ಮಂಗಳೂರು(ಜೂ 03): ಬೆಂಗಳೂರಿನಲ್ಲಿ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ಇರಿಸುವ ವಿಚಾರ ವಿವಾದಕ್ಕೆ ತಿರುಗಿರುವಂತೆಯೇ ಮಂಗಳೂರಿನಲ್ಲಿ ಮಂಗಳವಾರ ಹಠಾತ್ತನೆ ಸಾವರ್ಕರ್‌ ಹೆಸರು ಸುದ್ದಿಯಾಗಿದೆ.

ಕಿಡಿಗೇಡಿಗಳು ನಗರದ ಪಂಪ್‌ವೆಲ್‌ ಮೇಲ್ಸೇತುವೆಗೆ ದಿಢೀರ್‌ ಆಗಿ ವೀರ ಸಾವರ್ಕರ್‌ ಹೆಸರಿರುವ ಬ್ಯಾನರ್‌ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಚರ್ಚೆಗೆ ಕಾರಣವಾಗಿದೆ. ಇದು ಕೈ ಪಾಳಯದಲ್ಲಿ ಅಚ್ಚರಿ ಮೂಡಿಸಿದೆ. ಈ ಹಿಂದೆ 10 ವರ್ಷ ವರೆಗೆ ನಡೆದ ಕಾಮಗಾರಿಯಿಂದಾಗಿ ಪಂಪ್‌ವೆಲ್‌ ಮೇಲ್ಸೇತುವೆ ಸುದ್ದಿಯಾಗಿತ್ತು.

ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ ಬಾಂಬ್!

ಯಲಹಂಕ ಮೇಲ್ಸೇತುವೆ ಉದ್ಘಾಟನೆಯನ್ನು ಬಿಬಿಎಂಪಿ ಮುಂದೂಡಿದೆ. ಮೇ.28ಕ್ಕೆ ಮೇಲ್ಸೇತುವೆ ವೀರ್ ಸಾವರ್ಕರ್ ಹೆಸರಿಟ್ಟು ಉದ್ಘಾಟನೆ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು.

ನೆಹರೂ, ಇಂದಿರಾಗೆ OK ಎಂದ ಕಾಂಗ್ರೆಸ್, ಸಾವರ್ಕರ್‌ ಹೆಸರಿಗೆ ವಿರೋಧ; ಇಲ್ಲಿದೆ ಕಾರಣ!

ಆದರೆ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರು, ವೀರ್ ಸಾವರ್ಕರ್ ಹೆಸರಿಡಲು ವಿರೋಧಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು.