ಮೈಸೂರು(ಡಿ.01): ರಾಜ್ಯಾದ್ಯಂತ ಬಿಜೆಪಿ ಬೆಂಬಲಿಸಲು ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಧಾರ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಮತಗಳಿದ್ದು, ವಿಶ್ವನಾಥ್‌ ಗೆಲುವಿಗೆ ಮಹಾಸಭಾದ ಈ ನಿರ್ಧಾರ ಸಹಕಾರ ನೀಡಲಿದೆ.

ವಿಶ್ವನಾಥ್ ಪರ ಮತಕ್ಕೆ ಠರಾವು ಪಾಸ್ ಮಾಡಿದ ವೀರಶೈವ ಸಮುದಾಯ ಹುಣಸೂರಲ್ಲಿ ಬಿಜೆಪಿಯ ವೀರಶೈವ ಸಮುದಾಯದ ಮುಖಂಡರ ಸಭೆ ನಡೆಸಲಾಗಿದೆ. ಸಭೆಯಲ್ಲಿ ನೂರಾರು ಮಂದು ಸಮುದಾಯ ಬಾಂಧವರು ಮುಖಂಡರು ಭಾಗಿಯಾಗಿದ್ದಾರೆ.

ರಾಜ್ಯದಲ್ಲಿ ಡಿಸೆಂಬರ್ 5ರವರೆಗೆ ಮಾತ್ರ ಬಿಜೆಪಿ ಸರ್ಕಾರ : BK ಹರಿಪ್ರಸಾದ್

ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಜೆಪಿಯ ವಿಶ್ವನಾಥ್ ಗೆಲುವಿನ ರಣತಂತ್ರ ಹೆಣೆಯಲು ಸಮುದಾಯದ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್ ವಿರುದ್ಧ ವೀರಶೈವ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.

ಹುಣಸೂರಿನ ವೀರಶೈವ ಲಿಂಗಾಯಿತ ಮತ ಒಗ್ಗೂಡಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ವೀರಶೈವ ಲಿಂಗಾಯಿತ ಎಂದು ಒಡೆಯುವ ಸಮೀಕ್ಷೆ ಮಾಡಿಸಿದ್ದ ಸಿದ್ದರಾಮಯ್ಯ ಅವರಿಗೆ ಹಾಗೂ ಪಕ್ಷಕ್ಕೆ ನಾವು ಬುದ್ದಿ ಕಲಿಸಬೇಕು. ಯಡಿಯೂರಪ್ಪರು ಗೆಲ್ಲಬೇಕಾದರೆ ಇಲ್ಲಿಂದ ವಿಶ್ವನಾಥ್ ಅವರನ್ನು ಗೆಲ್ಲಿಸಬೇಕು ಎಂದು ಸಭೆಯಲ್ಲಿ ವೀರಶೈವ ಸಮುದಾಯದ ಮುಖಂಡರ ಮನವಿ ಮಾಡಿದ್ದಾರೆ.

ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ಮತ ಬೇಟೆ

ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್,  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಮಹದೇವ ಪ್ರಸಾದ್, ವಿಶ್ವನಾಥ್ ಪುತ್ರ ಅಮಿತ್ ವೀರಶೈವ ಸಮುದಾಯದ ಮುಖಂಡ ತೋಟದಾರ್ಯ, ಮಲ್ಲೇಶ್ ಭಾಗಿಯಾಗಿದ್ದಾರೆ.