Asianet Suvarna News Asianet Suvarna News

ಡಿ.24 ರಿಂದ ದಾವಣಗೆರೆಯಲ್ಲಿ ವೀರಶೈವ-ಲಿಂಗಾಯತ ಮಹಾಸಭೆ: ಅಥಣಿ ವೀರಣ್ಣ

ಮಹಾಸಭಾದ 23 ನೇ ಅಧಿವೇಶನ ಮೂರು ದಿನಗಳ ಕಾಲ ನಡೆಯಲಿದೆ. 

Veerashaiva Lingayat Mahasabha will Be Held on December 24th in Davanagere grg
Author
First Published Nov 16, 2022, 9:57 PM IST | Last Updated Nov 16, 2022, 9:57 PM IST

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ

ದಾವಣಗೆರೆ(ನ.16):  ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಡಿ. 24 ರಿಂದ 26 ವರೆಗೆ ನಡೆಯುವ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 23 ನೇ ಅಧಿವೇಶನದಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ಎಸ್. ವೀರಣ್ಣ ತಿಳಿಸಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, 2011ರಲ್ಲಿ ಮೈಸೂರಿನಲ್ಲಿ 22  ಅಧಿವೇಶನ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಬಹಳ ಅದ್ಧೂರಿಯಾಗಿ ನಡೆದಿತ್ತು. ಈ ಹಿಂದೆ ಬೆಳಗಾವಿ, ಬೀದರ್‌ನಲ್ಲೂ ಅಧಿವೇಶನ ವಿಜೃಂಭಣೆಯಿಂದ ನಡೆದಿತ್ತು. ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಅಧಿವೇಶನವನ್ನು ಹಿಂದೆ ನಡೆದಿರಬಾರದು. ಮುಂದೆಯೂ ನಡೆಯದಂತೆ ಅತ್ಯಂತ ವಿಜೃಂಭಣೆ, ಯಶಸ್ವಿಯಾಗಿ, ಅದ್ಧೂರಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.

KARNATAKA ASSEMBLY POLLS: ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್‌ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಕಣಕ್ಕೆ

ಮಹಾಸಭಾದ 23 ನೇ ಅಧಿವೇಶನದ ಯಶಸ್ವಿಗಾಗಿ ಸ್ವಾಗತ, ವೇದಿಕೆ, ಊಟೋಪಚಾರ ಇತರೆ ಸಮಿತಿಗಳ ರಚಿಸಿ, ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ಅಧಿವೇಶನಕ್ಕೆ ಬಂದಂತಹವರಿಗೆ ವಸತಿಗಾಗಿ ಹೋಟೆಲ್, ಕಾಲೇಜು ಕ್ಯಾಂಪಸ್ ಇತರೆ ಆಯ್ಕೆ ಮಾಡಲಾಗುವುದು. ಎಂಬಿಎ ಕಾಲೇಜು ಮೈದಾನದಲ್ಲಿ ಕೃಷಿ, ಆಟೋಮೊಬೈಲ್  ಇತರೆ ವಸ್ತು ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಲಾಗುವುದು. ಅಧಿವೇಶನದ ಮೊದಲ ದಿನ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ಅದ್ಧೂರಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕಳೆದ ಐದು ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ  ವೀರಶೈವರು- ಲಿಂಗಾಯತರು ಬೇರೆ ಬೇರೆ ಎಂದು ಕೇಳಿ ಬಂದಾಗ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಪಕ್ಷಕ್ಕಿಂತಲೂ ಸಮಾಜ ಮೊದಲು ಎಂದು  ವೀರಶೈವ- ಲಿಂಗಾಯತ ಒಂದೇ ಎಂಬ ಹೇಳಿಕೆಗೆ ಗಟ್ಟಿಯಾಗಿ ನಿಂತಿದ್ದರು. ಇದರಿಂದ ಧರ್ಮ ಹೋಳಾಗುವುದು ತಪ್ಪಿತು ಏನೇನು ಆಗಲಿಲ್ಲ. ಶಾಮನೂರು ಇಲ್ಲದೇ  ಹೋಗಿದ್ದರೇ ವೀರಶೈವರು- ಲಿಂಗಾಯತರು ಏನೇನೋ ಆಗಿ ಹೋಗಿಯೇ ಬಿಡುತ್ತಿತ್ತು. ಶಾಮನೂರು ಶಿವಶಂಕರಪ್ಪ ಅವರು ತಮ್ಮ ಹೇಳಿಕೆಗೆ ಗಟ್ಟಿಯಾಗಿ ನಿಂತಿದ್ದನ್ನು ಕಂಡು ಅನೇಕರು ಅಕ್ಷರಶಃ ದಂಗಾಗಿ ಹೋದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಸಮಾಜದ ವಿಷಯವಾಗಿ ಶಾಮನೂರು ಶಿವಶಂಕರಪ್ಪ ಅವರ ನಿರ್ಧಾರ, ನಿರ್ಣಯಕ್ಕೆ ಬೆಂಬಲ ಇದೆ ಎಂದು ಸಹಕಾರ ನೀಡಿದರು ಎಂದು ಸ್ಮರಿಸಿದರು.

Smart City Davanagere :ಚಂದಾ ಎತ್ತಿ ರಸ್ತೆಗುಂಡಿಗೆ ಮುಕ್ತಿ ಕೊಡುತ್ತಿರುವ ಸಾಮಾಜಿಕ ಕಾರ್ಯಕರ್ತರು

ಮಹಾಸಭಾದ ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಮಾತನಾಡಿ, ಮಹಾಸಭಾದ 23 ನೇ ಅಧಿವೇಶನ ಮೂರು ದಿನಗಳ ಕಾಲ ನಡೆಯಲಿದೆ. ಮೊದಲ ದಿನ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವೆ ಮೆರವಣಿಗೆ ನಂತರ ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿವೇಶನ ಉದ್ಘಾಟಿಸುವರು. ನಾಡಿನ ಅನೇಕ ಹರ-ಚರಮೂರ್ತಿಗಳು ಭಾಗವಹಿಸುವರು ಎಂದು ತಿಳಿಸಿದರು. ಅಧಿವೇಶನದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಯುವ, ಮಹಿಳಾ, ಸಾಂಸ್ಕೃತಿಕ, ಪರಂಪರೆ ಇತರೆ ವಿಷಯಗಳ ಗೋಷ್ಠಿಗಳಿರುತ್ತವೆ. ಸ್ಮರಣ ಸಂಚಿಕೆ ಬಿಡುಗಡೆ ಹೊರ ತರಲಾಗುವುದು. ಪುಸ್ತಕ, ಮಹಾಸಭೆ ಇತಿಹಾಸ, ಕಾರ್ಯ ಚಟುವಟಿಕೆ ಪರಿಚಯಿಸುವ ಪ್ರದರ್ಶನ, ನಾಟಕ, ವಚನ ಗಾಯನ, ನೃತ್ಯ ರೂಪಕ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ ಎಂದು ತಿಳಿಸಿದರು.

ಅಧಿವೇಶನದಲ್ಲಿ ಆಗಮಿಸುವ ಮಹಾಸಭಾದ ಎಲ್ಲ ಸದಸ್ಯರು, ವಿವಿಧ ಘಟಕ, ವಿಭಾಗಗಳ ಅಧ್ಯಕ್ಷರು, ಸಮಿತಿ ಸದಸ್ಯರು, ಪದಾಧಿಕಾರಿಗಳು, ಸಮಾಜ ಬಂಧುಗಳು ಕಡ್ಡಾಯವಾಗಿ 500 ರೂಪಾಯಿ ಶುಲ್ಕದೊಂದಿಗೆ ಡಿ. 12 ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳುವವರಿಗೆ  https://apply.veerashaivamahasabha.in ವಿಳಾಸ ನೀಡಲಾಗಿದೆ.
 

Latest Videos
Follow Us:
Download App:
  • android
  • ios