ಥರಿಗೆ ಎನ್‌-95 ಮಾಸ್ಕ್‌, ಗ್ಲೌಸ್‌ಗಳನ್ನು ವಿತರಿಸಬೇಕು, ಮುಖ್ಯವಾಗಿ ಒಂದು ಆ್ಯಂಬುಲೆನ್ಸ್‌ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.