Belagavi: ಲಕ್ಷ ಬಿಲ್ವಪತ್ರೆ ಸಸಿ ಸಂಕಲ್ಪ ಪೂರ್ಣಗೊಳಿಸಿದ ವೀರೇಶ ಬಸಯ್ಯ ಹಿರೇಮಠ
ಪೂಜೆಯ ಶ್ರೇಷ್ಠತೆ ಹಾಗೂ ಪೂರ್ಣತೆಗೆ ಬಿಲ್ವಪತ್ರೆಗೆ ಅಗ್ರಸ್ಥಾನ. ಆದರೆ, ಬಿಲ್ವಪತ್ರೆ ಮರಗಳು ಕಾಣಸಿಗದಂತಾಗಿದೆ. ಈ ನಿಟ್ಟಿನಲ್ಲಿ ಗಡಿನಾಡು ಬೆಳಗಾವಿಯ ಸಮಾಜಸೇವಕರೊಬ್ಬರು ಬಿಲ್ವಪತ್ರೆಯ ಮರ ಉಳಿಸಿ, ಬೆಳೆಸುವ ಪವಿತ್ರ ಕಾರ್ಯವನ್ನು ಕಳೆದ ದಶಕದಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾಡುತ್ತಿದ್ದಾರೆ.
ಬೆಳಗಾವಿ (ಜು.28): ಪೂಜೆಯ ಶ್ರೇಷ್ಠತೆ ಹಾಗೂ ಪೂರ್ಣತೆಗೆ ಬಿಲ್ವಪತ್ರೆಗೆ ಅಗ್ರಸ್ಥಾನ. ಆದರೆ, ಬಿಲ್ವಪತ್ರೆ ಮರಗಳು ಕಾಣಸಿಗದಂತಾಗಿದೆ. ಈ ನಿಟ್ಟಿನಲ್ಲಿ ಗಡಿನಾಡು ಬೆಳಗಾವಿಯ ಸಮಾಜಸೇವಕರೊಬ್ಬರು ಬಿಲ್ವಪತ್ರೆಯ ಮರ ಉಳಿಸಿ, ಬೆಳೆಸುವ ಪವಿತ್ರ ಕಾರ್ಯವನ್ನು ಕಳೆದ ದಶಕದಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾಡುತ್ತಿದ್ದಾರೆ. ಬೆಳಗಾವಿ ತಾಲೂಕಿನ ರಾಜಹಂಸಗಡದ ನಿವಾಸಿ, ಸಮಾಜ ಸೇವಕ, ಪರಿಸರವಾದಿಯಾದ ವೀರೇಶ ಬಸಯ್ಯ ಹಿರೇಮಠ ಎಂಬುವರೇ ಬಿಲ್ವಪತ್ರೆ ಗಿಡ ಉಳಿಸಿ, ಬೆಳೆಸುವ ಅಭಿಯಾನ ನಡೆಸುತ್ತ ಬರುತ್ತಿದ್ದು, ಲಕ್ಷ ಬಿಲ್ವಪತ್ರೆಯ ಸಸಿಗಳನ್ನು ನೆಡುವ ಸಂಕಲ್ಪ ಸಾಕಾರಗೊಳಿಸಿದ್ದಾರೆ.
ಹಿಂದೂ ಧರ್ಮದ ಪ್ರಕಾರ ಶಿವಲಿಂಗ ಪೂಜೆಗೆ ಬಿಲ್ವಪತ್ರೆ ಶ್ರೇಷ್ಠ, ಒಂದು ಬಿಲ್ವದ ಸಸಿ ನೆಟ್ಟರೆ ಕೋಟಿ ಗಿಡ ನೆಟ್ಟಂತೆ. ಅಷ್ಟೊಂದು ಶ್ರೇಷ್ಠವಾಗಿರುವ ಬಿಲ್ವಪತ್ರೆ ಸಸಿಗಳನ್ನು ನೆಡುವ ಹವ್ಯಾಸ ಬೆಳೆಸಿಕೊಂಡು ಬಿಲ್ವಪತ್ರೆ ಗಿಡ ಉಳಿಸಿ, ಬೆಳೆಸುವ ಅಭಿಯಾನ ಯಶಸ್ವಿಯಾಗಿಸಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಸಿಗಳನ್ನು ನೆಡುವುದು ಮಾತ್ರವಲ್ಲ, ಅದರ ರಕ್ಷಣೆಗೂ ಅವರು ಮುಂದಾಗಿದ್ದಾರೆ. ಈವರೆಗೆ 1008 ಮಠ-ಮಾನ್ಯಗಳನ್ನು ಸಂಪರ್ಕ ಸಾಧಿಸಿದ್ದಲ್ಲದೇ ಸಸಿಗಳನ್ನು ಸ್ವಂತ ವೆಚ್ಚದಲ್ಲಿ ಸರಬರಾಜು ಮಾಡಿದ್ದಾರೆ. ಖಾನಾಪುರ ಅರಣ್ಯ ಪ್ರದೇಶ, ಬೈಲಹೊಂಗಲ, ಬೆಳಗಾವಿ ನಗರ, ಗೋಕಾಕ, ಬೈಲಹೊಂಗಲ, ಹುಕ್ಕೇರಿ, ಹಾವೇರಿ, ಮುತ್ನಾಳ ಹೀಗೆ ಮತ್ತಿತರ ಭಾಗದ ಜನತೆಗೆ ಬಿಲ್ವಪತ್ರೆ ಸಸಿಗಳನ್ನು ಪೂರೈಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ಭಾಗದ ಸುತ್ತಲೂ ಕೂಡ ಬಿಲ್ಪಪತ್ರೆ ಸಸಿಯನ್ನು ಉಚಿತವಾಗಿ ನೀಡಿದ್ದಾರೆ.
‘ಗೃಹಲಕ್ಷ್ಮಿ’ಗೆ ದುಡ್ಡು ಪಡೆದರೆ ಕ್ರಿಮಿನಲ್ ಕೇಸ್: ಸಚಿವೆ ಲಕ್ಷ್ಮಿ
ಬಿಲ್ವಪತ್ರೆಯಲ್ಲಿವೆ ಔಷಧೀಯ ಗುಣಗಳು: ಶಿವನಿಗೆ ಮೂರು ಕಣ್ಣುಗಳಿರುವಂತೆ ಬಿಲ್ವಪತ್ರೆಯಲ್ಲಿಯೂ ಮೂರು ಎಲೆಗಳಿರುವುದರಿಂದ ಶಿವನ ಪ್ರತೀಕ ಎಂಬುವುದು ಆಧ್ಯಾತ್ಮಿಕತೆಯ ನಂಬಿಕೆ ಸಾಂಪ್ರದಾಯಿಕವಾಗಿ ಮುಂದುವರೆದಿದೆ. ಕೇವಲ ಅಧ್ಯಾತ್ಮ ನಂಬಿಕೆ ಅಷ್ಟೆ ಅಲ್ಲಾ, ವೈಜ್ಞಾನಿಕವಾಗಿಯೂ ನಂಬಲೇ ಬೇಕಾದ ಕೆಲವು ಔಷಧಿಯ ಗುಣಗಳು ಬಿಲ್ವಪತ್ರೆಯಲ್ಲಿವೆ. ಔಷಧೀಯ ಗುಣಗಳಿಂದ ಕೂಡಿದ ಬಿಲ್ವದ ಎಲೆಗಳಲ್ಲಿ ಟ್ಯಾನಿನ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮ್ಯಾಗ್ನೇಶಿಯಂ ಮುಂತಾದ ರಾಸಾಯನಿಕಗಳು ಕಂಡು ಬರುತ್ತವೆ. ಬಿಲ್ವದ ಎಲೆಗಳು ದೃಷ್ಟಿ ಹೆಚ್ಚಿಸಲು, ಹೊಟ್ಟೆಯ ಹುಳುಗಳನ್ನು ಕೊಲ್ಲಲು ಮತ್ತು ಕ್ಯಾನ್ಸರ್ ತಡೆಗಟ್ಟುವಲ್ಲಿ ಬಹಳ ಉಪಯುಕ್ತವಾಗಿವೆ. ಬಿಲ್ವಪತ್ರೆ ಹಾಗೂ ಬಿಲ್ವದ ಹಣ್ಣಿನ ಬಳಕೆಯಿಂದ ಮಲಬದ್ಧತೆ ಹಾಗೂ ಅತಿಸಾರ, ಹಸಿವು ಹೆಚ್ಚಿಸಲು, ಸಂಧಿವಾತ, ಜಠರ ಹುಣ್ಣು, ಮಧುಮೇಹ, ಗ್ಯಾಸ್ಟ್ರಿಕ್ ಅಲ್ಸರ್ ನಿವಾರಣೆಗೆ ಉಪಯುಕ್ತವಾಗಿವೆ.
ಬಿಲ್ವಪತ್ರೆ ಸಸಿಗಾಗಿ ಕರೆ ಮಾಡಿ: ಬಿಲ್ವಪತ್ರೆ ಸಸಿಗಳ ಲಭ್ಯತೆ ಮತ್ತು ಅವುಗಳ ಸಮರ್ಪಕ ಉಪಯೋಗದ ಕುರಿತು ಮಾಹಿತಿ ಈಗ ಮಠಾಧೀಶರು ಹಾಗೂ ಸಾರ್ವಜನಿಕರಿಗೆ ಗೊತ್ತಾಗಿದೆ. ಬಿಲ್ವಪತ್ರೆ ಸಸಿ ಬೇಕಿದ್ದರೆ ಮೊ.9481404055 ಸಂಪರ್ಕಿಸಿ.
ಸರ್ಕಾರ ಪತನ ತಂತ್ರ ನಿಜವಿರಬಹುದು: ಸಚಿವ ಸತೀಶ್ ಜಾರಕಿಹೊಳಿ
ಒಂದು ಬಿಲ್ವಪತ್ರೆ ಸಸಿ ನೆಟ್ಟರೇ ಕೋಟಿ ಗಿಡ ನೆಟ್ಟಂತೆ. ನಾನೀಗ 1 ಲಕ್ಷ ಬಿಲ್ವಪತ್ರೆ ಸಸಿ ನೆಟ್ಟಿದ್ದೇನೆ. 10 ವರ್ಷದಲ್ಲಿ 1 ಲಕ್ಷ ಬಿಲ್ವಪತ್ರೆ ಸಸಿನೆಡುವ ಸಂಕಲ್ಪ ಪೂರ್ಣಗೊಂಡಿದೆ. ಜನರ ಬೇಡಿಕೆಗೆ ತಕ್ಕಂತೆ ನಾನೂ ಸಸಿ ಪೂರೈಸುತ್ತೇನೆ. ಮಠ-ಮಂದಿರಗಳ ಆವರಣದಲ್ಲಿ ಬಿಲ್ವಪತ್ರೆ ಸಸಿ ನೆಟ್ಟು ಭಕ್ತ ಸಮರ್ಪಿಸುತ್ತೇನೆ. ಬಿಲ್ಪಪತ್ರೆ ಗಿಡ ದಿನದ 24 ಗಂಟೆ ಕಾಲ ಪ್ರಾಣವಾಯು ಕೊಡುತ್ತದೆ. ಇದು ದೇವರ ವೃಕ್ಷ. ಹಾಗಾಗಿ, ಯಾರೂ ಈ ಮರ ಕಡಿಯುವುದಿಲ್ಲ, ಕಡೆಯಬಾರದು. ಸ್ವಂತ ಖರ್ಚಿನಿಂದ ತೆರಳಿ, ಸ್ವತಃ ಸಸಿ ನೆಟ್ಟು ಬರುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ.
-ವೀರೇಶ ಬಸಯ್ಯ ಹಿರೇಮಠ, ಬಿಲ್ವಪತ್ರೆ ಗಿಡ ಉಳಿಸಿ, ಬೆಳೆಸುವ ಅಭಿಯಾನದ ರೂವಾರಿ