ಬೆಳಗಾವಿ(ಡಿ.21): ನಗರದ ಹಿರಿಯ ಪತ್ರಕರ್ತ ಹಾಗೂ ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ(78)ಇಂದು(ಸೋಮವಾರ) ಬೆಳಿಗ್ಗೆ ನಿಧನಹೊಂದಿದ್ದಾರೆ. 

ವಾಕಿಂಗ್ ಮುಗಿಸಿ ಭಾಗ್ಯ ನಗರದ ಮನೆಗೆ ಮರಳುತ್ತಲೇ ರಾಘವೇಂದ್ರ ಜೋಶಿ ಕುಸಿದು ಬಿದ್ದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.  ರಾಘವೇಂದ್ರ ಜೋಶಿ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

‘ಸಿಎಂ 2 ದಿನದಲ್ಲಿ ಸಿಹಿಸುದ್ದಿ ಎಂದಿದ್ದರು, ಏನಾಯ್ತೋ’

ಇಂದು ಸಂಜೆ 5 ಗಂಟೆಗೆ ಹಿಂದವಾಡಿಯ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ.