ತಲಕಾವೇರಿಯಲ್ಲಿ 1000 ವರ್ಷದ ಶಿವಲಿಂಗ ಭಗ್ನ : ವಿಸರ್ಜನೆಗೆ ಮನವಿ

ತಲಕಾವೇರಿಯಲ್ಲಿ 1000 ವರ್ಷಗಳಷ್ಟು ಹಳೆಯ ಶಿವಲಿಂಗ ಮೂರು ಭಾಗವಾಗಿ ಒಡೆದು ಭಗ್ನವಾಗಿದ್ದು ಇದನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲು ಮನವಿ ಮಾಡಲಾಗಿದೆ.

Veena achayya appeal for talacauvery shivalinga immershan snr

ಮಡಿಕೇರಿ (ಸೆ.30): ತಲಕಾವೇರಿ ದೇವಾಲಯದಲ್ಲಿರುವ ಶಿವಲಿಂಗ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಭಗ್ನ ಶಿವಲಿಂಗವನ್ನು ವಿಸರ್ಜನೆ ಮಾಡುವಂತೆ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸದನದಲ್ಲಿ ಇತ್ತೀಚೆಗೆ ವಿಷಯ ಪ್ರಸ್ತಾಪಿಸಿರುವ ಅವರು, 2002ರಲ್ಲಿ ಜೀರ್ಣೋದ್ಧಾರ ವೇಳೆ ಶಿವಲಿಂಗ ಭಗ್ನವಾಗಿತ್ತು. ಬಳಿಕ ಗರ್ಭಗುಡಿಯಲ್ಲಿ ಹುದುಗಿಸಲಾಗಿತ್ತು. ಅದರ ಮೇಲೆ ಹೊಸದಾಗಿ ಶಿವಲಿಂಗ ಪ್ರತಿಷ್ಠಾಪಿಸಲಾಗಿತ್ತು. ಅಷ್ಟಮಂಗಲ ಪ್ರಶ್ನೆಯಲ್ಲಿ ತಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ಶಿವಲಿಂಗವನ್ನು ಹೊರತೆಗೆದಿದ್ದ ಸಮಿತಿ ಬಳಿಕ ಅದನ್ನು ಪೂಂಪ್‌ಹಾರ್‌ನಲ್ಲಿ ವಿಸರ್ಜನೆಗೆ ಮುಂದಾಗಿತ್ತು. ವಿಸರ್ಜನೆ ಮಾಡದಂತೆ ಕೆಲವರು ಹೈಕೋರ್ಟ್‌ಗೆ ಮೊರೆ ಹೋಗಿದ್ದು, ವಿಸರ್ಜಿಸದಂತೆ ಕಳೆದ ವರ್ಷ ಹೈಕೋರ್ಟ್‌ ತಡೆ ನೀಡಿತ್ತು.

ಮೃತ ತಲಕಾವೇರಿ ಅರ್ಚಕರ ವಿರುದ್ಧ ಗಂಭೀರ ಆರೋಪ : ಕುಟುಂಬ ಹೇಳೋದೆ ಬೇರೆ

ಈಗ ಸದನದಲ್ಲಿ ವಿಚಾರ ಪ್ರಸ್ತಾಪಿಸಿದ ವೀಣಾ ಅಚ್ಚಯ್ಯ, ಲಿಂಗವನ್ನು ಶಾಸೊತ್ರೕಕ್ತವಾಗಿ ವಿಸರ್ಜನೆ ಮಾಡಲು ಕ್ರಮ ಕೈಗೊಳ್ಳಿ ಎಂದು ಮುಜರಾಯಿ ಸಚಿವರಿಗೆ ಮನವಿ ಮಾಡಿದ್ದಾರೆ.

ಅಗಸ್ತ್ಯ ಮುನಿಗಳೇ ಪ್ರತಿಷ್ಟಾಪನೆ ಮಾಡಿದ್ದರೆನ್ನಲಾಗುವ ಲಿಂಗಕ್ಕೆ 1000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. 5 ಅಡಿ ಎತ್ತರದ ಶಿವಲಿಂಗ ಮೂರು ಭಾಗವಾಗಿದೆ.

Latest Videos
Follow Us:
Download App:
  • android
  • ios