ರೈತ ಮಲ್ಲಪ್ಪ ರೊಟ್ಟಿ ಅವರು ಸತತ 11 ಗಂಟೆಗಳಲ್ಲಿ 18 ಎಕರೆ ಜಮೀನು ಬಿತ್ತನೆ ಮಾಡಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಗೌರವಿಸಿ, ಗ್ರಾಮಸ್ಥರು ರೈತ ದಂಪತಿಯನ್ನು ಚಕ್ಕಡಿಬಂಡಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಈ ಘಟನೆಯು ಕೃಷಿಯಿಂದ ವಿಮುಖರಾಗುತ್ತಿರುವ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ ಎಂದು ಪ್ರಗತಿಪರ ರೈತರು ಶ್ಲಾಘಿಸಿದ್ದಾರೆ.

ವಿಜಯಪುರ: ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ರೈತ ಮುಖಂಡರಾದ ಹಣಮಂತ್ರಾಯ ಮುಳಜಿ ಅವರ ಅಪೇಕ್ಷೆಯಂತೆ ಮತ್ತು ಅವರ ಆಸೆಯಂತೆ ಗ್ರಾಮದ ಅಶೋಕಗೌಡ ಪಾಟೀಲ ಅವರ ಜಮೀನಿನಲ್ಲಿ ರೈತ ಮಲ್ಲಪ್ಪ ರೊಟ್ಟಿ ಅವರು ಸತತ 11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ ಮಾಡುವುದರ ಮೂಲಕ ಸಾಧನೆ ಮಾಡಿದ್ದಾರೆ. ರೈತನ ಸಾಧನೆಗೆ ಸಂತಸಗೊಂಡ ಊರಿನ ರೈತರು ರೈತ ದಂಪತಿಯನ್ನು ಚಕ್ಕಡಿಬಂಡಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೈತರಲ್ಲಿ ಹೊಸ ಹುರುಪು

ಪ್ರಗತಿ ಪರ ರೈತ, ಪಿಕೆಪಿಎಸ್ ಅಧ್ಯಕ್ಷರಾದ ನಾಗಣ್ಣ ಮುಳಜಿ ಅವರು ರೈತ ದಂಪತಿಯನ್ನು ತಮ್ಮ ಮನೆಗೆ ಕರಿಸಿ ಬಟ್ಟೆ ಆಹೇರಿ ಮಾಡಿ ಸತ್ಕರಿಸಿದರು. ಈ ಬೇಳೆ ಮಾತನಾಡಿದ ಅವರು, ರೈತನ ಸಾಧನೆಯಿಂದ ರೈತರಲ್ಲಿ ಹೊಸ ಹುರುಪು ಮೂಡಿಸಿದೆ. ಒಕ್ಕಲುತನದಿಂದ ದೂರ ಉಳಿಯುತ್ತಿರುವ ಇಂದಿನ ದಿನದಲ್ಲಿ ಯುವ ಸಮುದಾಯಕ್ಕೆ ಇದೊಂದು ಪ್ರೆರಣೆಯಾಗಿದೆ ಎಂದರು.

ಇದನ್ನೂ ಓದಿ: ಬಡ ರೈತನ ಕೋಟ್ಯಧಿಪತಿ ಮಾಡುವ ಮೇಕೆ; ನಿತ್ಯ 5 ಲೀಟರ್ ಹಾಲು ಕೊಡುವ ಈ ವಿದೇಶಿ ತಳಿ ರೈತರ ಪಾಲಿಗೆ ಕಾಮಧೇನು!

ಈ ವೇಳೆ ಊರಿನ ರೈತರಾದ ನಿಲಕಂಠ ಬೆನಕನಹಳ್ಳಿ, ಬಸವರಾಜ ಹೊಸಮನಿ, ಮಹಾಂತೇಶ ಉಡಗಿ, ಸಿಂಧೂರ ಪೂಜಾರಿ, ಲಗಮಣ್ಣ ಪೂಜಾರಿ, ಹಣಮಂತ ಕಂಬಾರ, ಭೀಮಾಶಂಕರ ಪ್ಯಾಟಿ, ದೇವಾನಂದ್ ಬಾಗಲಕೋಟ, ಗಂಗಪ್ಪ ಇಮ್ಮನ, ಮಹಾದೇವ ಕಡ್ಲೇವಾಡ, ಸಂತೋಷ ಹಾದಿಮನಿ, ಬಾಬು ಖೋಜೀಗಿರ, ಜಟ್ಟೇಪ್ಪ ಯಳಕೋಟಿ, ಸಿದ್ದು ಕಡ್ಲೇವಾಡ, ದಾನಪ್ಪಗೌಡ ಪಾಟೀಲ, ಮಂಜುನಾಥ ಬಾಗಲಕೋಟ, ಶಶಿಕಾಂತ ಚಕ್ಕಡಿ, ದೇವಾನಂದ ಉಡಗಿ, ಸಂತೋಷ ಸಿಂದಗಿ ಸೇರಿದಂತೆ ಹಲವರು ರೈತರು ಉಪಸ್ಥಿತರಿದ್ದರು.

ಇದನ್ನೂ ಓದಿ: Haveri: ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ; ಎತ್ತುಗಳ ಖರೀದಿಗಿಲ್ಲ ಹಣ