ವೀರಶೈವ ಮುಖಂಡರÜ ಮೇಲೆ ಶಾಸಕರ ಬೆಂಬಲಿಗರೆನ್ನಲಾದ ಗುಂಪೊಂದು ಹಲ್ಲೆ ನಡೆಸಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವೀರಶೈವ ಸಮಾಜದ ನೂರಾರು ಜನರು ಪೋಲೀಸ್‌ ಠಾಣೆ ಎದುರು ಧರಣಿ ನಡೆಸಿದ ಘಟನೆ ಶನಿವಾರ ನಡೆಯಿತು.

ಹೊಸದುರ್ಗ (ಡಿ.11) : ವೀರಶೈವ ಮುಖಂಡರÜ ಮೇಲೆ ಶಾಸಕರ ಬೆಂಬಲಿಗರೆನ್ನಲಾದ ಗುಂಪೊಂದು ಹಲ್ಲೆ ನಡೆಸಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವೀರಶೈವ ಸಮಾಜದ ನೂರಾರು ಜನರು ಪೋಲೀಸ್‌ ಠಾಣೆ ಎದುರು ಧರಣಿ ನಡೆಸಿದ ಘಟನೆ ಶನಿವಾರ ನಡೆಯಿತು.

ಮುಖಂಡರ ಮೇಲೆಯೇ ದೊಣ್ಣೆ, ಕಲ್ಲು, ಕಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದರೆ ಹೊಸದುರ್ಗ ಪಿಎಸ್‌ಐ ಫೈಜುಲ್ಲಾ ಆಯ್ತು ನೋಡೋಣ ಎಂದು ಹೇಳಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ತಾಲೂಕಿನಲ್ಲಿ ಇತ್ತೀಚಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಾಡು ಹಗಲೇ ಕೊಲೆ, ಹಲ್ಲೆ, ಸುಲಿಗೆಗಳು ನಡೆಯುತ್ತಿದ್ದರೂ ಪೊಲೀಸರು ಏನೂ ನಡೆದೆ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ನಾವು ಧರಣಿ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಠಾಣೆ ಮುಂದೆ ಮಳೆ ನಡುವೆಯೇ ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ನಡೆಸಿದರು. ನಂತರ ಎಸ್ಪಿ ಮನವಿ ಮಾಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆದರು.

ಮಸೀದಿ ಸಂಘರ್ಷ: ಹಿಂದೂಗಳಿಂದ ಶ್ರೀರಂಗಪಟ್ಟಣದಲ್ಲಿ ಭಾರಿ ಪ್ರತಿಭಟನೆ

ಏನಾಯ್ತು?:

ಪಟ್ಟಣದ ವಾರ್ಡ್‌ 1ರಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಪುರಸಭೆ ಮಾಜಿ ಸದಸ್ಯ ಹಾಗೂ ವೀರಶೈವ ಸಮಾಜದ ಮುಖಂಡರಾದ ಷೃಷಬೇಂದ್ರಯ್ಯ ಹಾಗೂ ಬಿಜೆಪಿ ಮುಖಂಡ ರಂಗೇಶ್‌ ಎಂಬುವರು ಕಾಮಗಾರಿ ಕೆಲಸ ಮಾಡುವವರ ಬಳಿ ಬಂದು ವಿಚಾರಿಸಿದ್ದಾರೆ. ಇದಕ್ಕೆ ಕೆಲಸಗಾರರು ಇದನ್ನೆಲ್ಲಾ ಕೇಳಲು ನಿವ್ಯಾರು ಎಂದು ಏರು ಧ್ವನಿಯಲ್ಲಿ ಪೃಶ್ನಿಸಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ನಂತರ ವೃಷಬೇಂದ್ರಯ್ಯ ಹಾಗೂ ರಂಗೇಶ್‌ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿ ನಂತರ ಮತ್ತೋರ್ವ ವೀರಶೈವ ಹಾಗೂ ಬಿಜೆಪಿ ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ್‌ ಅಂಗಡಿಯಲ್ಲಿ ಹಲವು ಮುಖಂಡರು ಸಭೆ ಮಾಡುತ್ತಿದ್ದ ವೇಳೆ ನಾಲ್ಕಾರು ಜನರ ಗುಂಪೊಂದು ಬ್ಯಾಟು, ದೊಣ್ಣೆ, ಕಲ್ಲು ಹಿಡಿದು ಬಂದು ಹಲ್ಲೆ ಮಾಡಿದ್ದಾರೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದು ವೈರಲ್‌ ಆಗಿದೆ.

ಹಲ್ಲೆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ತಾಲೂಕಿನಾದ್ಯಂತ ನೂರಾರು ವೀರಶೈವ ಸಮಾಜ ಬಾಂಧವರು ಠಾಣೆ ಬಳಿ ಜಮಾಯಿಸಿದ್ದಾರೆ. ಇದರಿಂದ ಠಾಣೆ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್‌.ಪಿ. ಕುಮಾರಸ್ವಾಮಿ, ಡಿವೈಸ್‌ಪಿ ರೋಷನ್‌ ಜಮೀರ್‌ ಭೇಟಿ ನೀಡಿದ್ದು ಹಲ್ಲೆ ನಡೆಸಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಮುಖಂರಾದ ಕೆ.ಎಸ್‌. ಕಲ್ಮಠ್‌, ರಾಗಿ ಶಿವಮೂರ್ತಿ, ಹೆಬ್ಬಳ್ಳಿ ಓಂಕಾರಪ್ಪ, ರಂಗೇಶ್‌ ಮುಂತಾದವರು ನೇತೃತ್ವ ವಹಿಸಿದ್ದರು.

ಡಿ.19ಕ್ಕೆ ಮೀಸಲಾತಿ ಘೋಷಿಸದಿದ್ದರೆ, 22ಕ್ಕೆ ಸುವರ್ಣ ಸೌಧ ಮುತ್ತಿಗೆ: ಬೊಮ್ಮಾಯಿ ಸರ್ಕಾರಕ್ಕೆ ಕೂಡಲ ಶ್ರೀ ಎಚ್ಚರಿಕೆ

ಹಲ್ಲೆ ಮಾಡಿದವರನ್ನು ಕೂಡಲೆ ಬಂಧಿಸಿ ಅವರ ವಿರುದ್ಧ ರೌಡಿಶೀಟರ್‌ ಕೇಸ್‌ ಓಪನ್‌ ಮಾಡುತ್ತೇವೆ. ನಾವು ಕಾನೂನು ರೀತಿಯಲ್ಲಿ ಕೆಲಸ ಮಾಡಲಿಕ್ಕೆ ಇದ್ದೇವೆ. ಕಾನೂನು ಸುವ್ಯವಸ್ಥೆ ಹದೆಗೆಡಿಸುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ನಮ್ಮ ಮೇಲೆ ವಿಶ್ವಾಸವಿಡಿ

-ಎಸ್‌ಪಿ ಕೆ. ಪರಶುರಾಮ್‌