Asianet Suvarna News Asianet Suvarna News

ಜಾತಿ- ಧರ್ಮ ಮೀರಿ ಸಮಾಜಕ್ಕೆ ಶ್ರಮಿಸಿದ ಪೇಜಾವರ ಶ್ರೀ: ವೆಂಕಯ್ಯ ನಾಯ್ಡು

ಕೃಷ್ಣನ ಅನನ್ಯ ಭಕ್ತರಾಗಿದ್ದ ಪೇಜಾವರ ಸ್ವಾಮೀಜಿ ಅವರೊಂದಿಗೆ ನನ್ನದು 30 ವರ್ಷಗಳ ಒಡನಾಟವಿತ್ತು. ಅವರ ನಿಗರ್ಮನ ನನಗೆ ಅತೀವ ನೋವು ತಂದಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸ್ಮರಿಸಿದ್ದಾರೆ.

vice president Venkaiah Naidu visits Vrindavan of pejawar sri
Author
Bangalore, First Published Jan 8, 2020, 11:09 AM IST

ಬೆಂಗಳೂರು(ಜ.08): ವಿಶ್ವೇಶತೀರ್ಥ ಸ್ವಾಮೀಜಿ ಸಮಾಜದ ಎಲ್ಲಾ ಜಾತಿ ಮತ್ತು ಸಮುದಾಯವನ್ನು ಮೀರಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸ್ಮರಿಸಿದ್ದಾರೆ.

ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿರುವ ಸ್ವಾಮೀಜಿ ಬೃಂದಾವನಕ್ಕೆ ಮಂಗಳವಾರ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕೃಷ್ಣನ ಅನನ್ಯ ಭಕ್ತರಾಗಿದ್ದ ಪೇಜಾವರ ಸ್ವಾಮೀಜಿ ಅವರೊಂದಿಗೆ ನನ್ನದು 30 ವರ್ಷಗಳ ಒಡನಾಟವಿತ್ತು. ಅವರ ನಿಗರ್ಮನ ನನಗೆ ಅತೀವ ನೋವು ತಂದಿದೆ ಎಂದಿದ್ದಾರೆ.

ಮೈಸೂರಿನ ಇಡ್ಲಿ, ಸಾಂಬಾರ್‌, ಉಪ್ಪಿಟ್ಟು ಕೂಡ 2022ರಲ್ಲಿ ಅಂತರಿಕ್ಷಕ್ಕೆ!

ಜ್ಞಾನಿಗಳು, ಮಹಾನ್‌ ಸಂತರೂ ಆಗಿದ್ದ ಸ್ವಾಮೀಜಿ ಅವರು ಅಪ್ರತಿಮ ದೇಶಭಕ್ತನಾಗಿದ್ದರು. ಅವರ ನಿರ್ಗಮನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ನಾವೆಲ್ಲರೂ ಅವರ ಆದರ್ಶಗಳನ್ನು ಪರಿಪಾಲನೆ ಮಾಡುವುದೇ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದ್ದಾರೆ.

ಬೃಂದಾವನಕ್ಕೆ ಭೇಟಿ ನೀಡುವ ಮುನ್ನ ವೆಂಕಯ್ಯನಾಯ್ಡು ಅವರು ವಿದ್ಯಾಪೀಠದಲ್ಲಿರುವ ಕೃಷ್ಣ, ಮಧ್ವಾಚಾರ್ಯ ಹಾಗೂ ರಾಘವೇಂದ್ರಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಸ್ವಾಮೀಜ ಅವರ ಬೃಂದಾವನಕ್ಕೆ ಪುಷ್ಪನಮನ ಸಲ್ಲಿಸಿ ಭಕ್ತಿ ಪೂರ್ವಕವಾಗಿ ನಮಿಸಿದ್ದಾರೆ.

JNU ದಾಳಿಯ ಹಿಂದೆ ಮೋದಿ, ಶಾ ಕೈವಾಡ: ಖಂಡ್ರೆ

ಈ ವೇಳೆ ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ, ವಿದ್ಯಾಪೀಠದ ವ್ಯವಸ್ಥಾಪಕರಾದ ಕೇಶವಾಚಾರ್ಯ ಹಾಗೂ ಮಠದ ವಿದ್ವಾಂಸರು ಉಪಸ್ಥಿತರಿದ್ದರು.

Follow Us:
Download App:
  • android
  • ios