ಧಾರವಾಡ: ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ ಇನ್ನಿಲ್ಲ

ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ ನಿಧನ| ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಜನಿಸಿದ ಡಾ.ಜಿ.ಎಸ್.ಆಮೂರ| ಇತ್ತೀಚೆಗಷ್ಟೇ ನೃಪತುಂಗ ಪ್ರಶಸ್ತಿಗೆ ಭಾಜನರಾಗಿದ್ದ ಡಾ.ಜಿ.ಎಸ್.ಆಮೂರ| 

Veteran Critic Writer Dr G S Amur Passed Away

ಧಾರವಾಡ(ಸೆ.28): ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ (95) ಅವರು ಇಂದು(ಸೋಮವಾರ) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅಮೂರ ಅವರು ನಗರದ ಸ್ವಗೃಹದಲ್ಲಿ ಇಂದು ಬೆಳಗಿನ ಜಾವ 5 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ. 

ಡಾ.ಜಿ.ಎಸ್.ಆಮೂರ ಅವರು ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದವರಾಗಿದ್ದಾರೆ. 1925ರಲ್ಲಿ ಜನಿಸಿದ ಡಾ.ಜಿ.ಎಸ್.ಆಮೂರ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ, ಮುಂಬೈ ವಿವಿಯಲ್ಲಿ ಎಂಎ ಇಂಗ್ಲಿಷ್ ಪದವಿ ಪಡೆದಿದ್ದರು. 1964ರಿಂದ ಗದಗ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 1985ರಲ್ಲಿ ನಿವೃತ್ತಿ ಹೊಂದಿದ್ದರು. 

ಪತಿ ಅಗಲಿದ ನೋವು ಸಹಿಸಲಾಗದೆ ಮಡದಿ ಕೂಡ ಸಾವು: ಸಾವಿನಲ್ಲೂ ಒಂದಾದ ಆದರ್ಶ ದಂಪತಿ

ನಿವೃತ್ತಿ ಬಳಿಕ ಡಾ.ಜಿ.ಎಸ್.ಆಮೂರ ಅವರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ವಿಮರ್ಶಕರಾಗಿ ಸೇವೆ ಸಲ್ಲಿಸಿದ್ದರು. ಆಮೂರರ ಸಾಹಿತ್ಯ ಸಾಧನೆಗಾಗಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಇತ್ತೀಚೆಗಷ್ಟೇ ಡಾ.ಜಿ.ಎಸ್.ಆಮೂರ ಅವರು ನೃಪತುಂಗ ಪ್ರಶಸ್ತಿಗೆ ಭಾಜನರಾಗಿದ್ದರು.  ಡಾ.ಜಿ.ಎಸ್.ಆಮೂರ ಅವರ ನಿಧನಕ್ಕೆ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು ಸಂತಾಪ ಸೂಚಿಸಿದ್ದಾರೆ. 
 

Latest Videos
Follow Us:
Download App:
  • android
  • ios