ಬೀರು ಬೇಸಿಗೆಯ ಸುಡು ಪ್ರಭಾವ ಇಡಿ ರಾಜ್ಯವನ್ನು ಕಾಡುತ್ತಿದೆ. ಈ ನಡುವೆ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿಯೂ ನೀರಿನ ಅಭಾವ ಕಂಡುಬಂದಿದೆ.
ಮಂಗಳೂರು[ಮೇ. 17] ಭಕ್ತಾದಿಗಳೆ ನಿಮ್ಮ ಧರ್ಮಸ್ಥಳ ಪ್ರವಾಸವನ್ನು ದಯವಿಟ್ಟು ಒಂದು ತಿಂಗಳು ಕಾಲ ಮುಂದಕ್ಕೆ ಹಾಕಿ... ಹೌದು.. ಹೀಗೆಂದು ಸ್ವತಃ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ನಲ್ಲಿ ಹೆಗ್ಗಡೆಯವರ ಜೀವನ
ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಲಭ್ಯ ಇಲ್ಲ . ಸದ್ಯಕ್ಕೆ ಧರ್ಮಸ್ಥಳ ಪ್ರವಾಸ ಮುಂದೂಡಬೇಕು. ನೇತ್ರಾವತಿ ನದಿಯಲ್ಲಿ ಹರಿವು ಕಡಿಮೆಯಾಗಿದ್ದು ನೀರಿಲ್ಲ. ಹಾಗಾಗಿ ಪ್ರವಾಸ ಮುಂದಕ್ಕೆ ಹಾಕಿ ಎಂದು ಮಾಧ್ಯಮ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.


