ಹುಬ್ಬಳ್ಳಿ(ಏ.28):  ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮಂಗಳವಾರ ಕೊರೋನಾ ದೃಢಪಟ್ಟಿದೆ. 

ಹೊರಟ್ಟಿ ಅವರು ಸೋಮವಾರವಷ್ಟೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿ ಕೋವಿಡ್‌ ಪರೀಕ್ಷೆಗೊಳಗಾಗಿದ್ದರು. ಮಂಗಳವಾರ ವರದಿ ಪಾಸಿಟಿವ್‌ ಎಂದು ಬಂದಿದೆ. ವೈದ್ಯರ ಸಲಹೆ ಮೇರೆಗೆ ಅವರನ್ನು ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯವಾಗಿದ್ದಾರೆ.

ಒಂದೇ ಬೆಡ್‌ನಲ್ಲಿ ಇಬ್ಬರಿಗೆ ಚಿಕಿತ್ಸೆ : ವೈರಲ್‌

ಅವರ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆಗೊಳಗಾಗ ಬೇಕೆಂದು ಬಸವರಾಜ ಹೊರಟ್ಟಿ ಅವರ ಆಪ್ತ ಕಾರ್ಯದರ್ಶಿ ವಿಶ್ವನಾಥ ತಿಳಿಸಿದ್ದಾರೆ.