Asianet Suvarna News Asianet Suvarna News

ಮಹದಾಯಿ ಯಾರಿಗೂ ಬೇಡದ ಕೂಸು ಅನ್ನುವಂತೆ ರಾಜಕೀಯ ಪಕ್ಷಗಳು ಮಾಡ್ತಿವೆ: ವಿರೇಶ ಸೊಬರದಮಠ

*  ಮಹದಾಯಿ ಯೋಜನೆಯನ್ನ‌ ಜೀವಂತವಾಗಿ ಇಟ್ಟುಕ್ಕೊಂಡು ಹೋಗಬೇಕಿದೆ
*  ರಾಜಕೀಯ ವಿಷಯವಾಗಿ ಮಹದಾಯಿ ಹೋರಾಟವನ್ನ ನೆನೆಗುದಿಗೆ ಕೆಡುವುತ್ತಿದ್ದಾರೆ
*  ರಾಜ್ಯದ ಸಂಸದರು, ಶಾಸಕರುಗಳಿಗೆ ಮಹದಾಯಿ ಯೋಜನೆಯ ಜಾರಿಯ ಬಗ್ಗೆ ಇಚ್ಚಾಶಕ್ತಿ ಇಲ್ಲ 
 

Veeresh Sobaradamatha Slams on Political Parties grg
Author
Bengaluru, First Published Apr 29, 2022, 11:25 AM IST

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ಏ.29):  ಕೇಂದ್ರಹಾಗೂ ರಾಜ್ಯ ಸರ್ಕಾರಗಳು ಮಹದಾಯಿ(Mahadayi) ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಬರಬೇಕಾದ ನೀರನ್ನ ತಗೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಮ್ಮ‌ ಸಂಸದರುಗಳಿಗೆ ಇಚ್ಚಾಶಕ್ತಿ ಇಲ್ಲದೆ ಇರೋದಕ್ಕೆ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಬರಲು ಆಗುತ್ತಿಲ್ಲ ಎಂದು ಕಳಸಾ ಬಂಡೂರಿ ಹೋರಾಟಗಾರ ವಿರೇಶ ಸೊಬರದಮಠ(Veeresh Sobaradamatha) ಗಂಭೀರವಾಗಿ ಆರೋಪಿಸಿದ್ದಾರೆ.

ಇಂದು(ಶುಕ್ರವಾರ) ಧಾರವಾಡದ(Dharwad) ಸರ್ಕಿಟ್ ಹೌಸ್‌ನಲ್ಲಿ ಮಾತನಾಡಿದ ಅವರು, ಸದ್ಯ ಸುಪ್ರಿಂಕೋರ್ಟ್‌ನಲ್ಲಿ(Supreme Court) ಪಿಐಎಲ್ ಹಾಕಿದ್ದಾರೆ. ಕರ್ನಾಟಕ ನಿರಾವರಿ ನಿಗಮದ ಕೇಂದ್ರ ಕಚೇರಿ ಧಾರವಾಡ ಜಿಲ್ಲೆಯಲ್ಲಿದೆ. ಮಹದಾಯಿ ಹೋರಾಟಕ್ಕೆ ನಾವು ಹಗಲು ರಾತ್ರಿ ಹೋರಾಟವನ್ನ ಮಾಡುತ್ತಾ ಬಂದಿದ್ದೇವೆ. ಸುಪ್ರಿಂಕೋರ್ಟ್‌ 2019 ರಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು ಅಂತ ಕೇಂದ್ರ ಸರ್ಕಾರಕ್ಕೆ(Central Government) ಆದೇಶ ಮಾಡಿದೆ. ತದನಂತರ ಗೆಜೆಟ್ ಕೂಡಾ ಆಗಿದೆ ಅಂತ ತಿಳಿಸಿದ್ದಾರೆ. 

Congress ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದೆ: ಹುಬ್ಬಳ್ಳಿ ಕೈ ಜಿಲ್ಲಾಧ್ಯಾಕ್ಷ!

ಪಶ್ಚಿಮ ಘಟ್ಟಗಳಲ್ಲಿ(Western Ghats) 57,000 ಚದರ ಮೀಟರ್ ಪ್ರದೇಶವನ್ನ ಈಗಾಗಲೇ ಕಾಯ್ದಿರಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಪರಿಸರ ಇಲಾಖೆಗೆ ಹಸ್ತಾಂತರ ಮಾಡಬೇಕು. ಆ ಜಾಗವನ್ನ‌ ಬೆಳಗಾವಿ ಜಿಲ್ಲಾಧಿಕಾರಿಗಳು ಮತ್ತಿ ನಿರಾವರಿ ಇಲಾಖೆಯ ಅಧಿಕಾರಿಗಳು ಆ ಗುರುತಿಸಿದ್ದಾರೆ. ಆ ಜಾಗವನ್ನ ಡಿಸಿ ಅವರು ಕೇಂದ್ರಕ್ಕೆ ಕೊಟ್ಟರೆ ಸಿಡಬ್ಲುಸಿ ಅವರಿಂದ ಅನುಮತಿ ಸಿಗುತ್ತೆ. 2020ರಲ್ಲಿ ಪರವಾಣಿಗೆಯನ್ನ ಕೊಟ್ಟಿದ್ದರು. ಬಳಿಕ ಮತ್ತೆ ಕೊಟ್ಟ ಪರವಾಣಿಗೆಯನ್ನ ಮರಳಿ ಪಡೆದುಕ್ಕೊಂಡಿದೆ. ಸಿಡಬ್ಲುಸಿ(CWC) ಅವರು ಪರವಾಣಿಗೆ ಕೊಟ್ಟು ಮರಳಿ ಪಡೆಯಲಿಕ್ಕೆ ರಾಜ್ಯದ ಸಂಸದರು ಮತ್ತು ಶಾಸಕರುಗಳಿಗೆ ಮಹದಾಯಿ ಯೋಜನೆಯ ಜಾರಿಯ ಬಗ್ಗೆ ಇಚ್ಚಾಶಕ್ತಿ ಇಲ್ಲ ಎಂದು ಮಹದಾಯಿ ಹೋರಾಟಗಾರ ವಿರೇಶ ಸೊಬರದಮಠ ಅವರು ಆರೋಪವನ್ನ ಮಾಡಿದ್ದಾರೆ. 

ನಾನು ಸುಪ್ರಿಂಕೋರ್ಟ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ(Government of Karnataka) ಮನವಿ ಮಾಡಿದ್ದೇನೆ. ನಮಗೆ ಕೊಟ್ಟಿದ್ದ ನಾಲ್ಕು ಟಿಎಂಸಿ ನೀರು ಮಾತ್ರ 5 ವರೆ ಟಿಎಂಸಿ ನೀರಲ್ಲಿ ಒಂದೂವರೆ ಟಿಎಂಸಿ ನೀರನ್ನ ಕಳಸಾದಿಂದ ಮಲಪ್ರಭಾ ನದಿಗೆ ಹೋಗುವ ಐದುವರೆ ಕಿಮಿ ಪೈಪ್ ಲೈನ್ ಇರುವ ಕಣಕುಂಬಿ ಭಾಗದ ರೈತರು ಬಳಕೆ ಮಾಡಿಕ್ಕೊಳ್ಳಬೇಕು ಇನ್ನುಳಿದ 4 ಟಿಎಂಸಿ ನೀರನ್ನ‌ ಬಂಡೂರು ಮತ್ತು ಕಳಸಾದಿಂದ ತೆಗೆದುಕ್ಕೊಳಬೇಕು ಎಂದು ಆದೇಶ ಇದೆ. ಸಿಡಬ್ಲುಸಿ ಅವರು ಪರವಾಣಿಗೆ ಕೊಟ್ಟಿದ್ದನ್ನ ಮತ್ತೆ ರಾಜ್ಯ ಸರ್ಕಾರಕ್ಕೆ‌ಆದೇಶ ಮಾಡಿಸಿದ್ದಾರೆ. ಈಗಿರುವ ಮೂರು ಪಕ್ಷದವರು ಮಹದಾಯಿ ಯೋಜನೆ ವಿಳಂಬ ಮಾಡುತ್ತಿದ್ದಾರೆ. ಸಿಡಬ್ಲುಸಿಗೆ ದಾಖಲಾತಿಗಳನ್ನ ಸರಿಯಾಗಿ ಸರ್ಕಾರ ಕೊಟ್ಟಿಲ್ಲ ಇದರಲ್ಲಿ ರಾಜ್ಯ ಸರ್ಕಾರದ ತಪ್ಪಿದೆ ಅಂತ ದೂರಿದ್ದಾರೆ.

ಅಜಯ್‌ ದೇವಗನ್‌ ವಿವಾದ: ‘ಹಿಂದಿ ರಾಷ್ಟ್ರ ಭಾಷೆ’ ಅಲ್ಲ, ಕನ್ನಡಿಗರ ಗರ್ಜನೆ

ಮಹದಾಯಿ ಯೋಜನೆಯನ್ನ‌ ಜೀವಂತವಾಗಿ ಇಟ್ಟುಕ್ಕೊಂಡು ಹೋಗಬೇಕಿದೆ. ಇದು ಯಾರಿಗೂ ಬೇಡಾದ ಕೂಸು ಅನ್ನುವಂತೆ ಎಲ್ಲ ರಾಜಕೀಯ ಪಕ್ಷಗಳು ಮಾಡುತ್ತಿವೆ. ರಾಜಕೀಯ(Politcs) ವಿಷಯವಾಗಿ ಮಹದಾಯಿ ಹೋರಾಟವನ್ನ ನೆನೆಗುದಿಗೆ ಕೆಡುವುತ್ತಿದ್ದಾರೆ ಅಂತ ಹೇಳಿದ್ದಾರೆ. 

24-2- 2022 ರಂದು ನಾನು ದಾಖಲೇಗಳ ಸಮೇತ ಪಿಐಎಲ್ ಹಾಕಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸುಪ್ರಿಂಕೋರ್ಟ್‌ ಆದೇಶ ಮಾಡಬೇಕಿದೆ. ಆದಷ್ಟೂ ಬೇಗ ನಮಗೆ ಬೇಕಾದ ನೀರನ್ನ ಸಂಸದರು ಕೇಂದ್ರ ಸರ್ಕಾರದ ಮುಂದೆ ದ್ವನಿ ಎತ್ತಬೇಕು ಅಂತ ಕಳಸಾ ಬಂಡೂರಿ ಹೋರಾಟಗಾರ ವಿರೇಶ ಸೊಬರದಮಠ ತಿಳಿಸಿದ್ದಾರೆ. 
 

Follow Us:
Download App:
  • android
  • ios