ಒಂದೇ ಬೆಡ್‌ ಮೇಲೆ ಇಬ್ಬರು ರೋಗಿಗಳಿಗೆ ಆಕ್ಸಿಜನ್‌ ಸಮೇತ ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ವಿಡಿಯೋ ವೈರಲ್‌ ಆಗಿದೆ.  ಆದರೆ, ಈ ವಿಡಿಯೋ ಬಗ್ಗೆ ಹುಬ್ಬಳ್ಳಿ ಕಿಮ್ಸ್‌ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ (ಏ.28): ನಗರದ ಕಿಮ್ಸ್‌ನಲ್ಲಿ ಒಂದೇ ಬೆಡ್‌ ಮೇಲೆ ಇಬ್ಬರು ರೋಗಿಗಳಿಗೆ ಆಕ್ಸಿಜನ್‌ ಸಮೇತ ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ವಿಡಿಯೋ ವೈರಲ್‌ ಆಗಿದೆ.

 ಆದರೆ, ಈ ವಿಡಿಯೋ ಬಗ್ಗೆ ಕಿಮ್ಸ್‌ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಳೆ ಬಿಲ್ಡಿಂಗ್‌ನ ತುರ್ತು ಚಿಕಿತ್ಸಾ ವಿಭಾಗದಲ್ಲಿ ಇಂಥದ್ದೊಂದು ಪ್ರಸಂಗ ನಡೆದಿದೆ ಎನ್ನಲಾಗಿದೆ. 

ಕೊರೋನಾ ಸೇರಿ ನಾನಾ ವಿಧಗಳಿಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಬೆಡ್‌ ಇಲ್ಲದ್ದರಿಂದ ಒಂದೇ ಬೆಡ್‌ನಲ್ಲಿ ಟ್ರೀಟ್‌ಮೆಂಟ್‌ ಕೊಡಲಾಗುತ್ತಿದೆ ಎಂದು ತಿಳಿದು ಬಂದಿದೆ. 

ಮದುವೆಗೆ ಬಂದವರ ಮೂಗಿಗೆ ನಿಂಬೆರಸ, ಉಸಿರಾಟದ ಸಮಸ್ಯೆಗೆ ರಾಮಬಾಣ..

ಈ ಪ್ರಕರಣ ನಮ್ಮಲ್ಲಿ ನಡೆದಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಅಷ್ಟಕ್ಕೂ ಈ ವಿಡಿಯೋ ನಮ್ಮದೇ ಆಸ್ಪತ್ರೆಯದ್ದೇ ಎಂಬುದರ ಬಗ್ಗೆ ಅನುಮಾನ ಇದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್‌ ಅನುಮಾನ ವ್ಯಕ್ತಪಡಿಸಿದ್ದಾರೆ.