ಹನೂರು (ಆ.20) : ದಂತಚೋರ ವೀರಪ್ಪನ್ ನೊಂದಿಗೆ ಪಾಲಾರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿ ಜೀವವಧಿ ಶಿಕ್ಷೆ ಅನುಭವಿಸುತ್ತಿದ್ದ ಬಿಲವೇಂದ್ರನ್(70) ಮೈಸೂರಿನ‌ ಕೆ.ಆರ್.ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ತಾಲೂಕಿನ ಮಾರ್ಟಳ್ಳಿ ಗ್ರಾಮದ ಬಿಲವೇಂದ್ರನ್  ಗಲ್ಲು ಶಿಕ್ಷೆಯಿಂದ ಪಾರಾಗಿ ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.

5 ವರ್ಷದ ಲವ್ ನಂತರ ಕಿಡ್ನಾಪ್, ತಾಳಿ ಕಟ್ಟುವ ಮುನ್ನ!

ಇದೀಗ ಅನಾರೋಗ್ಯದಿಂದ ಬಿಲವೇಂದ್ರ ಸಾವಿಗೀಡಾಗಿದ್ದಾರೆ. ವೀರಪ್ಪನ್ ಜೊತೆಗೆ ಗುರುತಿಸಿಕೊಂಡು ಅನೇಕ ಕುಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದರು.

ಜೈಲಿನಲ್ಲಿ ಪ್ರಜ್ಞೆ ತಪ್ಪಿದ ಹಿನ್ನೆಲೆ ಅಪರಾಧಿಯನ್ನು ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಿಲವೇಂದ್ರನ್ ಸಾವಿಗೀಡಾಗಿದ್ದಾರೆ.